Special Parliament Session: 5 ದಿನಗಳ ದಿಢೀರ್ ಅಧಿವೇಶನ ಕರೆದ ಮೋದಿ ಸರ್ಕಾರ, ಚುನಾವಣೆ ರೀತಿಯಲ್ಲೇ ಬದಲಾವಣೆ?


 ನರೇಂದ್ರ ಮೋದಿ

 ಮುಂಬರುವ ವಿಶೇಷ ಅಧಿವೇಶನದಲ್ಲಿ, ಮೋದಿ ಸರ್ಕಾರ ಸಂಸತ್ತಿನಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ಮಸೂದೆಯನ್ನು ತರಬಹುದು. ಇದೇ ವೇಳೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಮತ್ತೊಮ್ಮೆ ಸದನದಲ್ಲಿ ವಾಗ್ವಾದದ ವಾತಾವರಣ ನಿರ್ಮಾಣವಾಗಬಹುದು.ನವದೆಹಲಿ(ಸೆ.01): ಕೇಂದ್ರ ಸರ್ಕಾರ ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು (Special Parliament Session) ಕರೆದಿದ್ದು, ಇದು ಐದು ದಿನ ನಡೆಯಲಿವೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ಗುರುವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಮಾಹಿತಿ ನೀಡಿದ್ದಾರೆ. ಇದಾದ ನಂತರ ವಿಶೇಷ ಅಧಿವೇಶನದಲ್ಲಿ ಮೋದಿ ಸರ್ಕಾರ ಮಹತ್ವದ ಮಸೂದೆಯನ್ನು ತರಬಹುದು ಎಂಬ ಊಹಾಪೋಹ ಶುರುವಾಗಿದೆ. ಮೂಲಗಳ ಪ್ರಕಾರ ಐದು ದಿನಗಳ ಕಾಲ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ‘ಒಂದು ದೇಶ-ಒಂದು ಚುನಾವಣೆ’ (One Nation- One Election) ಮಸೂದೆಯನ್ನು ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗಿದೆ.ಒಂದು ದೇಶ-ಒಂದು ಚುನಾವಣೆ’ ನೀತಿಯನ್ನು ಬಿಜೆಪಿ ಬಹಳ ಹಿಂದಿನಿಂದಲೂ ಬಯಸುತ್ತಿದೆ. ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಒಂದು ದೇಶ, ಒಂದು ಚುನಾವಣೆ ಭಾರತದ ಅಗತ್ಯ ಎಂದು ಹೇಳಿದ್ದಾರೆ. ಮುಂಬರುವ ವಿಶೇಷ ಅಧಿವೇಶನದಲ್ಲಿ ಮೋದಿ ಸರ್ಕಾರ ಸಂಸತ್ತಿನಲ್ಲಿ ಒಂದು ರಾಷ್ಟ್ರ-ಒಂದು ಚುನಾವಣೆಯ ಮಸೂದೆಯನ್ನು ತರಬಹುದು ಎಂದು ಹಲವು ವರದಿಗಳು ಉಲ್ಲೇಖಿಸಿದೆ. ಇದೇ ವೇಳೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಮತ್ತೊಮ್ಮೆ ಸದನದಲ್ಲಿ ವಾಗ್ವಾದದ ವಾತಾವರಣ ನಿರ್ಮಾಣವಾಗಬಹುದು. ಇದನ್ನೂ ಓದಿ: ಒಳ್ಳೆ ಊಟ ಹೇಗಿರತ್ತೆ ಎಂಬುದನ್ನೇ ಮರೆತಿದ್ದೆ: ಬಿಡುಗಡೆ ನಂತರ ಮನೆ ಊಟ ಮಾಡಿದ ಓಮರ್ ಅಬ್ದುಲ್ಲಾ ಪ್ರತಿಕ್ರಿಯೆಕಾನೂನು ಆಯೋಗವೂ ಒಂದು ರಾಷ್ಟ್ರ, ಒಂದು ಚುನಾವಣೆಯ ಬಗ್ಗೆ ಅತ್ಯಂತ ಸಕ್ರಿಯವಾಗಿದೆ. ಈ ವರ್ಷದ ಆರಂಭದಲ್ಲಿ, ಇದು ವಿವಿಧ ರಾಜಕೀಯ ಪಕ್ಷಗಳಿಂದ ಉತ್ತರಗಳನ್ನು ಕೇಳಿತ್ತು. ಮುಂದಿನ ದಿನಗಳಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಅದಕ್ಕೂ ಮುನ್ನ ಸರಕಾರ ಈ ವಿಧೇಯಕ ತಂದರೆ ಅದೊಂದು ದೊಡ್ಡ ಹೆಜ್ಜೆ ಎನಿಸುವುದು ಖಂಡಿತ. ಇದನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳೂ ವಿರೋಧಿಸಬಹುದು. ಒಂದು ರಾಷ್ಟ್ರ-ಒಂದು ಚುನಾವಣೆಯ ಅಡಿಯಲ್ಲಿ, ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆಯಲಿವೆ. .18ರಿಂದ 22ರವರೆಗೆ ವಿಶೇಷ ಅಧಿವೇಶನ ಕರೆಯಲಾಗಿದೆ‘ಅಮೃತ್ ಕಾಲ’ದ ಸಂದರ್ಭದಲ್ಲಿ ಸೆಪ್ಟೆಂಬರ್ 18ರಿಂದ 22ರವರೆಗೆ ‘ಸಂಸತ್ತಿನ ವಿಶೇಷ ಅಧಿವೇಶನ’ವನ್ನು ಕೇಂದ್ರ ಸರ್ಕಾರ ಕರೆದಿದ್ದು, ಇದರಲ್ಲಿ ಐದು ಸಭೆಗಳು ನಡೆಯಲಿವೆ. ಸಂಸದೀಯ ವ್ಯವಹಾರಗಳ ಸಚಿವ ಜೋಶಿ ಸಾಮಾಜಿಕ ಜಾಲತಾಣ 'X' ನಲ್ಲಿ ಮಾಡಿರುವ ತಮ್ಮ ಪೋಸ್ಟ್‌ನಲ್ಲಿ, "ಸಂಸತ್ತಿನ ವಿಶೇಷ ಅಧಿವೇಶನವನ್ನು (17 ನೇ ಲೋಕಸಭೆಯ 13 ನೇ ಮತ್ತು ರಾಜ್ಯಸಭೆಯ 261 ನೇ ಅಧಿವೇಶನ) ಸೆಪ್ಟೆಂಬರ್ 18 ರಿಂದ 22 ರವರೆಗೆ ಕರೆಯಲಾಗಿದೆ ಎಂದಿದ್ದಾರೆ. ಅದರೆ ಅಧಿವೇಶನದ ಅಜೆಂಡಾ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದಾಗ್ಯೂ, ಈ ಅಧಿವೇಶನವು ರಾಷ್ಟ್ರ ರಾಜಧಾನಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ಜಿ 20 ಶೃಂಗಸಭೆಯ ಕೆಲವು ದಿನಗಳ ನಂತರ ನಡೆಯಲಿದೆ. ಸಂಸತ್ತಿನ ಈ ವಿಶೇಷ ಅಧಿವೇಶನದಲ್ಲಿ ಐದು ಸಬೆಗಲು ನಡೆಯಲಿವೆ ಎಂದು ಜೋಶಿ ಹೇಳಿದರು. ಸಂಸದೀಯ ವ್ಯವಹಾರಗಳ ಸಚಿವರು, "ಅಮೃತ ಕಾಲದ ಸಮಯದಲ್ಲಿ ನಡೆಯುವ ಈ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆ ಮತ್ತು ಚರ್ಚೆಯ ಭರವಸೆ ಇದೆ" ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.ಇನ್ನು ಈ ಅಧಿವೇಶನದಲ್ಲಿ ‘ಒಂದು ದೇಶ-ಒಂದು ಚುನಾವಣೆ’ ಹೊರತುಪಡಿಸಿ ಯೂನಿಫಾರ್ಮ್ ಸಿವಿಲ್ ಕೋಡ್ ಹಾಗೂ ಶೇ.33 ರಷ್ಟು ಮಹಿಳಾ ಮೀಸಲಾತಿ ಮಾಸೂದೆ ಮಂಡನೆಯ ಸಾಧ್ಯತೆಯೂ ಇದೆ ಎನ್ನಲಾಗಿದೆ.

Post a Comment

Previous Post Next Post