Veerappan: ಕಾಡುಗಳ್ಳ ವೀರಪ್ಪನ್ ಮೂಲಕ ಬೊಕ್ಕಸ ತುಂಬಿಸಲು ಹೊರಟ ಸರ್ಕಾರ!


 The Hunt for Veerappan: ಆದರೆ ಕಾವೇರಿ ವನ್ಯಜೀವಿ ಅಭಯಾರಣ್ಯವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬಾರದು ಎಂದು ಪರಿಸರ ಕಾರ್ಯಕರ್ತರು ಈ ಕ್ರಮದ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದಾರೆ.ಬದುಕಿರುವಾಗ ಕಾಡುಗಳ್ಳ ವೀರಪ್ಪನ್ ಸರ್ಕಾರದ ಕೆಂಗಣ್ಣಿಗೆ ಕಂಟಕನಾಗಿದ್ದ. ಆದರೆ ಈಗ ಅದೇ ಸರ್ಕಾರ ವೀರಪ್ಪನ್ ಮೂಲಕ ಬೊಕ್ಕಸ ತುಂಬಿಸಿಕೊಳ್ಳುವ ಪ್ಲಾನ್ ಮಾಡುತ್ತಿದೆ.ಕಾವೇರಿ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿರುವ ವೀರಪ್ಪನ್ ಜನ್ಮಸ್ಥಳವಾದ ಗೋಪಿನಾಥಂ ಪ್ರದೇಶದಲ್ಲಿ ಸಾರ್ವಜನಿಕರಿಗಾಗಿ ಸಫಾರಿ ಆರಂಭಿಸಲು ಅರಣ್ಯ ಇಲಾಖೆ ಮುಂದಾಗಿದೆ. ವಿಪರ್ಯಾಸ ಅಂದರೆ, ವೀರಪ್ಪನ್ ಬದುಕಿರುವಾಗ ಸಾರ್ವಜನಿಕರು ಈ ಸ್ಥಳಗಳಿಗೆ ಪ್ರಯಾಣಿಸಲು ಹೆದರುತ್ತಿದ್ದರು. ಆದರೆ ಇದೀಗ ಅದೇ ಪ್ರದೇಶಕ್ಕೆ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಯನ್ನು ಅರಣ್ಯ ಇಲಾಖೆ ಕೈಗೆತ್ತಿಕೊಂಡಿದೆ ಎಂದು ವರದಿಯಾಗಿದೆ.ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯಾ ಎಂ, “ನಾವು ಗೋಪಿನಾಥಂ ಪ್ರದೇಶದಲ್ಲಿ ಸಫಾರಿ ಕೇಂದ್ರ ನಿರ್ಮಿಸಲು ಯೋಜಿಸುತ್ತಿದ್ದು, ಸಾರ್ವಜನಿಕರಿಗೆ ಅವಕಾಶ ನೀಡುವ ಪ್ರಸ್ತಾವನೆ ಇದೆ” ಎಂದು ತಿಳಿಸಿದ್ದಾರೆ.ಆದರೆ ಕಾವೇರಿ ವನ್ಯಜೀವಿ ಅಭಯಾರಣ್ಯವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬಾರದು ಎಂದು ಪರಿಸರ ಕಾರ್ಯಕರ್ತರು ಈ ಕ್ರಮದ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದಾರೆ.ಈ ಯೋಜನೆಯ ಮೂಲಕ ಅತ್ಯಮೂಲ್ಯ ಸಸ್ಯ ಸಂಪತ್ತಿನ ನಾಶಕ್ಕೆ ಅರಣ್ಯ ಇಲಾಖೆಯೇ ಆಹ್ವಾನ ನೀದಿದಂತಾಗುತ್ತದೆ ಎಂಬುದು ಪರಿಸರ ಕಾರ್ಯಕರ್ತರ ವಾದವಾಗಿದೆ.ಒಟ್ಟಾರೆ ದಿ ಹಂಟ್ ಫಾರ್ ವೀರಪ್ಪನ್ ಡಾಕ್ಯೂ ಸಿರೀಸ್ ಬಿಡುಗಡೆಯ ಹೊತ್ತಲ್ಲೇ ಜಂಗಲ್ ಸಫಾರಿ ಪ್ರಸ್ತಾಪ ಮತ್ತೆ ಸುದ್ದಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

Post a Comment

Previous Post Next Post