Karnataka Politics: ಬೆಳಗ್ಗೆ ವಿವಾದ, ಸಂಜೆ ಯೂಟರ್ನ್‌; ಜನರಲ್ ಆಗಿ ಹೇಳಿದೆ ಅಷ್ಟೇ ಎಂದ ಸಚಿವ ರಾಮಲಿಂಗಾರೆಡ್ಡಿ


 ರಾಮಲಿಂಗಾ ರೆಡ್ಡಿ, ಸಚಿವಶಿವಮೊಗ್ಗ ಘಟನೆಯಲ್ಲಿ ಯಾರೇ ತಪ್ಪು ಮಾಡಿದರು ಕ್ರಮ ತೆಗೆದುಕೊಳ್ಳಲಿ. ಬಿಜೆಪಿ ವೇಷ ಮರೆಸಿ ಮಾಡುತ್ತೆ ಅಂದಿದ್ದು ಹಳೆಯ ಘಟನೆಗಳ ಬಗ್ಗೆ. ಶಿವಮೊಗ್ಗ ಮತ್ತು ನನ್ನ ಹೇಳಿಕೆಗೆ ಯಾವುದೇ ಸಂಬಂಧ ಇಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.ಬೆಂಗಳೂರು: ಶಿವಮೊಗ್ಗದ (Shivamogga) ರಾಗಿಗುಡ್ಡ ಗಲಭೆ ಪ್ರಕರಣ (Ragigudda Riot Case) ಬಗ್ಗೆ ಹೇಳಿದ್ದ ವಿವಾದಾತ್ಮಕ ಹೇಳಿಕೆ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ (Minister Ramalingareddy) ಯೂಟರ್ನ್‌ ಹೊಡೆದಿದ್ದಾರೆ. ಬಿಜೆಪಿ ಕಾರ್ಯಕರ್ತರೇ ವೇಷ, ಹೆಸರು ಬದಲಿಸಿಕೊಂಡು ಕಿಡಿಗೇಡಿತನ ಮಾಡ್ತಾರೆ, ಇದು ಅವರ ಹುಟ್ಟುಗುಣ, ರಕ್ತದಲ್ಲೇ ಬಂದಿದೆ ಅಂತ ಬೆಳಗ್ಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದರು. ಯಾವಾಗ ಮಾತು ವಿವಾದದ ಸ್ವರೂಪ ಪಡೆಯಿತೋ ನಂತರ ಸಂಜೆ ವೇಳೆಗೆ ಮಂಗಳೂರಿನಲ್ಲಿ (Mangaluru) ಮಾತನಾಡಿರುವ ರಾಮಲಿಂಗಾ ರೆಡ್ಡಿ ಯೂಟರ್ನ್‌ (Uturn ) ಹೊಡೆದಿದ್ದಾರೆ. ನಾನು ಆ ರೀತಿ ಹೇಳಿಲ್ಲ, ಶಿವಮೊಗ್ಗದಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ಆಗಲಿ ಅಂದಿದ್ದೆ ಅಂತ ಜಾರಿಕೊಂಡಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಯನ್ನ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸಮರ್ಥಿಸಿಕೊಂಡಿದ್ದಾರೆ. ರಾಮಲಿಂಗಾರೆಡ್ಡಿ ಅನುಭವದ ಆಧಾರದ ಮೇಲೆ ಹೇಳಿದ್ದಾರೆ. ಈ ಹಿಂದೆ ಅವರು ಗೃಹಸಚಿವರಾಗಿದ್ದವರು, ಗೊತ್ತಿರುತ್ತೆ ಅಂತಾ ಹೇಳಿದ್ದಾರೆ.ಇದನ್ನೂ ಓದಿ: Lokayukta: ಲಂಚ ಸ್ವೀಕರಿಸೋ ವೇಳೆ ರೆಡ್ಹ್ಯಾಂಡ್ ಆಗಿ ಲೋಕಾಯುಕ್ತ ಬೆಲೆಗೆ ಬಿದ್ದ ಅಧಿಕಾರಿಗಳು; ಪ್ರತ್ಯೇಕ ಪ್ರಕರಣದಲ್ಲಿ ಮೂವರು ಅರೆಸ್ಟ್!ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರಬರುತ್ತೆ’

 ಮಂಗಳೂರು ಏರ್ಪೋರ್ಟ್ನಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆ ರೀತಿ ನಾನು ಹೇಳಿಲ್ಲ, ಶಿವಮೊಗ್ಗದಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ಆಗಲಿ. ಬಿಜೆಪಿಯವರು ಜನರಲ್ ಆಗಿ ಯಾವ ರೀತಿ ಮಾಡ್ತಾರೆ ಅಂತ ಹೇಳಿದ್ದೆ ಅಷ್ಟೇ. ನಾನು ಶಿವಮೊಗ್ಗ ಘಟನೆ ಆಧರಿಸಿ ಈ ರೀತಿ ಹೇಳಿಲ್ಲ, ಅವರು ಸಾಮಾನ್ಯವಾಗಿ ಆ ರೀತಿ ಮಾಡ್ತಾರೆ ಅಂದಿದ್ದೆ. ಶಿವಮೊಗ್ಗ ಘಟನೆಯಲ್ಲಿ ಯಾರೇ ತಪ್ಪು ಮಾಡಿದರು ಕ್ರಮ ತೆಗೆದುಕೊಳ್ಳಲಿ. ಬಿಜೆಪಿ ವೇಷ ಮರೆಸಿ ಮಾಡುತ್ತೆ ಅಂದಿದ್ದು ಹಳೆಯ ಘಟನೆಗಳ ಬಗ್ಗೆ. ಶಿವಮೊಗ್ಗ ಮತ್ತು ನನ್ನ ಹೇಳಿಕೆಗೆ ಯಾವುದೇ ಸಂಬಂಧ ಇಲ್ಲ. ಕಾನೂನಿನಿಗಿಂತ ದೊಡ್ಡವರು ಯಾರೂ ಇಲ್ಲ, ತಪ್ಪು ಮಾಡಿದವರ ಮೇಲೆ ಕ್ರಮ ಆಗಲಿ. ಹಿಂದೆ ಪುಲಿಕೇಶಿ ನಗರ ಗಲಾಟೆಯಲ್ಲೂ ನಾನು ಅದೇ ಹೇಳಿದ್ದೆ, ನಾನು ಗೃಹಮಂತ್ರಿ ಆಗಿದ್ದವನು, ನನಗೆ ಕಾನೂನು ಗೊತ್ತಿಲ್ವಾ? ರೈತರು, ಕನ್ನಡಪರ ಹೋರಾಟಗಾರು ಹಾಗೂ ಸಾರ್ವಜನಿಕ ಹಿತಾಸಕ್ತಿ ಹೋರಾಟಗಾರರ ಕೇಸ್ ವಾಪಾಸ್ ಪಡೆಯುತ್ತೇವೆ ಎಂದು ಹೇಳಿದರು.

Post a Comment

Previous Post Next Post