DK Shivakumar VS CT Ravi: ಡಿಕೆಶಿ ರಿಯಲ್ ಎಸ್ಟೇಟ್ ಮಾಡಿ 1500 ಕೋಟಿ ವೈಟ್ ಮಾಡಿದ್ದಾರೆ! ಸಿಟಿ ರವಿ ಗಂಭೀರ ಆರೋಪ


 ಸಿಟಿ ರವಿ-ಡಿಕೆ ಶಿವಕುಮಾರ್ (ಸಂಗ್ರಹ ಚಿತ್ರ)

 ಡಿಸಿಎಂ ಡಿಕೆಶಿ ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ ನಡುವೆ ವಾಕ್ಸಮಕ ಮುಂದುವರೆದಿದೆ. ಬ್ರ್ಯಾಂಡ್ ಬೆಂಗಳೂರಿನ ಮಂತ್ರ ಪಠಿಸುತ್ತಿರುವ ಡಿಕೆಶಿ ವಿರುದ್ಧ ಸಿ.ಟಿ. ರವಿ ಹರಿಹಾಯ್ದಿದ್ದಾರೆ.ಬೆಂಗಳೂರು: ಉಪ ಮುಖ್ಯಮಂತ್ರಿ (DCM) ಡಿಕೆ ಶಿವಕುಮಾರ್ (DK Shivakumar) ಹಾಗೂ ಬಿಜೆಪಿ ನಾಯಕ (BJP Leader) ಸಿ.ಟಿ. ರವಿ (C.T. Ravi) ನಡುವೆ ವಾಕ್ಸಮಕ ಮುಂದುವರೆದಿದೆ. ಬ್ರ್ಯಾಂಡ್ ಬೆಂಗಳೂರಿನ (Brand Bangalore) ಮಂತ್ರ ಪಠಿಸುತ್ತಿರುವ ಡಿಕೆಶಿ ವಿರುದ್ಧ ಸಿಟಿ ರವಿ ಹರಿಹಾಯ್ದಿದ್ದಾರೆ. ಡಿಕೆ ಶಿವಕುಮಾರ್ ರಿಯಲ್ ಎಸ್ಟೇಟ್ (Real Estate) ಮಾಡಿ 1500 ಕೋಟಿ ವೈಟ್ ಮಾಡಿಕೊಂಡಿದ್ದಾರೆ ಅಂತ ಸಿಟಿ ರವಿ ಗಂಭೀರ ಆರೋಪ ಮಾಡಿದ್ದಾರೆ. ಇನ್ನು “ನನ್ನ ಬ್ಲ್ಯಾಕ್ ಮೇಲೆ ಮಾಡೋಕೆ ಆಗೊಲ್ಲ” ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಟಿ ರವಿ, “ಯಾರಿಂದಲೂ ಡಿಕೆಶಿನ ಬ್ಲಾಕ್ ಮೇಲ್ ಮಾಡಲು ಸಾಧ್ಯವೇ ಇಲ್ಲ, ಆದ್ರೆ ಡಿಕೆಶಿ ಯಾರನ್ನು ಬೇಕಾದ್ರೂ ಬ್ಲಾಕ್ ಮೇಲ್ ಮಾಡ್ತಾರೆ!” ಅಂತ ಟಾಂಗ್ ಕೊಟ್ರು.: ಡಿಕೆಶಿ ರಿಯಲ್ ಎಸ್ಟೇಟ್ ಮಾಡಿ 1500 ಕೋಟಿ ಇಂಥದ್ದೊಂದು ಗಂಭೀರ ಆರೋಪವನ್ನು ಬಿಜೆಪಿ ನಾಯಕ ಸಿಟಿ ರವಿ ಮಾಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಟಿ ರವಿ, ಡಿಕೆಶಿ ರಿಯಲ್ ಎಸ್ಟೇಟ್ ಮಾಡಿ 1500 ಕೋಟಿ ವೈಟ್ ಮಾಡಿಕೊಂಡಿದ್ದಾರೆ ಅಂತ ಆರೋಪಿಸಿದ್ರು. ಬ್ರಾಂಡ್ ಬೆಂಗಳೂರಿನಿಂದ 1500 ಕೋಟಿ ದುಪ್ಪಟ್ಟು ಆಗಬಾರದು, ಪ್ರಾಮಾಣಿಕವಾಗಿ ಅಭಿವೃದ್ಧಿಗೆ ಅವರು ಕೆಲಸ ಮಾಡಲಿ ಎಂದರು. ಪ್ರಾಮಾಣಿಕವಾಗಿ ಅಭಿವೃದ್ಧಿ ಮಾಡಿದ್ರೆ ಕೇಂದ್ರ ಸರ್ಕಾರ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತೆ ಎಂಬ ಭರವಸೆ ವ್ಯಕ್ತಪಡಿಸಿದರು.ಡಿಕೆಶಿಯೇ ಎಲ್ಲರನ್ನೂ ಬ್ಲ್ಯಾಕ್ ಮೇಲ್ ಮಾಡ್ತಾರೆ!ಇನ್ನು ಬಿಬಿಎಂಪಿ ಗುತ್ತಿಗೆದಾರರ ಬಿಲ್ ಪೆಂಡಿಂಗ್ ವಿಚಾರದಲ್ಲಿ ನನ್ನ ಬ್ಲ್ಯಾಕ್ ಮೇಲ್ ಮಾಡಲು ಆಗಲ್ಲ ಎಂಬ ಡಿಕೆಶಿ ಹೇಳಿಕೆಗೆ ಸಿಟಿ ರವಿ ಪ್ರತಿಕ್ರಿಯಿಸಿದ್ರು. ಯಾರಿಂದಲೂ ಡಿಕೆಶಿನ ಬ್ಲಾಕ್ ಮೇಲ್ ಮಾಡಲು ಸಾಧ್ಯವೇ ಇಲ್ಲ. ಆದ್ರೆ ಡಿಕೆಶಿ ಯಾರನ್ನು ಬೇಕಾದ್ರೂ ಬ್ಲಾಕ್ ಮೇಲ್ ಮಾಡ್ತಾರೆ. ಎಲ್ಲರನ್ನೂ ಬ್ಲಾಕ್ ಮೇಲ್ ಮಾಡುವ ಸಾಮರ್ಥ್ಯ ಡಿಕೆಶಿಗೆ ಮೊದಲಿನಿಂದಲೂ ಇದೆ ಅಂತ ಟಾಂಗ್ ಕೊಟ್ಟರು. ಇದನ್ನೂ ಓದಿ: Bengaluru News: ಬೆಂಗಳೂರಿನ ನಾಗರಿಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ವಿನಮ್ರ ಮನವಿ!ಮಿಷನ್ ನನ್ನ ಗಮನಕ್ಕೂ ಬಂದಿದೆಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲು ಡಿಕೆಶಿ ಕಮಿಷನ್ ಕೇಳಿದ್ದಾರೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಟಿ ರವಿ, ಕಮಿಷನ್ ಇದು ನನ್ನ ಗಮನಕ್ಕೂ ಬಂದಿದೆ, ಕೆಲ ಗುತ್ತಿಗೆದಾರರಿಂದ ಮಾಹಿತಿ ಬಂದಿದೆ ಎಂದರು. ಹಿಂದೆ ನಮ್ಮ ಸರ್ಕಾರದ ವಿರುದ್ಧ ಹಣ ಬಿಡುಗಡೆ ಮಾಡಿ ಮಾಡಿ ಅಂತಿದ್ರು. ಈಗ ಅವರು ಮೊದಲು ಹಣ ಬಿಡುಗಡೆ ಮಾಡಲಿ. ಅದನ್ನ ಬಿಟ್ಟು ಅಸಹಾಯಕತೆ ತೋರಿಸಿದ್ರೆ ಪ್ರಯೋಜನ ಇಲ್ಲ ಅಂತ ಹೇಳಿದ್ರು.ನೀರಾವರಿ ಇಲಾಖೆಯ ಒಂದೇ ಒಂದು ಸಭೆ ನಡೆಸಿಲ್ಲಕಲುಷಿತ ನೀರು ಸೇವಿಸಿ ಜನ ಸಾಯುತ್ತಿದ್ದಾರೆ ಆದರೆ ಅದನ್ನ ತಡೆಯಲು ಇವರ ಕೈಯಲ್ಲಿ ಆಗ್ತಾ ಇಲ್ಲ. ಡಿಕೆ ಶಿವಕುಮಾರ್ ನೀರಾವರಿ ಸಚಿವರು ಹೌದು. ಈವರೆಗೂ ಇಲಾಖೆಯ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ. ಇಲಾಖೆಯಲ್ಲಿ ಇರೋದು 600 ಕೋಟಿ, 25 ಸಾವಿರ ಕೋಟಿ ಗುತ್ತಿಗೆದಾರರಿಗೆ ಕೊಡಬೇಕು, ಎಲ್ಲಿಂದ ಕೊಡಲಿ ಅಂತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.ಇದನ್ನೂ ಓದಿ: Contractors Bill: ಈ ಬ್ಲಾಕ್‌ಮೇಲ್‌ಗೆಲ್ಲಾ ಈ ಡಿಕೆ ಶಿವಕುಮಾರ್ ಹೆದರಲ್ಲ; ಡಿಸಿಎಂ ಗುಡುಗುಹೈಕಮಾಂಡ್‌ದು ನಮದು ತಾಯಿ ಮಕ್ಕಳ ಸಂಬಂಧವಿಪಕ್ಷ ನಾಯಕ, ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ನಮಗೆ ತಾಯಿ ಇದ್ದ ಹಾಗೆ ನಾವೆಲ್ಲಾ ಮಕ್ಕಳು. ಮಕ್ಕಳು ತಾಯಿ ಮೇಲೆ ಮುನಿಸಿಕೊಳ್ಳೋದಿಲ್ಲ. ಯಾಕೆಂದ್ರೆ ತಾಯಿ ಮಕ್ಕಳಿಗೆ ಒಳ್ಳೆಯದನ್ನೇ ಮಾಡೋದು, ಕೆಟ್ಟದನ್ನ ಮಾಡೋದಿಲ್ಲ ಅಂತ ಹೇಳಿದ್ರು.

Post a Comment

Previous Post Next Post