ಸಾನಿಧ್ಯ, ಮೃತ ಕಂದಮ್ಮ
ಮೊಬೈಲ್ ಚಾರ್ಜರ್ ನಿಂದ ಅವಘಡ ಸಂಭವಿಸಿದೆ, ಮೊಬೈಲ್ ತೆಗೆದು ಚಾರ್ಜರ್ ಆನ್ ಮಾಡಿಯೇ ಬಿಟ್ಟಿದ್ದರು ಎಂದು ಸ್ಥಳೀಯ ವ್ಯಕ್ತಿ ಮಾಹಿತಿ ನೀಡಿದ್ದಾರೆ. ಕಾರವಾರ: ಮೊಬೈಲ್ ಚಾರ್ಜರ್‌ನಿಂದ (Mobile Charger) ಶಾಕ್ ತಗುಲಿ ಎಂಟು ತಿಂಗಳ ಮಗು (Child) ಸಾವನ್ನಪ್ಪಿರುವ ಘಟನೆ ಕಾರವಾರದ (Karwar) ಸಿದ್ದರ ಗ್ರಾಮದಲ್ಲಿ ನಡೆದಿದೆ. ಸಂತೋಷ ಕಲ್ಗುಟ್ಕರ್ ಹಾಗೂ ಸಂಜನಾ ಅವರ ಎಂಟು ತಿಂಗಳ ಹೆಣ್ಣು ಮಗು ಸಾನಿಧ್ಯ ಸ್ಥಳದಲ್ಲೇ ಸಾನ್ನಪ್ಪಿದ್ದ ದುರ್ದೈವಿಯಾಗಿದೆ. ಮೊಬೈಲ್ ಚಾರ್ಜ್ ಹಾಕಿ ಸ್ವಿಚ್ ಆಫ್ (Switch Off) ಮಾಡದೇ ಬಿಟ್ಟಿದ್ದ ಕಾರಣ ದುರ್ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆನ್ ಇದ್ದ ಮೊಬೈಲ್ (Mobile) ಚಾರ್ಜರ್ ಬಾಯಲ್ಲಿಟ್ಟುಕೊಂಡ ವೇಳೆ ಮಗುವಿಗೆ ಕರೆಂಟ್ ಶಾಕ್ (Electric Shock) ಹೊಡೆದಿದೆ. ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಗ್ರಾಮದ ನಿವಾಸಿ ಜ್ಞಾನೇಶ್ವರ್, ಮಗುವಿಗೆ ಶಾಕ್ ತಾಗಿದೆ ಎಂದು ಆಳುತ್ತಾ ಪೋಷಕರು ಕಾಲ್ ಮಾಡಿದ್ದರು. ಕೂಡಲೇ ನಾವು ಸ್ಥಳಕ್ಕೆ ಹೋಗಿದ್ದೇವು, ಆ ವೇಳೆ ಮಗುವನ್ನು ಆಸ್ಪತ್ರೆಗೆ ಕರೆಕೊಂಡು ಬಂದೆವು, ಆದರೆ ಆಸ್ಪತ್ರೆಯ ವೈದ್ಯರು ಆಗೋದಿಲ್ಲ. ಮಗು ಸಾವನ್ನಪ್ಪಿದ್ದೆ ಅಂತ ಘೋಷಣೆ ಮಾಡಿದ್ದರು. ಮೊಬೈಲ್ ಚಾರ್ಜರ್ ನಿಂದ ಅವಘಡ ಸಂಭವಿಸಿದೆ, ಮೊಬೈಲ್ ತೆಗೆದು ಚಾರ್ಜರ್ ಆನ್ ಮಾಡಿಯೇ ಬಿಟ್ಟಿದ್ದರು. ಮಗು ಆಡುವಾಗ ಬಾಯಲ್ಲಿ ಹಾಕಿಕೊಂಡಿದೆ. ಇದರಿಂದ ಕರೆಂಟ್ ಶಾಕ್ ತಾಗಿದೆ. ಮೊದಲ ಮಗುವಿನ ಹುಟ್ಟಹಬ್ಬ ಇಂದು ಇತ್ತ, ಈ ದಿನವೇ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.ಕಲುಷಿತ ನೀರು ಸೇವನೆ; ಸಾವಿನ ಸಂಖ್ಯೆ 3ಕ್ಕೆ ಏರಿಕೆ ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವನೆ ಪ್ರಕರಣ ಸಂಬಂಧ ಮೂರನೇ ಸಾವಾಗಿದೆ. 25 ವರ್ಷದ ಪ್ರವೀಣ್ ಎಂಬಾತ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.ಇನ್ನು ಘಟನೆಯ ತನಿಖೆ ಚುರುಕಾಗಿದೆ. ಓವರ್ ಹೆಡ್ ಟ್ಯಾಂಕ್ ನೀರನ್ನ ಎಫ್‌ಎಸ್‌ಎಲ್‌ಗೆ ಕಳಿಸಲಾಗಿದೆ. ಈ ನಡುವೆ 78ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದು ಎಲ್ಲರಿಗೂ ಚಿಕಿತ್ಸೆ ಮುಂದುವರಿದಿದೆ. ನೀರಿಗೆ ವಿಷ ಹಾಕಲಾಗಿದೆ. ದಲಿತರ ಮೇಲಿನ ದ್ವೇಷದಿಂದ ಹೀಗೆ ಮಾಡಲಾಗ್ತಿದೆ ಎಂದು ಹರಳ ಮಠದ ಸ್ವಾಮೀಜಿ ಆರೋಪ ಮಾಡಿದ್ದಾರೆ.ಇದನ್ನೂ ಓದಿ: Moral Policing: ವೈದ್ಯರು, ಪ್ರಾಧ್ಯಾಪಕರ ಮೇಲೆ ನೈತಿಕ ಪೊಲೀಸ್ಗಿರಿ; ಐವರ ಬಂಧನಇಬ್ಬರ ಸಾವಿನ ಬಳಿಕ ಓವರ್‌ಹೆಡ್ ಟ್ಯಾಂಕ್‌ನಿಂದ ನೀರು ಸರಬರಾಜು ನಿಲ್ಲಿಸಲಾಗಿತ್ತು. ಈ ಬಗ್ಗೆ ನ್ಯೂಸ್18 ಕನ್ನಡ ವರದಿ ಮಾಡ್ತಿದ್ದಂತೆ ನಗರಸಭೆ ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದ್ದಾರೆ. ಈ ನಡುವೆ ಪರಿಹಾರಕ್ಕೆ ಆಗ್ರಹಿಸಿ ಕುಟುಂಬದವರು ಪ್ರತಿಭಟನೆ ಮಾಡಿದರು. ತಹಶೀಲ್ದಾರ್ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿ, ಅಂತ್ಯಕ್ರಿಯೆ ಮಾಡುವಂತೆ ಮನವಿ ಮಾಡಿದರು.

Post a Comment