Belur Gopalakrishna: 'ಯಡಿಯೂರಪ್ಪಗೆ ಮಾನ-ಮರ್ಯಾದೆ ಇದ್ಯಾ'? ಬಿಎಸ್‌ವೈ ವಿರುದ್ಧ ಬೇಳೂರು ಕೆಂಡಾಮಂಡಲ!


 ಬಿಎಸ್‌ ಯಡಿಯೂರಪ್ಪ-ಬೇಳೂರು ಗೋಪಾಲಕೃಷ್ಣ

ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಬೇಳೂರು ಗೋಪಾಲಕೃಷ್ಣ, ಬಿಎಸ್ ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ. “ಯಡಿಯೂರಪ್ಪನವರಿಗೆ ಮಾನ ಮರ್ಯಾದೆ ಇದೆಯಾ?” ಅಂತ ಖಾರವಾಗಿ ಪ್ರಶ್ನಿಸಿದ್ದಾರೆ. ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (B.S. Yediyurappa) ವಿರುದ್ಧ ಸಾಗರ ಕಾಂಗ್ರೆಸ್ ಶಾಸಕ (Sagar Congress MLA) ಬೇಳೂರು ಗೋಪಾಲಕೃಷ್ಣ (Belur Gopalakrishna) ಗುಡುಗಿದ್ದಾರೆ. ಕಾಂಗ್ರೆಸ್‌ನಲ್ಲಿ ಲಿಂಗಾಯತರು ಕಡೆಗಣಿಸಲ್ಪಡುತ್ತಿದ್ದಾರೆ ಎಂಬ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಹೇಳಿಕೆಗೆ ಯಡಿಯೂರಪ್ಪ ಬೆಂಬಲ ಸೂಚಿಸಿದ್ದರು. ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಬೇಳೂರು ಗೋಪಾಲಕೃಷ್ಣ, ಬಿಎಸ್ ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ. “ಯಡಿಯೂರಪ್ಪನವರಿಗೆ ಮಾನ ಮರ್ಯಾದೆ ಇದೆಯಾ?” ಅಂತ ಖಾರವಾಗಿ ಪ್ರಶ್ನಿಸಿದ್ದಾರೆ.ಲಿಂಗಾಯತ ಜಾತಿಯವರೊಬ್ಬರೇ ಅಧಿಕಾರಿಗಳು ಇರುತ್ತಾರಾ?ಹೀಗಂತ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದ್ದಾರೆ. ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಾಮನೂರು ಶಿವಶಂಕರಪ್ಪ, ಬಿಎಸ್‌ ಯಡಿಯೂರಪ್ಪ ವಿರುದ್ದ ಗರಂ ಆದ್ರು. ಸಿಎಂ ಆದ್ಯತೆ ಮೇರೆಗೆ ಅಧಿಕಾರಿಗಳನ್ನು ನಿಯೋಜನೆ ಮಾಡ್ತಾರೆ. ಜಾತಿ ಆಧಾರದ ಮೇಲೆ ವರ್ಗಾವಣೆ ಮಾಡಲು ಆಗಲ್ಲ. ಅಷ್ಟಕ್ಕೂ ಲಿಂಗಾಯತ ಜಾತಿಯವ್ರರೊಬ್ಬರೇ ಅಧಿಕಾರಿಗಳು ಇರ್ತಾರಾ? ಶಾಮನೂರು ಎಲ್ಲಾ ಜಾತಿ ಬಗ್ಗೆ ಮಾತನಾಡಬೇಕಿತ್ತು ಅಂತ ಹೇಳಿದ್ರು. ಯಡಿಯೂರಪ್ಪನವರಿಗೆ ಮಾನ ಮರ್ಯಾದೆ ಇದೆಯಾ?ಹೀಗಂತ ಬೇಳೂರು ಗೋಪಾಲಕೃಷ್ಣ ಖಾರವಾಗಿ ಪ್ರಶ್ನಿಸಿದ್ದಾರೆ. ಶಾಮನೂರು ಶಿವಶಂಕರಪ್ಪನವರಿಗೆ ಯಡಿಯೂರಪ್ಪ ಬೇರೆ ಸಾಥ್ ಅಂತೆ. ಯಡಿಯೂರಪ್ಪಗೆ ಮಾನಮರ್ಯಾದೆ ಇದ್ಯಾ? ಅವರು ಅಧಿಕಾರದಲ್ಲಿದ್ದಾಗ ಡ್ರೈವರ್‌ ಇಂದ ಹಿಡಿದು ಅಡುಗೆ ಭಟ್ಟನವರೆಗೂ ಲಿಂಗಾಯತರನ್ನೇ ಇಟ್ಕೊಂಡಿದ್ರು .ಏನ್ ಸಾಥ್ ಕೊಡೋದು ಇವರು, ಇದು ಹಾಸ್ಯಾಸ್ಪದ ಅಂತ ಬೇಳೂರು ವ್ಯಂಗ್ಯವಾಡಿದ್ದಾರೆ.ಇದನ್ನೂ ಓದಿ: Shamanuru Shivashankarappa: ಅವನ ಹಾಗೆ ಮಸ್ಕಾ ಹೊಡೆದು ಎಂಎಲ್‌ಸಿ ಆಗಿಲ್ಲ! ಎಚ್‌. ವಿಶ್ವನಾಥ್‌ಗೆ ಶಾಮನೂರು ಟಾಂಗಶಾಮನೂರು ಹಿರಿತನಕ್ಕೆ ಗೌರವ ಇರಬೇಕುಶಾಮನೂರು ಹಿರಿತನಕ್ಕೆ ಗೌರವ ಇರಬೇಕು, ಸೂಕ್ಷ್ಮ ಸಮುದಾಯಗಳ ಬಗ್ಗೆ ಅವರು ಮಾತನಾಡಬೇಕಿತ್ತು ಅಂತ ಬೇಳೂರು ಗೋಪಾಲಕೃಷ್ಣ ಹೇಳಿದ್ರು. ಅವರ ಮಗ ಸಚಿವರಾಗಿದ್ದಾರೆ, ಅವರು ಹಿರಿಯರು. ಹೀಗಾಗಿ ಸಿಎಂ ಜೊತೆ ಮಾತನಾಡಬೇಕಿತ್ತು ಅಂತ ಬೇಳೂರು ಗೋಪಾಲಕೃಷ್ಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಧಮ್ಮು, ತಾಕತ್ತು ಇದ್ದರೆ ಸರ್ಕಾರವನ್ನ ಟಚ್ ಮಾಡಲಿ!ಇನ್ನಾರು ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎಂಬ ಸಿಪಿ ಯೋಗೇಶ್ವರ್ ಹಾಗೂ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹದಿನೇಳು ಮಂದಿ ಎತ್ಕೊಂಡು ಹೋದಂಗೆ ಅಲ್ಲ. ನಮ್ಮ ಸಿಎಂ, ಡಿಸಿಎಂಗೆ ಚೆನ್ನಾಗಿ ಗೊತ್ತು. ಸರ್ಕಾರ ಬೀಳಿಸೋಕೆ ಧಮ್ಮು, ತಾಕತ್ತು ಇರಬೇಕು. ಇವತ್ತು ಧಮ್ಮು ತಾಕತ್ತು ಇದ್ರೆ ಟಚ್ ಮಾಡಲಿ ಅಂತ ಎಚ್‌ಡಿಕೆ ಹಾಗೂ ಸಿಪಿವೈ ವಿರುದ್ದ ಬೇಳೂರು ಗೋಪಾಲಕೃಷ್ಣ ಹರಿಹಾಯ್ದರು.




Post a Comment

Previous Post Next Post