ಮೈಸೂರು ದಸರಾ
ಅಕ್ಟೋಬರ್ 13 ರಂದು ಬೆಳಿಗ್ಗೆ 8 ಗಂಟೆಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಚಾಮುಂಡಿ ಬೆಟ್ಟ ಚಲೋಗೆ ಕರೆಕೊಟ್ಟಿದ್ದಾರೆ. 5000ಕ್ಕೂ ಹೆಚ್ಚು ಜನ ಮಹಿಷ ದಸರಾ ನಿಲ್ಲಿಸಲು ಚಾಮುಂಡಿಬೆಟ್ಟ ಚಲೋಗೆ ಕರೆಕೊಟ್ಟಿದ್ದಾರೆ.ಮೈಸೂರು: ಅರಮನೆ ನಗರಿ ಮೈಸೂರಲ್ಲಿ (Mysuru) ವಿಶ್ವವಿಖ್ಯಾತ ದಸರಾ (Dasara) ರಂಗು. ಒಂದ್ಕಡೆ ಅಂತಿಮ ಹಂತದ ಗಜಪಡೆ ತಾಲೀಮು, ಇನ್ನೊಂದ್ಕಡೆ ಸಿಂಗಾರಗೊಳ್ತಿರೋ ಅರಮನೆ (Palace). ಈ ಮಧ್ಯೆ ಮಹಿಷ ದಸರಾ ಹೆಸರಲ್ಲಿ ಕಾಂಗ್ರೆಸ್-ಬಿಜೆಪಿ (Congress Vs BJP) ಜಟಾಪಟಿ ಶುರು ಮಾಡಿವೆ. ಚಾಮುಂಡಿಬೆಟ್ಟಕ್ಕೆ ಹೋದರೆ ಮೊದಲು ಮಹಿಷಾಸುರ ಕಣ್ಣಿಗೆ ಬೀಳ್ತಾನೆ. ಚಾಮುಂಡೇಶ್ವರಿ (Chamundeshwari ) ದರ್ಶನ ಮಾಡಿ ಹೊರಗೆ ಬಂದರೆ ಅದೇ ಮಹಿಷಾಸುರನ ಮುಂದೆ ಫೋಟೋ ಕ್ಲಿಕ್ಕಿಸ್ತಾರೆ ಜನ. ಮಹಿಷಾಸುರ ದೇವರೋ, ದೆವ್ವನೋ ಅಂತ ಜನ ಯಾವತ್ತೂ ಯೋಚಿಸಿಲ್ಲ. ಆದರೆ ಬಿಜೆಪಿಯವರ ಪಾಲಿಗೆ ಮಹಿಷಾಸುರ ದೆವ್ವ. ಕಾಂಗ್ರೆಸ್ನವರು ಪಾಲಿಗೆ ಮಹಿಷಾಸುರ ದೇವರು. ಈಗ ಇದೇ ಮಹಿಷನ ಹೆಸರಲ್ಲಿ ಬಿಜೆಪಿ-ಕಾಂಗ್ರೆಸ್ ಜಟಾಪಟಿ ಶುರುವಾಗಿದೆ. ಅಕ್ಟೋಬರ್ 13ಕ್ಕೆ ಚಾಮುಂಡಿಬೆಟ್ಟ ಚಲೋಅಕ್ಟೋಬರ್ 13ಕ್ಕೆ ಚಾಮುಂಡಿಬೆಟ್ಟದಲ್ಲಿ ಮಹಿಷ ದಸರಾ ಆಚರಣೆ ನಡೆಯಲಿದೆ. ಈಗಾಗ್ಲೇ ಮಹಿಷ ದಸರಾಗೂ ಸಿದ್ಧತೆಗಳಾಗ್ತಿದೆ. ಆದರೆ ಅದೇಅಕ್ಟೋಬರ್ 13 ರಂದು ಬೆಳಿಗ್ಗೆ 8 ಗಂಟೆಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಚಾಮುಂಡಿ ಬೆಟ್ಟ ಚಲೋಗೆ ಕರೆಕೊಟ್ಟಿದ್ದಾರೆ. 5000ಕ್ಕೂ ಹೆಚ್ಚು ಜನ ಮಹಿಷ ದಸರಾ ನಿಲ್ಲಿಸಲು ಚಾಮುಂಡಿಬೆಟ್ಟ ಚಲೋಗೆ ಕರೆಕೊಟ್ಟಿದ್ದಾರೆ. ಇದನ್ನೂ ಓದಿ: Karnataka Politics: ಬೆಳಗ್ಗೆ ವಿವಾದ, ಸಂಜೆ ಯೂಟರ್ನ್; ಜನರಲ್ ಆಗಿ ಹೇಳಿದೆ ಅಷ್ಟೇ ಎಂದ ಸಚಿವ ರಾಮಲಿಂಗಾರೆಡ್ಡಿಮಹಿಷ ದೆವ್ವ ದೇವರಲ್ಲ -ಪ್ರತಾಪ್ ಸಿಂಹ2016ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ಫಸ್ಟ್ ಟೈಂ ಮಹಿಷ ದಸರಾ ಆಚರಣೆ ಚಾಲ್ತಿಗೆ ಬಂತು. 2019ರಲ್ಲಿ ಬಿಜೆಪಿ ಸರ್ಕಾರ ಬಂದಾಗ ಮಹಿಷ ದಸರಾ ಆಚರಣೆಯನ್ನೇ ರದ್ದು ಮಾಡಿತ್ತು. ಈಗ ಮತ್ತೆ ಸಿದ್ದರಾಮಯ್ಯ ಸರ್ಕಾರ ಮಹಿಷ ದಸರಾಗೆ ಅನುಮತಿ ಕೊಟ್ಟಿದೆ. ಈಗ ಬಿಜೆಪಿ ನಾಯಕರು, ಚಲೋ ಚಾಮುಂಡಿಬೆಟ್ಟ ಹಮ್ಮಿಕೊಂಡಿದ್ದು ಪಾದಯಾತ್ರೆ, ಬೈಕ್ ಱಲಿಯನ್ನ ಆಯೋಜಿಸಿದ್ದಾರೆ.ಮೈಸೂರು ನಾಡ ಹಬ್ಬ ದಸರಾಗೆ ಸಿದ್ಧವಾಗುತ್ತಿದೆ. ಬರ ಇದ್ದರೂ ಸಂಪ್ರದಾಯಕವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. 414 ವರ್ಷಗಳಿಂದಲೂ ದಸರಾ ನಡೆದುಕೊಂಡು ಬರುತ್ತಿದೆ. ಸ್ವತಂತ್ರ ಬಂದ ಕಾಲದಿಂದಲೂ ಯಾರೇ ಅಧಿಕಾರಿದಲ್ಲಿದರೂ ದಸರಾ ಆಚರಣೆ ನಡೆದುಕೊಂಡು ಬಂದಿದೆ. 2015/16 ರಲ್ಲಿ ಮಹುಷಾ ದಸರಾ ಹುಟ್ಟುಹಾಕಿದರು. ಯಾವಗಾ ದೆವ್ವ ದೇವರಾಯ್ತು ನಮಗೆ ಗೊತ್ತಿಲ್ಲ.ಮಹಿಷಾ ದಸರಾ ಎಂಬ ಅಸಹ್ಯವನ್ನ ಹೊಸಕಿ ಹಾಕಿದ್ದೇವೆಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಆಚರಣೆ ಆರಂಭವಾಯ್ತು. ಚಾಮುಂಡಿ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿ ಬಂದರು. ನಿರಂತರ ಮೂರು ವರ್ಷ ಮಹಿಷಾ ಆಚರಣೆ ಮಾಡಿದರು. ನಮ್ಮ ಬಿಜೆಪಿ ಸರ್ಕಾರ ಬಂದ ಮೇಲೆ ಮಹಿಷಾ ದಸರಾಗೆ ಬ್ರೇಕ್ ಹಾಕಿದ್ವಿ. ಬಿಜೆಪಿ ಸರ್ಕಾರದಲ್ಲಿ ಮಹಿಷಾ ದಸರಾ ಎಂಬ ಅಸಹ್ಯವನ್ನ ಹೊಸಕಿ ಹಾಕಿದ್ದೇವೆ. ಅನಾಚರ ನಿಂತ ಮೇಲೆ ಮೈಸೂರಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಈಗ ಮತ್ತೆ ಮಹಿಷಾ ದಸರಾ ಆಚರಣೆಗೆ ಮುಂದಾಗಿದ್ದಾರೆ.ಚಾಮುಂಡಿ ತಾಯಿಯ ಗೌರವ ಸಂರಕ್ಷಣೆಗೋಸ್ಕರ ಮೈಸೂರಿಗರ ಬೆಂಬಲ ಪ್ರೋತ್ಸಾಹ ಪಡೆದು ಅ. 13 ರಂದು ಬೆಳಗ್ಗೆ 8 ಗಂಟೆಗೆ ಚಲೋ ಚಾಮುಂಡಿ ಬೆಟ್ಟ ನಡೆಸುತ್ತಿದ್ದೇವೆ. ಚಲೋ ಚಾಮುಂಡಿ ಬೆಟ್ಟ ಮೂಲಕ ಬೈಕ್ ಕಾರು ಮೂಲಕ ಬರಬಹುದು. ಸುಮಾರು 5 ಸಾವಿರ ಜನರು ಸೇರುತ್ತಾರೆ. ಅಂದು ಇಡೀ ದಿನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದು ಬಿಜೆಪಿ ಪಕ್ಷದ ಕಾರ್ಯಕ್ರಮವಲ್ಲ. ಇಂದು ಜಿಲ್ಲಾಧಿಕಾರಿ ಭೇಟಿ ಮಾಡಿ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಮನವಿ ಮಾಡುತ್ತೇವೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.
Post a Comment