PUBG ಆಟದಲ್ಲಿ 80 ಸಾವಿರ ಕಳೆದುಕೊಂಡ ವಿದ್ಯಾರ್ಥಿ, ಮನೆಯಲ್ಲಿಯೇ ನೇಣಿಗೆ ಶರಣು!


  ಸಾಂಕೇತಿಕ ಚಿತ್ರ

 ಸಂಬಂಧಿಕರ ಮನೆಯ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದಿದ್ದ ತಾಯಿಗೆ ಬಿಗ್ ಶಾಕ್ ಕಾದಿತ್ತು..ಇರೋ ಒಬ್ಬ ಮಗ ನೇಣು ಕುಣಿಕೆಯಲ್ಲಿ ನೇತಾಡಿ ಆತ್ಮಹತ್ಯೆ ಮಾಡಿಕೊಂಡಿರೋದನ್ನ ತಾಯಿ ಕಣ್ಣಾರೆ ಕಂಡು ಆಘಾತಗೊಂಡಿದ್ದಾರೆ!ಕಲಬುರಗಿ: ಆತ ಬಿಇ ಫಸ್ಟ್ ಇಯರ್ ಸ್ಟೂಡೆಂಟ್ (BE first year student), ಓದಿನಲ್ಲಿ ಸ್ಪೋರ್ಟ್ಸ್ ನಲ್ಲೂ ತುಂಬಾ ಆ್ಯಕ್ಟೀವ್ ಆಗಿದ್ದ ಹುಡುಗ.. ಇರೋ ಒಬ್ಬ ಮಗನ ಮೇಲೆ ತಂದೆ ತಾಯಿ ಬೆಟ್ಟದಷ್ಟು ಕನಸು ಕಟ್ಟಿಕೊಂಡಿದ್ದರು.. ನಿನ್ನೆ ಭಾನುವಾರ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಇದ್ದ ಹಿನ್ನಲೆಯಲ್ಲಿ ತಾಯಿ ಹೈದ್ರಾಬಾದ್‌ಗೆ (Hyderabad) ತೆರಳಿದ್ದರೆ, ತಂದೆ ತಮ್ಮೂರಿಗೆ ತೆರಳಿ ಜಮೀನಿನಲ್ಲಿ ಬಿತ್ತನೆ ಕೆಲಸ ಕಾರ್ಯ ನೋಡೋದಕ್ಕೆ ಮುಂದಾಗಿದ್ದರು.. ಇತ್ತ ಕಾಲೇಜಿಗೆ ರಜೆ ಇದ್ದ ಹಿನ್ನಲೆಯಲ್ಲಿ ಆ ಯುವಕ ಮನೆಯಲ್ಲಿ ಒಬ್ಬನೇ ಇದ್ದ. ಅತ್ತ ಸಂಬಂಧಿಕರ ಮನೆಯ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದಿದ್ದ ತಾಯಿಗೆ ಬಿಗ್ ಶಾಕ್ ಕಾದಿತ್ತು..ಇರೋ ಒಬ್ಬ ಮಗ ನೇಣು ಕುಣಿಕೆಯಲ್ಲಿ ನೇತಾಡಿ ಆತ್ಮಹತ್ಯೆ(Suicide) ಮಾಡಿಕೊಂಡಿರೋದನ್ನ ತಾಯಿ ಕಣ್ಣಾರೆ ಕಂಡು ಆಘಾತಗೊಂಡಿದ್ದಾರೆ!ಇಂಜಿನಿಯರಿಂದ್ ವಿದ್ಯಾರ್ಥಿ ಆತ್ಮಹತ್ಯೆ ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಸುಲಹಳ್ಳಿ ಗ್ರಾಮದ ನಿವಾಸಿಯಾಗಿರುವ ಪ್ರವೀಣ್ ಕುಮಾರ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಕಲಬುರಗಿ ನಗರದ ಖಾಸಗಿ ಕಾಲೇಜ್‌ನಲ್ಲಿ ಇಂಜನಿಯರಿಂಗ್ ವಿದ್ಯಾಭ್ಯಾಸ ಮಾಡಿಕೊಂಡಿದ್ದ.. ಪ್ರವೀಣ್ ತಂದೆ ತಾಯಿ ಜೊತೆ ಕಲಬುರಗಿ ನಗರದ ದೇವಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡ್ತಿದ್ದ


 ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ನಿನ್ನೆ ಭಾನುವಾರ ಕಾಲೇಜಿಗೆ ರಜೆ ಇದ್ದ ಹಿನ್ನಲೆಯಲ್ಲಿ ಪ್ರವೀಣ್ ಮನೆಯಲ್ಲೆ ಇದ್ದ.. ಇನ್ನೂ ಪ್ರವೀಣ್ ತಾಯಿ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಇದ್ದ ಹಿನ್ನಲೆಯಲ್ಲಿ ಹೈದ್ರಾಬಾದ್ ಗೆ ತೆರಳಿದ್ದರು.. ತಂದೆ ತಮ್ಮೂರಿಗೆ ತೆರಳಿ ಜಮೀನಿನಲ್ಲಿ ಬಿತ್ತನೆ ಕೆಲಸ ಕಾರ್ಯಗಳನ್ನ ನೋಡೊದಕ್ಕೆ ಹೋಗಿದ್ದರು..ಇದನ್ನೂ ಓದಿ: Udupi: ಶೌಚಾಲಯದಲ್ಲಿ ಮೊಬೈಲ್ ಇಟ್ಟ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ, ರಾಜ್ಯ ಸರ್ಕಾರದಿಂದ ಆದೇಶಮನೆಯಲ್ಲೇ ಸೂಸೈಡ್ ಮಾಡಿಕೊಂಡಿದ್ದ ಪ್ರವೀಣ್ತಡರಾತ್ರಿ ಹೈದ್ರಾಬಾದ್ ನಿಂದ ತಾಯಿ ಮನೆಗೆ ಬಂದು ಬಾಗಿಲು ತಟ್ಟಿದ್ದಾಗ ಪ್ರವೀಣ್ ಬಾಗಿಲು ತೆಗೆದಿರಲಿಲ್ಲ.. ಬಳಿಕ ಅನುಮಾನ ಬಂದು ಬಾಗಿಲು ಒಡೆದು ನೋಡಿದಾಗ ಪ್ರವೀಣ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ...ಪಬ್‌ಜಿ ಆಟೋ ಚಟ ಬೆಳೆಸಿಕೊಂಡಿದ್ದ ಪ್ರವೀಣ್ಪ್ರವೀಣ್ ಪಾಟೀಲ್ ಖಾಸಗಿ ಕಾಲೇಜಿನಲ್ಲಿ ಬಿಇ ವಿದ್ಯಾಭ್ಯಾಸ ಮಾಡ್ತಿದ್ದರೆ ಪ್ರವೀಣ್ ತಾಯಿ ಕೂಡ ಅದೇ ಕಾಲೇಜಿನಲ್ಲಿ ಅಟೆಂಡರ್ ಆಗಿ ಕೆಲಸ ಮಾಡ್ತಿದ್ದರು.. ಆದ್ರೆ ಪ್ರವೀಣ್ ಇತ್ತಿಚಿಗೆ ಕೆಲ ದಿನಗಳಿಂದ ಮೊಬೈಲ್ ನಲ್ಲೆ ಹೆಚ್ಚು ಕಾಲ ಕಳೆಯೋದಕ್ಕೆ ಮುಂದಾಗಿದ್ದನಂತೆ.. ಮೊಬೈಲ್ ನಲ್ಲಿ ದುಡ್ಡು ಕಟ್ಟಿ ಪಬ್ ಜಿ ಗೇಮ್ ಆಡೋದಕ್ಕೆ ಮುಂದಾಗಿದ್ದನಂತೆ..ಪಬ್‌ಜಿಯಿಂದ 80 ಸಾವಿರ ಕಳೆದುಕೊಂಡಿದ್ದ ವಿದ್ಯಾರ್ಥಿಪಬ್ ಜಿ ಗೇಮ್ ನಿಂದ ಸರಿ ಸುಮಾರಾಗಿ 80 ಸಾವಿರದಷ್ಟು ದುಡ್ಡು ಕೂಡ ಲಾಸ್ ಆಗಿದ್ದನಂತೆ.. ಇದ್ರಿಂದ ಬೇಸತ್ತಿದ್ದ ಪ್ರವೀಣ್ ಜೀವನದಲ್ಲಿ ಜಿಗುಪ್ಸೆ ಕೂಡ ಹೊಂದಿದ್ದನಂತೆ.. ಹಾಗಾಗಿ ಕಳೆದ ಕೆಲ ದಿನಗಳಿಂದ ಆತ ಒಂಟಿಯಾಗೆ ಇರೋದಕ್ಕೆ ಮುಂದಾಗಿದ್ದನಂತೆ.. ಹಾಗಾಗಿಯೆ ನಿನ್ನೆ ಪ್ರವೀಣ್ ತಾಯಿ ಕೂಡ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಹೈದ್ರಾಬಾದ್ ಗೆ ಹೋಗೊಣ ಬಾ ಅಂತಾ ಕರೆದ್ರು ಹೊಗದೆ ಮನೆಯಲ್ಲೆ ಒಬ್ಬನೆ ಇದ್ದನಂತೆ. ಆದರೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ...ಇದನ್ನೂ ಓದಿ: JP Nadda: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾಗೆ ಬಿಗ್​ ರಿಲೀಫ್! ಎಫ್​ಐಆರ್​ ರದ್ದುಗೊಳಿಸಿ ಹೈಕೋರ್ಟ್ ​ಆದೇಶಪೊಲೀಸರಿಂದ ಮುಂದುವರೆದ ತನಿಖೆಈ ಸಂಬಂಧ ಆರ್ ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸೋದಕ್ಕೆ ಮುಂದಾಗಿದ್ದಾರೆ..

Post a Comment

Previous Post Next Post