ಬಸನಗೌಡ ಪಾಟೀಲ್ ಯತ್ನಾಳ್- ಸಿದ್ದರಾಮಯ್ಯ
CM Siddaramaiah: ಕಾಂಗ್ರೆಸ್ ಸರ್ಕಾರದಲ್ಲಿ ಸರಿಯಾಗಿ ಆಡಳಿತ ನಡೆಯುತ್ತಿಲ್ಲ. ಕೆಲ ಕಾಂಗ್ರೆಸ್ ಶಾಸಕರ ಅಸಮಾಧಾನ ಸ್ಫೋಟದಿಂದ ಸಿದ್ದರಾಮಯ್ಯ ತಮ್ಮದೇ ಹಾದಿಯಲ್ಲಿ ಹೋಗುತ್ತಿದ್ದಾರೆ ಎಂದರು.ಯಾದಗಿರಿ: ಸಿಎಂ ಸಿದ್ದರಾಮಯ್ಯ (CM Siddaramaiah) ಪರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BJP MLA Basanagowda Patil Yatnal) ಬ್ಯಾಟ್ ಬೀಸಿದ್ದಾರೆ. ಯಾವ ಡಿಕೆ ಶಿವಕುಮಾರ್ (DCM DK Shivakumar), ಶಾಮನೂರು ಶಿವಶಂಕರಪ್ಪಗೆ (Shamanuru Shivashankarappa) ನೀವು ಹೆದರಬೇಡಿ ಎಂದು ಸಿಎಂಗೆ ಯತ್ನಾಳ್ ಹೇಳಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಯತ್ನಾಳ್, ಲಿಂಗಾಯತ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದರು. ಲಿಂಗಾಯತ (Lingayat), ಕುರುಬ (Kuruba) ಸಿಎಂ ಅಂತಾ ಮಾತನಾಡೋದು ಮೂರ್ಖತನವಾಗುತ್ತದೆ. ನಾವು ಜಾತಿ ಮೇಲೆ ಮಾತನಾಡಬಾರದು ಎಂದು ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ತಿರುಗೇಟು ಮಾಡಿದ್ದಾರೆ. ಯಾರು ಸಮರ್ಥವಾಗಿ ಕೆಲಸ ಮಾಡ್ತಾರೋ ಅವರು ಮುಖ್ಯಮಂತ್ರಿಗಳು ಆಗ್ತಾರೆ. ಆದ್ರೆ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಕುರ್ಚಿಯಿಂದ ಇಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ವಿಷಯವನ್ನು ಹೇಳಿದರು.ಕಾಂಗ್ರೆಸ್ ಶಾಸಕರಲ್ಲಿಯೇ ಅಸಮಾಧಾನಕಾಂಗ್ರೆಸ್ ಶಾಸಕರು ತಮ್ಮ ಅಸಮಾಧಾನವನ್ನು ಹೊರ ಹಾಕುವ ಮೂಲಕ ಸಿದ್ದರಾಮಯ್ಯನವರಿಗೆ ಕೆಲಸ ಮಾಡಲು ಬಿಡುತ್ತಿಲ್ಲ. ಈ ಮೂಲಕ ಕಾಂಗ್ರೆಸ್ ಸರ್ಕಾರದಲ್ಲಿ ಸರಿಯಾಗಿ ಆಡಳಿತ ನಡೆಯುತ್ತಿಲ್ಲ. ಕೆಲ ಕಾಂಗ್ರೆಸ್ ಶಾಸಕರ ಅಸಮಾಧಾನ ಸ್ಫೋಟದಿಂದ ಸಿದ್ದರಾಮಯ್ಯ ತಮ್ಮದೇ ಹಾದಿಯಲ್ಲಿ ಹೋಗುತ್ತಿದ್ದಾರೆ ಎಂದರು.ಧೈರ್ಯದಿಂದ ನಿರ್ಣಯ ತೆಗೆದುಕೊಳ್ಳಿಕರ್ನಾಟಕದ ಜನರು 135 ಸ್ಥಾನಗಳನ್ನು ನೀಡಿ ಸಿದ್ದರಾಮಯ್ಯನವರಿಗೆ ಆಶೀರ್ವಾದ ಮಾಡಿದ್ದಾರೆ. ಆದ್ದರಿಂದ ಒಳ್ಳೆಯ ಆಡಳಿತ ನೀಡಿ ಧೈರ್ಯದಿಂದ ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಪರ ನಿಂತರು. ಮದ್ಯದಂಗಡಿಗಳ ಅನುಮತಿಗೆ ಯತ್ನಾಳ್ ವಿರೋಧರಾಜ್ಯ ಸರ್ಕಾರದ ಬೊಕ್ಕಸ ಖಾಲಿಗಿರೋ ಕಾರಣ ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡಲು ಮುಂದಾಗಿದೆ. ಐದು ಗ್ಯಾರಂಟಿ ನಡೆಸಲು ಆರು ತಿಂಗಳಿಗೆ ಅಂದಾಜಜು 56 ಕೋಟಿ ರೂಪಾಯಿ ಬೇಕಾಗುತ್ತದೆ. ಈ ಗ್ಯಾರಂಟಿ ಯೋಜನೆಗಳ ಉಚಿತವಾಗಿ ನೀಡಲಾಗುತ್ತಿರುವ ಅಕ್ಕಿ, ಫ್ರೀ ಬಸ್, ವಿದ್ಯುತ್ ಹಣವನ್ನು ಮದ್ಯದಂಗಡಿಗಳ ಮೂಲಕ ವಾಪಸ್ ತೆಗೆದುಕೊಳ್ಳಲಾಗುತ್ತಿದೆ.ಇದನ್ನೂ ಓದಿ: BJP-JDS Alliance: ಅಂದು ಹೆಚ್ಡಿಕೆ, ಇಂದು ಇಬ್ರಾಹಿಂ; ವಿಷಕಂಠನಾಗಿದ್ದೇನೆ ಎಂದ ಜೆಡಿಎಸ್ ರಾಜ್ಯಾಧ್ಯಕ್ಷಗ್ರಾಮೀಣ ಸಂಸ್ಕೃತಿ ನಾಶಬೊಕ್ಕಸ ಭರ್ತಿಗಾಗಿ ಹಳ್ಳಿಗಳಲ್ಲಿಯೂ ಮದ್ಯದಂಗಡಿ ತೆರೆಯಲು ಅನುಮತಿ ನೀಡುವ ಮೂಲಕ ದೇಶದ ಗ್ರಾಮೀಣ ಸಂಸ್ಕೃತಿಯನ್ನು ಹಾಳು ಮಾಡಲಾಗುತ್ತಿದೆ. ಸರ್ಕಾರದ ಈ ನಿರ್ಧಾರಕ್ಕೆ ನಮ್ಮ ವಿರೋಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Post a Comment