ಪಾಕಿಸ್ತಾನದಲ್ಲಿ ಆತ್ಮಹತ್ಯಾ ದಾಳಿ
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬನ್ನು ಜಿಲ್ಲೆಯಲ್ಲಿ ಬೈಕ್ ರೈಡಿಂಗ್ ಮೂಲಕ ಆತ್ಮಹತ್ಯಾ ಬಾಂಬರ್ ಪಾಕಿಸ್ತಾನದ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾನೆ ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗ 'ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್' ಹೇಳಿದೆ.ಪೇಶಾವರ: ಯಾವ ಭಯೋತ್ಪಾದನೆಯ ಬೆಂಕಿ ಭಾರತ ಸೇರಿದಂತೆ ಜಗತ್ತನ್ನು ಸುಡಲು ಆರಂಭಿಸಿದೆಯೋ, ಈಗ ಅದೇ ಭಯೋತ್ಪಾದನೆಯ (Terror Attack) ಬೆಂಕಿ ತನ್ನ ನಾಡನ್ನೇ ಹೊತ್ತಿ ಉರಿಸುತ್ತಿದೆ. ಪಾಕಿಸ್ತಾನದಲ್ಲಿ (Pakistan) ದಿನದಿಂದ ದಿನಕ್ಕೆ ಭಯೋತ್ಪಾದಕರ ಆತ್ಮಾಹುತಿ ದಾಳಿಗಳು ನಡೆಯುತ್ತಿದ್ದು, ಜನರು ತತ್ತರಿಸಿ ಹೋಗುತ್ತಿದ್ದಾರೆ ಎಂಬುದು ಸಾಬೀತಾಗುತ್ತಿದೆ.ನಿಷೇಧಿತ ಭಯೋತ್ಪಾದಕ ಸಂಘಟನೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ನ ಆತ್ಮಹತ್ಯಾ ಬಾಂಬರ್ ಗುರುವಾರ ವಾಯುವ್ಯ ಪಾಕಿಸ್ತಾನದಲ್ಲಿ ಭದ್ರತಾ ಬೆಂಗಾವಲು ಪಡೆಗಳನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ಪರಿಣಾಮ ಒಂಬತ್ತು ಮಂದಿ ಪಾಕಿಸ್ತಾನ ಸೈನಿಕರನ್ನು ಸ್ಥಳದಲ್ಲೇ ಮೃತಪಟ್ಟು 20 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಸೇನೆ ಮಾಹಿತಿ ನೀಡಿದೆ.ಇದನ್ನೂ ಓದಿ: Raksha Bandhan: ಪ್ರಧಾನಿ ಮೋದಿಗೆ ರಾಖಿ ಕಟ್ಟಲು ಪಾಕಿಸ್ತಾನದಿಂದ ದೆಹಲಿಗೆ ಬಂದಿಳಿದ ಸಹೋದರಿಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬನ್ನು ಜಿಲ್ಲೆಯಲ್ಲಿ ಬೈಕ್ ರೈಡಿಂಗ್ ಮೂಲಕ ಆತ್ಮಹತ್ಯಾ ಬಾಂಬರ್ ಪಾಕಿಸ್ತಾನದ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾನೆ ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗ 'ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್' ಹೇಳಿದೆ. ಹೇಳಿಕೆಯ ಪ್ರಕಾರ, ದಾಳಿಕೋರನು ತನ್ನ ಬೈಕನ್ನು ಬೆಂಗಾವಲು ಪಡೆಗಳ ವಾಹನಗಳಿಗೆ ಡಿಕ್ಕಿ ಹೊಡೆದು ಒಂಬತ್ತು ಸೈನಿಕರನ್ನು ಕೊಂದಿದ್ದಾನೆ. ಅಲ್ಲೇ ಇದ್ದ 20 ಸೈನಿಕರು ಗಂಭೀರ ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ನಿಷೇಧಿತ ಭಯೋತ್ಪಾದಕ ಸಂಘಟನೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಹೊತ್ತುಕೊಂಡಿದೆ.ದಾಳಿಯ ನಂತರ, ತಕ್ಷಣ ಸ್ಥಳಕ್ಕೆ ಆಗಮಿಸಿದ ಭದ್ರತಾ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರು ತಕ್ಷಣವೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದರು. ಮತ್ತು ಇಡೀ ಪ್ರದೇಶವನ್ನು ಸುತ್ತುವರೆದರು. ಹೇಳಿಕೆಯ ಪ್ರಕಾರ, ದಾಳಿಯ ದುಷ್ಕರ್ಮಿಗಳನ್ನು ಹಿಡಿಯಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.ಇದನ್ನೂ ಓದಿ: Factory Blast: ಅಕ್ರಮವಾಗಿ ನಿರ್ಮಿಸಿದ್ದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, 9 ಮಂದಿ ಬಲಿ, ಕಟ್ಟಡ ಛಿದ್ರ ಛಿದ್ರ! ಈ ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಆತ್ಮಾಹುತಿ ಬಾಂಬ್ ದಾಳಿ ಕುರಿತ ದುಷ್ಕೃತ್ಯವನ್ನು ಪಾಕಿಸ್ತಾನದ ನಿಯೋಜಿತ ಪ್ರಧಾನಿ ಅನ್ವರುಲ್ ಹಕ್ ಕಾಕರ್ ಖಂಡಿಸಿದ್ದಾರೆ. ಇಂತಹ ಕೃತ್ಯಗಳು ಸಂಪೂರ್ಣ ಖಂಡನೀಯ ಎಂದು ಹೇಳಿರುವ ಅವರು, ಮೃತರ ಮತ್ತು ಗಾಯಗೊಂಡವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

Post a Comment