Actor Vijay Raghavendra Wife: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದು, ನಾಳೆ ಬೆಳಗ್ಗೆ ಪಾರ್ಥಿವ ಶರೀರ ಬೆಂಗಳೂರಿಗೆ ಬರಲಿದೆ.ಸ್ಪಂದನಾ ನಿಧನಕ್ಕೆ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾ ಆಘಾತ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ವಿಜಯ್ ರಾಘವೇಂದ್ರ ಮನೆಯಲ್ಲಿ ಸುಮಾ ಕೆಲಸ ಮಾಡಿಕೊಂಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಸುಮಾ, ಮನೆಯಲ್ಲಿ ಅಣ್ಣಾ, ಶೌರ್ಯಾ ಇರ್ತಾನೆ. ಹೋಗಿ ನೋಡಿಕೊಂಡು ಬಾ. ಏನಾದ್ರೂ ಅಡುಗೆ ಮಾಡಿಕೊಟ್ಟು ಬಾ ಎಂದು ಹೇಳಿದರು.ಮೊದಲಿಗೆ ಸುದ್ದಿ ಕೇಳಿದಾಗ ನಂಬಲಿಲ್ಲ. ಫೋನ್ ಮಾಡಿ ಕೇಳಿದಾಗ ನಿಜ ಅಂತ ಗೊತ್ತಾಯ್ತು. ಈಗ ಮಲ್ಲೇಶ್ವರದ ನಿವಾಸಕ್ಕೆ ಹೋಗುತ್ತಿದ್ದೇನೆ. ಅಕ್ಕಾ ಸ್ವಲ್ಪ ಸಣ್ಣ ಆಗಿದ್ದರು. ಆದ್ರೆ ಅದಕ್ಕೆ ಅಂತೆ ಯಾವುದೇ ಸ್ಪೆಷಲ್ ಆಹಾರ ತೆಗೆದುಕೊಳ್ಳುತ್ತಿರಲಿಲ್ಲ. ಮನೆಯಲ್ಲಿ ಎಲ್ಲರಿಗೂ ಮಾಡುವ ಅಡುಗೆಯನ್ನು ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದರು.ಕೋವಿಡ್ ಸಮಯದಲ್ಲಿ ಮನೆಯಲ್ಲಿಯೇ ಇದ್ದಿದರಿಂದ ದಪ್ಪ ಆಗಿದ್ದರು. ಹಾಗಾಗಿ ಸಣ್ಣ ಆಗಿದ್ದರು. ತೂಕ ಇಳಿಕೆಗೆ ಪ್ರತ್ಯೇಕ ಆಹಾರ ತೆಗೆದುಕೊಳ್ಳುತ್ತಿರಲಿಲ್ಲ. ಮನೆಯ ಆರೋಗ್ಯಕರ ಆಹಾರವನ್ನೇ ತೆಗೆದುಕೊಳ್ಳುತ್ತಿದ್ದರು. ಸೋಮವಾರ ರಾತ್ರಿ ಹೋಗಿದ್ದು, ಒಂದು ವಾರ ಮನೆಯಲ್ಲಿ ಇರಲ್ಲ. ಮನೆಯಲ್ಲಿ ಅಣ್ಣ ಮತ್ತು ಶೌರ್ಯಾ ಇರುತ್ತಾರೆ. ಅವರನ್ನು ನೋಡಿಕೊಳ್ಳು ಅಂತ ಹೇಳಿದ್ದರು. ನಿನ್ನೆಯೇ ಬರಬೇಕಿತ್ತು. ಈಗ ಈ ಸುದ್ದಿ ಬಂದಿದೆ ಎಂದರು.ಸ್ಪಂದನಾ ಅವರ ನಿಧನಕ್ಕೆ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ಸ್ಪಂದನಾ ಅವರು ನಿವೃತ್ತ ಪೊಲೀಸ್ ಅಧಿಕಾರಿ ಬಿಕೆ ಶಿವರಾಂ ಅವರ ಪುತ್ರಿ.

Post a Comment