DK Shivakumar: ಡಿಕೆಶಿ ಆಪ್ತನಿಗೆ ‘ED’ ಶಾಕ್! ಜಾರಿ ನಿರ್ದೇಶನಾಲಯ ಇಕ್ಕಳದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್​ ಅಧ್ಯಕ್ಷ!


 ಇಡಿ ಶಾಕ್ಆಪ್ತನ ಮೇಲೆ ಇಡಿ ದಾಳಿ ಮಾಡಿದ್ದಕ್ಕೆ ಡಿಕೆ ಶಿವಕುಮಾರ್ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದರೆ ಶಿವಮೊಗ್ಗ ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಬಿಜೆಪಿಯ ಕಿತಾಪತಿ ಅಂತ ಆರೋಪಿಸ್ತಿದ್ದಾರೆ.ಶಿವಮೊಗ್ಗ: ಸಂಕ್ರಾಂತಿಗೆ (Sankranti) ಸರ್ಕಾರ (Govt) ಪತನ ಆಗುತ್ತೆ ಅಂತಿದ್ದಾರೆ ಯೋಗೇಶ್ವರ್ (CP Yogeshwara). ಡಿಕೆ.ಶಿವಕುಮಾರ್ (DK Shivakuar) ಮತ್ತೆ ಜೈಲಿಗೆ ಹೋಗ್ತಾರೆ ಅಂತಿದ್ದಾರೆ ಯತ್ನಾಳ್ (Basanagouda Patil Yatnal). ಬಿಜೆಪಿಯವರ ಕೈಲಿ ಏನೂ ಆಗಲ್ಲ ಸಿಬಿಐ, ಇಡಿ ದಾಳಿ ಮಾಡಿಸ್ತಾರೆ ಅನ್ನೋದು ಕಾಂಗ್ರೆಸ್ನವರ (Congress) ಮಾತು. ಈ ಎಲ್ಲದಕ್ಕೂ ಪುಷ್ಟಿ ಕೊಡುವಂತೆ ಇವತ್ತು ಡಿಕೆ ಶಿವಕುಮಾರ್ ಆಪ್ತನ ಮೇಲೆ ಜಾರಿ ನಿರ್ದೇಶನಾಲಯ ರೇಡ್ ಮಾಡಿದೆ. ನಾಳೆ ಮಂಜುನಾಥ್ಗೌಡಗೆ ಭರ್ಜರಿ ಸನ್ಮಾನ ಕಾರ್ಯಕ್ರಮಕೆಪಿಸಿಸಿ ಸಹಕಾರಿ ವಿಭಾಗದ ರಾಜ್ಯ ಸಂಚಾಲಕ ಮೊನ್ನೆಯಷ್ಟೇ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು ಡಿಕೆಶಿವಕಮಾರ್ ಆಪ್ತ ಮಂಜುನಾಥ್ಗೌಡ. ನಾಳೆ ಮಂಜುನಾಥ್ಗೌಡಗೆ ಭರ್ಜರಿ ಸನ್ಮಾನ ಕಾರ್ಯಕ್ರಮವೂ ಇತ್ತು. ಆದರೆ ಇವತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿಕೆ ಶಿವಕುಮಾರ್ ಆಪ್ತನ ಮನೆ ಮೇಲೆ ದಾಳಿ ಮಾಡಿದೆ. ತೀರ್ಥಹಳ್ಳಿಯಲ್ಲಿರುವ ಸಂಬಂಧಿಕರ ಮನೆಗಳು, ಬೆಟಮಕ್ಕಿ ಹಾಗೂ ಕಲ್ಲುಕೊಪ್ಪದಲ್ಲಿ ಶರಾವತಿ ನಗರದಲ್ಲಿ ಅವರ ನಾದಿನಿ ಮನೆ ಮೇಲೂ ರೇಡ್ ಆಗಿದೆ.ಇದನ್ನೂ ಓದಿ: Cauvery Water: KRS ಮುತ್ತಿಗೆಗೆ ಯತ್ನ, ವಾಟಾಳ್ ಟೀಂಗೆ ಖಾಕಿ ವಶಕ್ಕೆ! ಅಕ್ಟೋಬರ್ 10ಕ್ಕೆ ಗಡಿ ಬಂದ್ಗೆ ಕರೆ1997ರಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಮಂಜುನಾಥ್ಗೌಡ. 2014ರಲ್ಲಿ ನಕಲಿ ಚಿನ್ನ ಅಡವಿಟ್ಟು 62 ಕೋಟಿ ಸಾಲ ಕೊಟ್ಟಿದ್ದರು. ಆಪ್ತರು, ಸಂಬಂಧಿಕರ ಹೆಸರಲ್ಲಿ 62 ಕೋಟಿ ರೂಪಾಯಿ ವಂಚಿಸಿದ್ದ ಆರೋಪ ಎದುರಿಸಿದ್ದರು. ಸಹಕಾರಿ ಬ್ಯಾಂಕ್ ಸಂತ್ರಸ್ತರಿಂದ ಇಡಿಗೆ ಸಾಲು ಸಾಲು ದೂರು ಹೋಗಿತ್ತು.ಸಂತ್ರಸ್ತರಿಂದ ಇಡಿಗೆ ದೂರು 2014ರಲ್ಲಿ 18 ಸಿಬ್ಬಂದಿಯನ್ನ ಬಂಧಿಸಿ ವಿಚಾರಣೆಯೂ ಆಗಿತ್ತು. ಆಮೇಲೆ 2021ರಿಂದ ಡಿಸಿಸಿ ಬ್ಯಾಂಕ್ ವಹಿವಾಟಿನಿಂದ ಮಂಜುನಾಥ್ಗೌಡ ದೂರು ಇದ್ದರು. ಸೆಪ್ಟೆಂಬರ್ 28, 2023ರಂದು ಮತ್ತೆ ಅದೇ ಡಿಸಿಸಿ ಬ್ಯಾಂಕ್ಗೆ ಅಧ್ಯಕ್ಷರಾಗಿ ಮಂಜುನಾಥ್ಗೌಡ ಆಯ್ಕೆ ಆದ್ಮೇಲೆ ಮತ್ತೆ ಸಂತ್ರಸ್ತರಿಂದ ಇಡಿಗೆ ದೂರು ಹೋಯ್ತು. ಹೀಗಾಗಿ ಇವತ್ತು ಜಾರಿ ನಿರ್ದೇಶನಾಲಯ ದಾಳಿ ಮಾಡಿದ.ಆಪ್ತನ ಮೇಲೆ ಇಡಿ ದಾಳಿ ಮಾಡಿದ್ದಕ್ಕೆ ಡಿಕೆ ಶಿವಕುಮಾರ್ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದರೆ ಶಿವಮೊಗ್ಗ ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಬಿಜೆಪಿಯ ಕಿತಾಪತಿ ಅಂತ ಆರೋಪಿಸ್ತಿದ್ದಾರೆ. ಮೂರು ನಾಲ್ಕು ದಿನಗಳಿಂದ ಶಿವಮೊಗ್ಗ ರಾಗಿಗುಡ್ಡ ಗಲಾಟೆಯಲ್ಲಿ ಮುಳುಗಿತ್ತು. ಈಗ ಶಿವಮೊಗ್ಗದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷನ ಮನೆ ಮೇಲೆ ಇಡಿ ರೇಡ್‍ ಸದ್ದು ಮಾಡುತ್ತಿದೆ.

Post a Comment

Previous Post Next Post