ತಿರುಪತಿ ಲಡ್ಡು ತಯಾರಿಕೆಗೆ ತುಪ್ಪ ಪೂರೈಕೆ ಮಾಡಲು ಟಿಟಿಡಿ ಅನುಮತಿ ನೀಡಿಲ್ಲ ಎಂಬ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳ (KMF) ಅಧ್ಯಕ್ಷರು ಹೇಳಿರುವ ಮಾತು ಸತ್ಯಕ್ಕೆ ದೂರವಾದದ್ದು ಎಂದು ಟಿಟಿಡಿ ಇಒ ಧರ್ಮರೆಡ್ಡಿ ಮಂಗಳವಾರ ತಿಳಿಸಿದ್ದಾರೆ.ತಿರುಪತಿ ಲಡ್ಡು ತಯಾರಿಕೆಗೆ ತುಪ್ಪ ಪೂರೈಕೆ ಮಾಡಲು ಟಿಟಿಡಿ ಅನುಮತಿ ನೀಡಿಲ್ಲ ಎಂಬ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಅಧ್ಯಕ್ಷರು ಹೇಳಿರುವ ಮಾತು ಸತ್ಯಕ್ಕೆ ದೂರವಾದದ್ದು ಎಂದು ಟಿಟಿಡಿ ಇಒ ಧರ್ಮರೆಡ್ಡಿ ಮಂಗಳವಾರ ತಿಳಿಸಿದ್ದಾರೆ. ಮಂಗಳವಾರ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಧರ್ಮಾರೆಡ್ಡಿ ಕೆಎಂಎಫ್ ಅಧ್ಯಕ್ಷ ಆರೋಪ ಸರಿಯಲ್ಲ. ತುಪ್ಪ ಸೇರಿ ತನಗೆ ಬೇಕಾದ ಎಲ್ಲಾ ವಸ್ತುಗಳನ್ನು ಟಿಟಿಡಿ ಇ–ಟೆಂಡರ್ ಮೂಲಕ ಸಂಗ್ರಹಿಸುತ್ತದೆ.ಟಿಟಿಡಿ ಇ–ಟೆಂಡರ್ ಮೂಲಕ ಭಾರತದಾದ್ಯಂತ ಬಿಡ್‌ಗಳನ್ನು ಆಹ್ವಾನಿಸಲಾಗುತ್ತದೆ. ಟೆಂಡರ್ ತೆರೆಯುವವರೆಗೂ ಯಾರು ಬಿಡ್ ಸಲ್ಲಿಸಿದ್ದಾರೆ ಎನ್ನುವ ಮಾಹಿತಿಯೂ ನಮಗೆ ಇರುವುದಿಲ್ಲ. ಜೊತೆಗೆ ಟಿಟಿಡಿ ಸರ್ಕಾರಿ ಸಂಸ್ಥೆಯಾಗಿರುವುದರಿಂದ ಇ-ಟೆಂಡರ್ ನಿಯಮಗಳ ಪ್ರಕಾರ ನಾವು ಬಿಡ್ ಅಂತಿಮಗೊಳಿಸುತ್ತೇವೆ. ಇ-ಟೆಂಡರ್ ನಲ್ಲಿ ಯಾರು ಕಡಿಮೆ ಮೊತ್ತಕ್ಕೆ ಗುಣಮಟ್ಟದ ತುಪ್ಪ ಸರಬರಾಜು ಮಾಡಲು ಒಪ್ಪಿಗೆ ನೀಡಿರುತ್ತಾರೆಯೋ ಅವರಿಗೆ ಗುತ್ತಿಗೆ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಸಾದ ತಯಾರಿಸಲು ಟಿಟಿಡಿ ಪ್ರತಿ ವರ್ಷ 5 ಸಾವಿರ ಟನ್ ತುಪ್ಪವನ್ನು ಬಳಸುತ್ತದೆ. ಲಡ್ಡು ಮತ್ತು ಇತರ ಪ್ರಸಾದ ತಯಾರಿಕೆಗೆ ಸುಮಾರು 5 ಸಾವಿರ ಟನ್ ತುಪ್ಪವನ್ನು ಬಳಸಲಾಗುತ್ತದೆ.ತುಪ್ಪದ ಗುಣಮಟ್ಟವನ್ನು ರಾಜಿ ಮಾಡಿಕೊಳ್ಳದೆ ಪರೀಕ್ಷಿಸಲು ಟಿಟಿಡಿ ತಿರುಮಲದಲ್ಲಿ ಅತ್ಯಾಧುನಿಕ ಪ್ರಯೋಗಾಲಯವನ್ನು ಕೂಡ ನಿರ್ಮಿಸಿದೆ. ಪ್ರತಿ 6 ತಿಂಗಳಿಗೊಮ್ಮೆ ಟೆಂಡರ್ ಕರೆದು ಇ-ಪ್ರೊಕ್ಯೂರ್‌ಮೆಂಟ್ ಮೂಲಕ ತುಪ್ಪವನ್ನು ಸಂಗ್ರಹಿಸುತ್ತದೆ.ಆ ಮಟ್ಟಿಗೆ ಪ್ರತಿ ವರ್ಷ ಎರಡು ಬಾರಿ ಟೆಂಡರ್ ಕರೆಯಲಾಗುತ್ತದೆ. ಮಾಹಿತಿಯ ಪ್ರಕಾರ ಟಿಟಿಡಿ ಮಾರ್ಚ್ 2023 ರಲ್ಲಿ 20 ಲಕ್ಷ ಕೆಜಿ ತುಪ್ಪವನ್ನು ಖರೀದಿಸಲು ಟೆಂಡರ್ ಕರೆದಿತ್ತು. ಇದರಲ್ಲಿ ಆರು ಸಂಸ್ಥೆಗಳ ಪೈಕಿ ಎರಡನ್ನು ಆಯ್ಕೆ ಮಾಡಿದೆ. ಉತ್ತರ ಪ್ರದೇಶದ ಆಲ್ಫಾ ಕಂಪನಿಗಳ ಪ್ರೀಮಿಯರ್ ತುಪ್ಪವನ್ನು ಪೂರೈಸಲು ಅರ್ಹತೆ ಪಡೆದಿವೆ.ಮಾರ್ಚ್ 2021 ರವರೆಗೆ, ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಬ್ರಾಂಡ್ ತುಪ್ಪವನ್ನು ಟಿಟಿಡಿಗೆ ಸರಬರಾಜು ಮಾಡಿದೆ. ಮಾರ್ಚ್ 2021 ರಲ್ಲಿ ನಡೆದ ಟೆಂಡರ್‌ಗಳಲ್ಲಿ 1-3 ಶ್ರೇಣಿಯಲ್ಲಿದ್ದ ಕರ್ನಾಟಕ ಹಾಲು ಒಕ್ಕೂಟವು ಎಲ್ -1 ಮತ್ತು ಎಲ್ -2 ಅನುಮತಿಯೊಂದಿಗೆ ಟಿಟಿಡಿಗೆ 20 ಲಕ್ಷ ಕೆಜಿ ತುಪ್ಪದಲ್ಲಿ ಕೇವಲ 20 ಪ್ರತಿಶತವನ್ನು ಮಾತ್ರ ಪೂರೈಸಿದೆ. ಆ ನಂತರ ಟೆಂಡರ್ ಪ್ರಕ್ರಿಯೆಯಲ್ಲಿಯೇ ಭಾಗವಹಿಸದ ಕೆಎಂಎಫ್ ಟಿಟಿಡಿಗೆ ಕಡಿಮೆ ಬೆಲೆಗೆ ತುಪ್ಪ ಪೂರೈಕೆ ಮಾಡಲು ಬೇಡಿಕೆ ಇಟ್ಟಿದೆ ಎಂದು ಕಾರಣ ಹೇಳಿದೆ ಎಂದು ಟಿಟಿಡಿ ಅಸಮಾಧಾನ ವ್ಯಕ್ತಪಡಿಸಿದೆ.ಲಡ್ಡು ತಯಾರಿಕೆಗೆ ಅಗತ್ಯವಿರುವ ತುಪ್ಪ ಪೂರೈಸಲು ಟಿಟಿಡಿ ಟೆಂಡರ್ ಕರೆದಿತ್ತು. ಆದರೆ, ನಮ್ಮ ಉತ್ಪನ್ನದ ಗುಣಮಟ್ಟ ಹಾಗೂ ಅದಕ್ಕೆ ತಕ್ಕಂತೆ ದರ ಹೆಚ್ಚಿರುವುದರಿಂದ ಟೆಂಡರ್ನಲ್ಲಿ ಪಾಲ್ಗೊಂಡಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ ನಿನ್ನೆ ಬಳ್ಳಾರಿಯಲ್ಲಿ ತಿಳಿಸಿದ್ದರು.

Post a Comment