ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ
HD Devegowda vs DK Shivakumar: ನೀವು ಯಾರನ್ನು ಬೇಕಾದರೂ ಕಟ್ಟಿ ಹಾಕಿಕೊಳ್ಳಿ, ಹಿಡಿದಿಟ್ಟಿಕೊಳ್ಳಿ ಅಥವಾ ರೂಮ್ ಗಾದ್ರೂ ಹಾಕಿಕೊಳ್ಳಿ. ಆದರೆ ಮನೆ ಮನೆಗೆ ಹೋಗಿ ಕಾರ್ಯಕರ್ತರನ್ನು ನಾನು ನಮ್ರತೆಯಿಂದ ಕರೆದುಕೊಂಡು ಬರ್ತೇನೆ. ನಾನು 88ರಲ್ಲೂ ರಾಜಕಾರಣ ಮಾಡಿದ್ದೇನೆ, 89ರಲ್ಲೂ ರಾಜಕಾರಣ ಮಾಡಿದ್ದೇನೆ ಡಿಕೆಶಿ ತಿರುಗೇಟು ನೀಡಿದರು.ಚನ್ನಪಟ್ಟಣ: ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಸೆಳೆಯುತ್ತಿರುವ ಡಿಕೆ ಶಿವಕುಮಾರ್‌ಗೆ (DK Shivakumar) ನಿನ್ನೆಯಷ್ಟೇ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ (HD Deve gowda) ಟಕ್ಕರ್ ನೀಡಿದ್ದರು. ಇದೀಗ ಡಿಕೆ ಶಿವಕುಮಾರ್ ಕೂಡ ದೊಡ್ಡ ಗೌಡ್ರಿಗೆ ತಿರುಗೇಟು ನೀಡಿದ್ದಾರೆ.ನಿನ್ನೆ ಸುದ್ದಿಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು, ಮಿಸ್ಟರ್ ಡಿಕೆಶಿ ಯೂ ಕೆನ್ ನಾಟ್ ಮೇಡ್ ಪಾಲಿಟಿಕ್ಸ್. ನಾನಿನ್ನೂ ಬದುಕಿದ್ದೇನೆ, ನಮ್ಮ ಪಕ್ಷವನ್ನ ಏನೂ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದ್ದರು. ಇದೀಗ ಗೌಡರ ಗುಟುರ್‌ಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.ಇದನ್ನೂ ಓದಿ: HD Devegowda: ಡಿಕೆಶಿಗೆ ಎಚ್ಚರಿಕೆ ನೀಡಿ ಡಿಚ್ಚಿ ಕೊಟ್ಟ ದೊಡ್ಡಗೌಡರು!ಈ ಬಗ್ಗೆ ಚನ್ನಪಟ್ಟಣ ಜೆಡಿಎಸ್ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನನಗೆ ದೇವೇಗೌಡರು ಕೂಡ ವಾರ್ನಿಂಗ್ ಕೊಟ್ಡಿದ್ದಾರೆ. ಮಿಸ್ಟರ್ ಡಿಕೆಶಿ ಈ ಆಟ ನಡೆಯಲ್ಲ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಅವರ ಮಾತುಗಳು ನನಗೆ ಆಶೀರ್ವಾದ. ಆದರೆ ನಿಮ್ಮ ಪಾರ್ಟಿ ಮುಖಂಡರು, ನಿಮ್ಮ ಸುಪುತ್ರರು ಜನತಾ ದಳ ವಿಸರ್ಜನೆ ಮಾಡ್ತೀನಿ ಎಂದಾಗ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು? ಎಂದು ಪ್ರಶ್ನಿಸಿದರು. ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ನೀವು ಹೇಳಿದ್ರಿ. ರಾಜಕಾರಣ ಹಾವು ಏಣಿ ಆಟ, ಇದೊಂದು ಚೆಸ್ ಗೇಮ್. ಆದರೆ ಜನರಿಗೆ ಏನು ಸಂದೇಶ ಕೊಟ್ಟಿದ್ರೋ ಅದನ್ನು ಮುಗ್ದ ಜನ ನಂಬಿಕೊಂಡಿದ್ರು. ಹಿಂದೆ ಎಷ್ಟೆಲ್ಲ ಎಲೆಕ್ಷನ್‌ನಲ್ಲಿ ನೀವೇನು ಮಾಡಿದ್ರಿ ಬಿಜೆಪಿಯವರು ಏನು ಮಾಡಿದ್ರಿ ಗೊತ್ತಿದೆ. ನೀವು ಹೆದರಿಸಿದರೆ ಮಾತ್ರಕ್ಕೆ ಡಿಕೆ ಶಿವಕುಮಾರ್ ಹೆದರಲ್ಲ ಅನ್ನೋದು ನಿಮಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.ಇದನ್ನೂ ಓದಿ: Sad News: ಕೆಲಸ ಮುಗಿಸಿ ಗುಡಿಸಲಲ್ಲಿ ಮಲಗಿದ್ದ 10 ಕಾರ್ಮಿಕರ ಮೇಲೆಯೇ ಹರಿದ ಟ್ರಕ್! ಅಮಾಯಕರ ಜೀವಕ್ಕೆ ಬೆಲೆನೇ ಇಲ್ವಾ? ಇನ್ನು, ನೀವು ಯಾರನ್ನು ಬೇಕಾದರೂ ಕಟ್ಟಿ ಹಾಕಿಕೊಳ್ಳಿ, ಹಿಡಿದಿಟ್ಟಿಕೊಳ್ಳಿ ಅಥವಾ ರೂಮ್ ಗಾದ್ರೂ ಹಾಕಿಕೊಳ್ಳಿ. ಆದರೆ ಮನೆ ಮನೆಗೆ ಹೋಗಿ ಕಾರ್ಯಕರ್ತರನ್ನು ನಾನು ನಮ್ರತೆಯಿಂದ ಕರೆದುಕೊಂಡು ಬರ್ತೇನೆ. ನಾನು 88ರಲ್ಲೂ ರಾಜಕಾರಣ ಮಾಡಿದ್ದೇನೆ, 89ರಲ್ಲೂ ರಾಜಕಾರಣ ಮಾಡಿದ್ದೇನೆ. ಸಾತನೂರಲ್ಲಿ ಏನು ಮಾಡಿದ್ದೇನೆ ಅನ್ನೋದು ಗೊತ್ತಿದೆ. ತೇಜಸ್ವಿನಿ ಏನು ಮಾತಾಡಿದ್ರು ಅನ್ನೋದು ಗೊತ್ತಿದೆ ಎಂದು ಹೇಳಿದರು. ಇನ್ನು, ಈಗ ತಾವು ಎಷ್ಟೇ ವಾರ್ನಿಂಗ್ ಕೊಟ್ಟರೂ ಹೆದರಿಸಿದರೂ ಬೆದರಿಸಿದರೂ ತಮ್ಮ ಸುಪುತ್ರನ ಕ್ಷೇತ್ರದ ಮುಖಂಡರು ಕಾಂಗ್ರೆಸ್ ಜತೆ ಬಂದಿದ್ದಾರೆ ಎಂದು ಡಿಕೆಶಿ ಎಚ್‌ಡಿಡಿಗೆ ವ್ಯಂಗ್ಯವಾಗಿ ಟಾಂಗ್ ನೀಡಿದರು.
Post a Comment