ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ಮಹತ್ತರ ಸ್ಥಾನವಿದೆ. ವೈದಿಕ ಪದ್ಧತಿಯ ಪ್ರಕಾರ ಸಪ್ತಪದಿ ತುಳಿಯೋದು ಮದುವೆಯ ಮಹತ್ತರ ಭಾಗ. ಕೆಲವೊಂದು ಕ್ರಮಗಳನ್ನು ಅನುಸರಿಸದೇ ಇದ್ದರೆ ಇಂದಿಗೂ ಕೆಲಹಿರಿಯರು ಮದುವೆಯನ್ನು
ಪುರಸ್ಕರಿಸುವುದಿಲ್ಲ.ಈ ಮಧ್ಯೆ ಅಲಹಾಬಾದ್ ಹೈಕೋರ್ಟ್ ಕೂಡ ಮಹತ್ವದ ಹೇಳಿಕೆ ನೀಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಸಪ್ತಪದಿ ಮತ್ತು ಇತರ ಸಂಪ್ರದಾಯ ಸಮಾರಂಭ ನಡೆಯದೇ ನಡೆಯುವ ಹಿಂದೂ ಮದುವೆಗಳು ಮಾನ್ಯವಲ್ಲ ಎಂದು ಅಲಹಬಾದ್ ಹೈಕೋರ್ಟ್ ತಿಳಿಸಿದೆ.ಮದುವೆ ಸಂಪ್ರದಾಯ ಶಾಸ್ತ್ರಗಳಿಂದ ಕೂಡಿದೆ. ಇವುಗಳನ್ನು ಅನುಸರಿಸದೇ ಇದ್ದರೆ ಅದು ಕಾನೂನಿನ ಕಣ್ಣಿನ ಪ್ರಕಾರ ಮದುವೆಯಲ್ಲ. ಹಿಂದೂ ಕಾನೂನು ಪ್ರಕಾರ ಮದುವೆಯಲ್ಲಿ ಸಪ್ತಪದಿ ಸಮಾರಂಭ ನಡೆಸುವುದು ಅಗತ್ಯವಾಗಿದೆ ಎಂದು ಕೋರ್ಟ್ ಹೇಳಿದೆ.1955ರ ಹಿಂದೂ ಮದುವೆ ಕಾಯ್ದೆ ಸೆಕ್ಷನ್ 7ರಲ್ಲಿ ಹಿಂದೂ ಮದುವೆಯಲ್ಲಿ ಶಾಸ್ತ್ರಗಳನ್ನು ಮತ್ತು ಸಮಾರಂಭಗಳನ್ನು ನಡೆಸುವ ಕುರಿತು ತಿಳಿಸಲಾಗಿದೆ. ಇಂತಹ ಸಂಪ್ರದಾಯದಲ್ಲಿ ಸಪ್ತಪದಿ ಸಮಾರಂಭವೂ ಬರುತ್ತದೆ. ಸಪ್ತಪದಿ ಸಂಪ್ರದಾಯ ಮಾಡಿದರೆ ಮಾತ್ರ ಮದುವೆ ಪೂರ್ಣಗೊಂಡಂತೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಅರ್ಜಿದಾರ ಸ್ಮೃತಿ ಸಿಂಗ್ ಅರ್ಜಿ ಪ್ರಕರಣದಲ್ಲಿ ನ್ಯಾ ಸಂಜಯ್ ಕುಮಾರ್ ಸಿಂಗ್ ಪೀಠ ವಿಚಾರಣೆ ನಡೆಸಿದ್ದು, ಶಾಸ್ತ್ರೋಕ್ತ ಪದವು ಮದುವೆ ಜತೆಗೆ ಅವಿನಾಭಾವ ಸಂಬಂಧ ಹೊಂದಿದೆ. ಸರಿಯಾದ ಮದುವೆ ಆಚರಣೆ ಪದ್ಧತಿಯನ್ನು ಹೊಂದಿರದೇ ಹೋದರೂ ಇದು ಶಾಸ್ತ್ರೋಕ್ತ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ.ಕೋರ್ಟ್ ಮುಂದೆ ನೀಡಿದ ಹೇಳಿಕೆಗಳಲ್ಲಿ ಸಪ್ತಪದಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಹೀಗಾಗಿ ಎರಡನೆಯ ಮದುವೆಯ ಆರೋಪವು ದೃಢೀಕರಿಸುವ ಆರೋಪದಲ್ಲಿ ಹುರುಳಿಲ್ಲ. ಅರ್ಜಿದಾರರ ವಿರುದ್ಧ ಯಾವುದೇ ಅಪರಾಧ ಕಾಣಿಸುತ್ತಿಲ್ಲ ಎಂದು ನ್ಯಾಯಾಲಯ ತಿಳಿಸಿದೆಈ ಪ್ರಕರಣದ ಹಿನ್ನೆಲೆಯನ್ನು ಗಮನಿಸೋದಾದ್ರೆ 2017ರಲ್ಲಿ ಸ್ಮೃತಿ ಸಿಂಗ್, ಸತ್ಯಂ ಸಿಂಗ್ ಅವರನ್ನು ಮದುವೆಯಾಗಿದ್ದರು. ನಂತರ ಇವರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟ ಹಿನ್ನೆಲೆಯಲ್ಲಿ ಆಕೆ ಗಂಡನ ಮನೆ ತೊರೆದು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು.ಬಳಿಕ ತನಿಖೆಯಲ್ಲಿ ಪೊಲೀಸರು ಗಂಡ ಮತ್ತು ಆತನ ಮನೆ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಇದಕ್ಕೆ ಅರ್ಜಿದಾರ ಜೀವನಾಂಶ ನೀಡಬೇಕು ಎಂದು ಮಿರ್ಜಾಪುರ್ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಜನವರಿ 11, 2021ರಂದು ಪತ್ನಿ ಮರು ಮದುವೆಯಾಗುವವರೆಗೆ 4 ಸಾವಿರ ಜೀವನಾಂಶವನ್ನು ನೀಡಬೇಕು ಎಂದು ಆದೇಶ ನೀಡಿತ್ತು.ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ಮಹತ್ತರ ಸ್ಥಾನವಿದೆ. ವೈದಿಕ ಪದ್ಧತಿಯ ಪ್ರಕಾರ ಸಪ್ತಪದಿ ತುಳಿಯೋದು ಮದುವೆಯ ಮಹತ್ತರ ಭಾಗ. ಕೆಲವೊಂದು ಕ್ರಮಗಳನ್ನು ಅನುಸರಿಸದೇ ಇದ್ದರೆ ಇಂದಿಗೂ ಕೆಲ ಹಿರಿಯರು ಮದುವೆಯನ್ನು ಪುರಸ್ಕರಿಸುವುದಿಲ್ಲ.
Post a Comment