ಒಂದು ಕಡೆ ಪುಣೆಯಲ್ಲಿ ಆಗುತ್ತಿರುವ ಅಭಿವೃದ್ಧಿಯನ್ನು ನಾವು ನೋಡಬಹುದು ಮತ್ತು ಇನ್ನೊಂದು ಕಡೆ ಬೆಂಗಳೂರಿನಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ನೋಡಬಹುದು. ಬೆಂಗಳೂರು ಪ್ರಮುಖ ಐಟಿ ಕೇಂದ್ರವಾಗಿದೆ, ವೇಗದ ಅಭಿವೃದ್ಧಿ ಆಗಬೇಕಿತ್ತು. ಆದರೆ ಅಲ್ಲಿನ ಹೊಸ ಸರ್ಕಾರ ರಾಜ್ಯದ ಅಭಿವೃದ್ದಿಗೆ ತಮ್ಮ ಬಳಿ ಹಣವಿಲ್ಲ ಘೋಷಣೆ ಮಾಡಿದೆ ಎಂದು ಮೋದಿ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ.ಪುಣೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮಂಗಳವಾರ ಪುಣೆಯಲ್ಲಿ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ (Lokmanya Tilak award) ಸ್ವೀಕರಿಸಿದರು. ಈ ವೇಳೆ ಪ್ರಧಾನಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಉಪಮುಖ್ಯ ಮಂತ್ರಿಗಳಾದ ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ ಹಾಗೂ ಎನ್ಸಿಪು ಮುಖ್ಯಸ್ಥ ಶರದ್ ಪವಾರ್ (Shard Pawar) ಅವರೊಂದಿಗೆ ವೇದಿಕೆ ಹಂಚಿಕೊಂಡರು. ಈ ಕಾರ್ಯಕ್ರಮದ ವೇಳೆ ಪ್ರಶಸ್ತಿ ಸ್ವೀಕರಿಸಿದ ಪಿಎಂಗೆ ಎನ್ಸಿಪಿ ದುರೀಣ ಅಭಿನಂದನೆ ಸಲ್ಲಿಸಿದರು.ಮೊದಲ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ಶಿವಾಜಿಕಾರ್ಯಕ್ರಮ ಕುರಿತು ಮಾತನಾಡಿದ ಮೋದಿ, ದೇಶದಲ್ಲಿ ಪುಣೆಗೆ ವಿಶೇಷ ಪ್ರಾಮುಖ್ಯತೆ ಇದೆ ಎಂದು ನಾನು ಇಲ್ಲಿ ಹೇಳಲು ಬಯಸುತ್ತೇನೆ. ಛತ್ರಪತಿ ಶಿವಾಜಿ ಮಹಾರಾಜರು ಪುಣೆ ಜಿಲ್ಲೆಯ ಶಿವನೇರಿ ಕೋಟೆಯಲ್ಲಿ ಜನಿಸಿದರು. ಅನೇಕ ರಾಜರು ತಮ್ಮ ಹೆಸರಿನಲ್ಲಿ ರಾಜ್ಯಗಳನ್ನು ಸ್ಥಾಪಿಸಿದರು ಆದರೆ ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ್ಯವನ್ನು ಸ್ಥಾಪಿಸಿದರು. ಇತ್ತೀಚಿನ ದಿನಗಳಲ್ಲಿ ನಮ್ಮ ಜವಾನರು ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರು. ಆದರೆ ಶಿವಾಜಿ ಹಿಂದೆಯೇ ಶೈಸ್ತಾ ಖಾನ್ ವಿರುದ್ಧ ಲಾಲ್ ಮಹಲ್‌ನಲ್ಲಿ ಮೊದಲ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರು” ಎಂದು ನೆನಪಿಸಿಕೊಂಡರು.
ಇದನ್ನೂ ಓದಿ: IAS Officer: ಬಂಗಲೆ ನಿರ್ಮಿಸಲು 15ನೇ ಶತಮಾನದ ಸ್ಮಾರಕವನ್ನು ನೆಲಸಮಗೊಳಿಸಿದ ಐಎಎಸ್ ಅಧಿಕಾರಿ ಅಮಾನತು ಸ್ವಾತಂತ್ರ್ಯ ಹೋರಾಟದಲ್ಲಿ ಲೋಕಮಾನ್ಯ ತಿಲಕರ ಪಾತ್ರ ದೊಡ್ಡದುಮುದುವರಿದು ಮಾತನಾಡಿ ಪ್ರಧಾನಿ ಮೋದಿ, "ಇದು ನನಗೆ ಸ್ಮರಣೀಯ ಕ್ಷಣ, ನಾನು ಇಲ್ಲಿಗೆ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದ್ದರೂ, ನಾನು ಸಹ ಭಾವುಕನಾಗಿದ್ದೇನೆ. ಲೋಕಮಾನ್ಯ ತಿಲಕರು ನಮ್ಮ ಸ್ವಾತಂತ್ರ್ಯ ಹೋರಾಟದ ತಿಲಕ. ಭಾರತದ ಸ್ವಾತಂತ್ರ್ಯದಲ್ಲಿ ಲೋಕಮಾನ್ಯ ತಿಲಕರ ಪಾತ್ರ, ಅವರ ಕೊಡುಗೆಯನ್ನು ಕೆಲವೇ ಪದಗಳಲ್ಲಿ ಅಥವಾ ಕೆಲವು ಘಟನೆಗಳನ್ನು ವಿವರಿಸುವ ಮೂಲಕ ಸಂಕ್ಷಿಪ್ತಗೊಳಿಸಲಾಗುವುದಿಲ್ಲ. ನಾನು ಅವರಿಗೆ ಮತ್ತು ನಮ್ಮ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುತ್ತೇನೆ. ಮಹಾರಾಷ್ಟ್ರದ ನೆಲದಲ್ಲಿರುವುದಕ್ಕೆ ನನಗೆ ಗೌರವವಿದೆ ಎಂದು ತಿಳಿಸಿದರು.ಪ್ರಶಸ್ತಿ ಹಣ ನಮಾಮಿ ಯೋಜನೆಗೆನಾನು ಬಹುಮಾನದ ಹಣವನ್ನು ನಮಾಮಿ ಗಂಗೆ ಯೋಜನೆಗೆ ನೀಡಲು ನಿರ್ಧರಿಸಿದ್ದೇನೆ. ಈ ಪ್ರಶಸ್ತಿಯನ್ನು ದೇಶದ 140 ಕೋಟಿ ಜನರಿಗೆ ಅರ್ಪಿಸಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಹೇಳಿದರು. ಈ ಪ್ರಶಸ್ತಿಗೆ ಒಂದು ಲಕ್ಷ ನಗದನ್ನು ನೀಡಲಾಗುತ್ತದೆ.ಇದನ್ನೂ ಓದಿ: Land For Job Scam: 'ಇಡಿ' ಇಕ್ಕಳದೊಳಗೆ ಲಾಲೂ ಫ್ಯಾಮಿಲಿ, ಮಾಜಿ ಸಿಎಂ ಕುಟುಂಬದ 6 ಕೋಟಿ ಆಸ್ತಿ ಸೀಜ್!ಕಾಂಗ್ರೆಸ್ ಸರ್ಕಾರಗಳನ್ನು ತೆಗಳಿದ ಮೋದಿಒಂದು ಕಡೆ ಪುಣೆಯಲ್ಲಿ ಆಗುತ್ತಿರುವ ಅಭಿವೃದ್ಧಿಯನ್ನು ನಾವು ನೋಡಬಹುದು ಮತ್ತು ಇನ್ನೊಂದು ಕಡೆ ಬೆಂಗಳೂರಿನಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ನೋಡಬಹುದು. ಬೆಂಗಳೂರು ಪ್ರಮುಖ ಐಟಿ ಕೇಂದ್ರವಾಗಿದೆ, ವೇಗದ ಅಭಿವೃದ್ಧಿ ಆಗಬೇಕಿತ್ತು. ಆದರೆ ಅಲ್ಲಿನ ಹೊಸ ಸರ್ಕಾರ ಇತ್ತೀಚೆಗೆ ರಾಜ್ಯದ ಅಭಿವೃದ್ದಿಗೆ ತಮ್ಮ ಬಳಿ ಹಣವಿಲ್ಲ ಎಂಬ ದೊಡ್ಡ ಘೋಷಣೆ ಮಾಡಿದೆ. ಸರ್ಕಾರ ರಚನೆಯಾದ ಕಡಿಮೆ ಸಮಯದಲ್ಲಿ ಇಡೀ ರಾಷ್ಟ್ರವು ಕಾಂಗ್ರೆಸ್ ಸರ್ಕಾರದ ಫಲಿತಾಂಶವನ್ನು ನೋಡುತ್ತಿದೆ. ಅಭಿವೃದ್ಧಿಗೆ ಹಣವಿಲ್ಲ ಎಂದು ಕರ್ನಾಟಕ ಸರ್ಕಾರವೇ ಒಪ್ಪಿಕೊಂಡಿದೆ ಮತ್ತು ರಾಜಸ್ಥಾನದಲ್ಲೂ ಅದೇ ಪರಿಸ್ಥಿತಿ ಇದೆ. ಆ ರಾಜ್ಯಗಳಲ್ಲಿ ಸಾಲಗಳು ಹೆಚ್ಚಾಗುತ್ತಿವೆ ಮತ್ತು ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

Post a Comment