ಮತ್ತೆ ಚೀನಾ ಕಿರಿಕ್
ಭಾರತದ ಅರುಣಾಚಲ ಪ್ರದೇಶವನ್ನು ಚೀನಾ ತನ್ನ ಮ್ಯಾಪ್‌ನಲ್ಲಿ ಸೇರಿಸಿಕೊಂಡಿದೆ. ಹಾಗಿದ್ರೆ, ಏನಿದು ಚೀನಾದ ವಿಸ್ತರಣಾವಾದಿ ನೀತಿ? ಮಾವೋನ 5 ಫಿಂಗರ್ ಪಾಲಿಸಿಯನ್ನು ಯಾಕೆ ಇಡೀ ವಿಶ್ವ ಮತ್ತೊಮ್ಮೆ ನೆನಪು ಮಾಡಿಕೊಳ್ಳಬೇಕು? ಇಲ್ಲಿದೆ ಓದಿ ಕುತೂಹಲಕಾರಿ ಮಾಹಿತಿ...ವಿಸ್ತರಣಾವಾದಿ ನೀತಿಯ ರಾಕ್ಷಸ ಹಸಿವಿನ ಚೀನಾ (China), ವಿಶ್ವದ ಕೇಂದ್ರ ಬಿಂದು ನಾನೇ..! ನಾನಿಲ್ಲದೆ ವಿಶ್ವವೇ ಇಲ್ಲ.. ನನ್ನ ಕಣ್ಣು ಬಿದ್ದ ಜಾಗ ನನ್ನದು.. ನಾನು ಕೇಳಿದಷ್ಟು ಜಾಗ ಕೊಟ್ಟು ಹಿಂದೆ ನೋಡದೇ ನಡಿತಿರಬೇಕು ಅಂತ ಥೇಟ್ ಲೋಕಲ್ ರೌಡಿ ರೀತಿ ವರ್ತಿಸುತ್ತಿದೆ. ಜಿ-20 (G-20) ಹಿನ್ನೆಲೆಯಲ್ಲಿ ಭಾರತಕ್ಕೆ ಚೀನಾದ ಸರ್ವಾಧಿಕಾರಿ ಶಿ ಜಿನ್ಪಿಂಗ್ (Xi Jinping) ಆಗಮಿಸುತ್ತಿರೋ ಬೆನ್ನಲ್ಲೇ ಮತ್ತೆ ಹಳೆ ಕಿರಿಕ್ಗೆ ಹೊಸ ಜೀವನ ನೀಡಿರುವ ಚೀನಾ, ಅರುಣಾಚಲ ಪ್ರದೇಶವನ್ನು (Arunachalpradesh) ತನ್ನ ಮ್ಯಾಪ್‌ನಲ್ಲಿ (China Map) ಸೇರಿಸಿಕೊಂಡಿದೆ. ಹಾಗಿದ್ರೆ, ಏನಿದು ಚೀನಾದ ವಿಸ್ತರಣಾವಾದಿ ನೀತಿ? ಮಾವೋನ (Mao Zedong) ಐದು ಬೆರಳು ನೀತಿಯನ್ನ( Five Fingers Policy of China) ಯಾಕೆ ಇಡೀ ವಿಶ್ವ ಮತ್ತೊಮ್ಮೆ ನೆನಪು ಮಾಡಿಕೊಳ್ಳಬೇಕು? ಇಲ್ಲಿದೆ ಓದಿ ಕುತೂಹಲಕಾರಿ ಮಾಹಿತಿ... ಇನ್ನೇನು ಕೆಲವೇ ದಿನಗಳಲ್ಲಿ ಅಂದ್ರೆ ಸೆಪ್ಟಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ಜಿ-20 ಸಭೆ ನಡೆಯಲಿದೆ. ಜಗತ್ತಿನ ಘಟಾನುಘಟಿ ರಾಷ್ಟ್ರಗಳ ಘಟಾನುಘಟಿ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದ್ರಲ್ಲೂ ಅಮೆರಿಕ ಅಧ್ಯಕ್ಷ ಜೋ ಬಿಡೆನ್ (Joe Biden), ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ (Rishi Sunak), ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟೊನಿ ಅಲ್ಬನೀಸ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್, ಇಟಲಿ ಪ್ರಧಾನಿ ಜಿಯಾರ್ಜಿಯಾ ಮೆಲೊನಿ (Georgia Meloni), ಸೌದಿ ಅರೇಬಿಯಾ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ತುರ್ಕಿಯೆ ಅಧ್ಯಕ್ಷ ಎರ್ಡೊಗಾನ್ ಸೇರಿದಂತೆ 3500 ಕ್ಕೂ ಹೆಚ್ಚು ಅತಿಥಿಗಳು ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲ ಜಿ-20ಯ ಭಾಗವಾಗಿರುವ ಚೀನಾದ ಸರ್ವಾಧಿಕಾರಿ ಶಿ ಜಿನ್ಪಿಂಗ್ ಕೂಡ ನವದೆಹಲಿಗೆ ಆಗಮಿಸುತ್ತಿದ್ದಾರೆ. ಹೀಗಿದ್ದೂ ಚೀನಾ ಹೊಸ ನಕ್ಷೆ ಬಿಟ್ಟು ಕಿರಿಕ್ ಮಾಡಿರೋದ್ಯಾಕೆ? ಅನ್ನೋ ಪ್ರಶ್ನೆ ಮೂಡಿದೆ.ಜಿ-20 ಸಭೆಗೆ ದೆಹಲಿ ಸಜ್ಜು2020ರ ಗಲ್ವಾನ್ ಪ್ರಕರಣದ ಬಳಿಕ ಈಗಾಗಲೇ ಚೀನಾ ಮತ್ತು ಭಾರತದ ಸಂಬಂಧ ಸಾಕಷ್ಟು ಹಳಿಸಿದೆ. ಗಡಿ ಸಮಸ್ಯೆ ಎರಡೂ ದೇಶಗಳ ಸಂಬಂಧ ನಿರ್ಧರಿಸಬಾರದು, ಗಡಿಯೇ ಬೇರೆ ವ್ಯಾಪಾರವೇ ಬೇರೆ. ನಮ್ಮ ಸಂಬಂಧವನ್ನು ಮೊದಲಿನಂತೆ ಮಾಡಿಕೊಳ್ಳೋಣ ಅಂತ ಈಗಾಗಲೇ ಹಲವು ಬಾರಿ ಚೀನಾ ಭಾರತಕ್ಕೆ ಮನವಿ ಮಾಡಿಕೊಂಡಿದೆ. ಆದ್ರೆ, ಗಡಿ ಸಮಸ್ಯೆ ಬಗೆಹರಿಯದೇ ಸಂಬಂಧ ವೃದ್ಧಿ ಸಾಧ್ಯವೇ ಇಲ್ಲ ಅಂತ ಭಾರತ ಕಡ್ಡಿ ತುಂಡಾದಂತೆ ಹೇಳಿದೆ. ಹೀಗಿದ್ದೂ, ಇತ್ತೀಚೆಗೆ ಎರಡೂ ದೇಶಗಳ ನಡುವೆ ಹೆಚ್ಚಿನ ಸಂವಹನ ನಡೆಯುತ್ತಿದೆ. ಇತ್ತೀಚೆಗಷ್ಟೇ ಸೌಥ್ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಸಭೆಯಲ್ಲಿ ಪ್ರಧಾನಿ ಮೋದಿ, ಶಿ ಜಿನ್ಪಿಂಗ್ ಕೈ ಕುಲುಕಿದ್ದಾರೆ. ಹೀಗಾಗಿ, ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ನಲ್ಲಿ ಮೂಡಿರುವ ಯುದ್ಧದ ಕಾರ್ಮೋಡ ಇನ್ನೇನು ಕರಗಲಿದೆ ಅಂತ ಬಹುತೇಕರು ಭಾವಿಸಿದ್ದರು.ಪ್ರಧಾನಿ ಮೋದಿ, ಸರ್ವಾಧಿಕಾರಿ ಶಿಆದ್ರೆ, ಮೊಸರನ್ನದಲ್ಲಿ ಕೂದಲು ಸಿಕ್ಕಂತೆ, ಜಿ-20 ಹಬ್ಬದ ರುಚಿ ಕೆಡಿಸುವಂಥ ಹೆಜ್ಜೆಯನ್ನ ಮತ್ತೆ ಚೀನಾ ಇಟ್ಟಿದೆ. ಗಡಿಯಲ್ಲಿ ಭಾರತದ ವೀರ ಸೈನಿಕರ ಮುಂದೆ ತಮ್ಮ ಬೇಳೆ ಬೇಯಲ್ಲ ಅಂತ ತಿಳಿದ ಚೀನಾ, ಪಾಕಿಸ್ತಾನದ ಹೆಜ್ಜೆ ತುಳಿದಿದೆ. ಉಗ್ರಸ್ಥಾನ ಪಾಕ್ನ ಆಪ್ತ ಸ್ನೇಹಿತನಾಗಿರುವ ಚೀನಾ, ಈಗ ಹೊಸದೊಂದು ಮ್ಯಾಪ್ ಬಿಡಗಡೆ ಮಾಡಿದೆ. ಅದ್ರಲ್ಲಿ 1962ರ ಯುದ್ಧದಲ್ಲಿ ಭಾರತದಿಂದ ಕಿತ್ತುಕೊಂಡಿದ್ದ ಅಕ್ಸಯ್ ಚಿನ್, ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶ, ಸ್ವತಂತ್ರ ದೇಶವಾಗಿರುವ ತೈವಾನ್, ಜಪಾನ್- ರಷ್ಯಾದ ಕೆಲ ಭಾಗ ಎಲ್ಲವೂ ತನ್ನದೇ ಅಂದಿದೆ. ಚೀನಾ ಇಂಥದ್ದೊಂದು ನಡೆ ಪ್ರದರ್ಶಿಸ್ತಿರೋದು ಯಾಕೆ? ಇದು ಶುರುವಾಗಿದ್ದು ಯಾವಾಗ ಅನ್ನೋ ಪ್ರಶ್ನೆ ಸಹಜವಾಗಿ ಮೂಡುತ್ತೆ.ಇದನ್ನೂ ಓದಿ: Chandrayana-3: ಎಲ್ಲಡೆಯೂ ಭಾರತದ ಅಶ್ವಮೇಧ ಯಾಗ ಶುರು, ದಾಖಲೆಗಳೆಲ್ಲ ಉಡೀಸ್..!ನೆಹರು-ಮಾವೋ ಝೆಡಾಂಗ್ಭಾರತ ಆಗಷ್ಟೇ ಸ್ವಾತಂತ್ರ್ಯ ಪಡೆದುಕೊಂಡಿರುತ್ತೆ. ತನ್ನ ಸುತ್ತಲಿನ ಎಲ್ಲ ದೇಶಗಳ ಜೊತೆ ಉತ್ತಮ ಬಾಂಧವ್ಯ ಹೊಂದುವ ಗುರಿ ಹೊಂದಿದ್ದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು, 1949 ರಲ್ಲಿ ಚೀನಾವನ್ನ ತನ್ನ ಸುಪರ್ದಿಗೆ ತೆಗೆದುಕೊಂಡು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಮಾವೋ ಝೆಡಾಂಗ್ ನೇತೃತ್ವದ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವೇ ನಿಜವಾದ ಚೀನಾ ಅಂತ ಒಪ್ಪಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಹಿಂದಿ-ಚೀನಿ ಭಾಯ್ ಭಾಯ್ ಅನ್ನೋ ಘೋಷವಾಕ್ಯದೊಂದಿಗೆ ಪಂಚಶೀಲ ಯೋಜನೆ ಜಾರಿಮಾಡ್ತಾರೆ. ಆದ್ರೆ ಮಾವೋ ಮಾತ್ರ ಮೇಲ್ನೋಟಕ್ಕೆ ನೆಹರು ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರೂ, ಬೆನ್ನಿಗೆ ಚೂರಿ ಹಾಕುವ ಕೆಲಸ ಶುರು ಮಾಡಿಕೊಳ್ತಾರೆ. 1951ರಲ್ಲೇ ಸ್ವತಂತ್ರ ದೇಶವಾಗಿದ್ದ ಮತ್ತು ಭಾರತದೊಂದಿಗೆ ಸಾವಿರಾರು ವರ್ಷಗಳ ಬಾಂಧವ್ಯ ಹೊಂದಿದ್ದ ಟಿಬೆಟ್ ಮೇಲೆ ದಾಳಿ ಮಾಡ್ತಾರೆ. ಆದ್ರೆ, ಇಂಥ ಸಂದರ್ಭದಲ್ಲಿಯೂ ಭಾರತ ನಮಗ್ಯಾಕೆ ಬೇಕು? ಸುಮ್ಮನೆ ಚೀನಾ ವಿರೋಧ ಕಟ್ಟಿಕೊಳ್ಳೋದ್ಯಾಕೆ ಅಂತ ಟಿಬೆಟ್ನ ಸಹಾಯಕ್ಕೆ ಹೋಗೋದಿಲ್ಲ. ಅಷ್ಟೇ ಅಲ್ಲ 1954ರಲ್ಲೇ ಟಿಬೆಟ್ ಚೀನಾದ ಅವಿನಾಭಾವ ಅಂಗ ಅಂತ ಭಾರತ ಒಪ್ಪಿಕೊಳ್ಳುತ್ತೆ. ಚೀನಾ ಇಷ್ಟಕ್ಕೇ ಸುಮ್ಮನಾಗಲ್ಲ. ಲಡಾಖ್ ನಿಂದ ಅರುಣಾಚಲ ಪ್ರದೇಶದ ತನಕ ಭಾರತದ ಭೂಮಿ ಮೇಲೂ ಮಾವೋ ಕಣ್ಣು ಹಾಕ್ತಾರೆ. 1962ರಲ್ಲಿ ದಾಳಿ ಮಾಡುವ ಚೀನಾ ಭಾರತವನ್ನು ಹೀನಾಯವಾಗಿ ಸೋಲಿಸಿ ಬಿಡುತ್ತೆ. ಲಡಾಖ್ನಲ್ಲಿ ಒಂದು ಹುಲ್ಲೂ ಬೆಳೆಯಲ್ಲ, ಅದು ನಮಗ್ಯಾಕೆ ಬೇಕು ಅಂತ ಪ್ರಶ್ನಿಸಿದ್ದ ನೆಹರು ಅವರ ನೀತಿಯನ್ನೇ ಈ ಸೋಲಿನ ಪ್ರಮುಖ ಕಾರಣ ಅಂತ ವಿಶ್ಲೇಷಿಸಲಾಗುತ್ತೆ. ಹೀಗೆ ಚೀನಾ ದಾಳಿ ಮಾಡೋದಕ್ಕೂ ಕಾರಣ ಇಲ್ಲದೇ ಇಲ್ಲ. ಮೇಲ್ನೋಟಕ್ಕೆ ನೆಹರು ಜೊತೆ ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿದ್ದ ಮಾವೋ, ಒಳಗಿಂದೊಳಗೇ Five ಫಿಂಗರ್ ಯೋಜನೆಯನ್ನ ರೂಪಿಸಿದ್ರು.ಏನಿದು ಫೈವ್ ಫಿಂಗರ್ ಯೋಜನೆ?ಚೀನಾದ ಸರ್ವಾಧಿಕಾರಿಯಾಗಿದ್ದ ಮಾವೋ 5 ಪಿಂಗರ್ಸ್ ಸ್ಟ್ರಾಟರ್ಜಿಯ ಅಡಿಪಾಯವನ್ನ ಚೀನಾದ ಕಮ್ಯುನಿಸ್ಟ್ ಪಾರ್ಟಿಗೆ ಹಾಕಿದ್ದ. ಟಿಬೇಟ್ ಅನ್ನೋದು ಚೀನಾದ ಬಲಗೈ ಮತ್ತು ಸಿಕ್ಕಿಂ, ಅರುಣಾಚಲ ಪ್ರದೇಶ, ಭೂತಾನ್, ನೇಪಾಳ ಹಾಗೂ ಲಡಾಖ್ ಇವು ಅದರ ಐದು ಬೆರಳುಗಳು ಅನ್ನೋದೇ ಈ ಫೈ ಪಿಂಗರ್ ಸ್ಟ್ರಾಟರ್ಜಿ. ಈ ಸ್ಟ್ರಾಟರ್ಜಿ ಅನ್ವಯ ಮಾವೋ ಟಿಬೇಟ್ ಅನ್ನ ಕ್ರೂರವಾಗಿ ವಶಕ್ಕೆ ಪಡೆದುಕೊಂಡ, ಭಾರತದ ಲಡಾಖ್ ಮೇಲೆ ದಾಳಿ ಮಾಡಿ ವಶಕಪಡಿಸಿಕೊಳ್ಳಲು ಯತ್ನಿಸಿದ್ರೂ ಕೇವಲ ಅಕ್ಸಯ್ ಚಿನ್ ಪ್ರಾಂತ್ಯವನ್ನ ಮಾತ್ರ ತನ್ನ ಬಳಿ ಉಳಿಸಿಕೊಂಡ. ಇನ್ನು, ನೇಪಾಳ, ಭೂತಾನ್ ಇಂದಿಗೂ ಸ್ವತಂತ್ರ ದೇಶಗಳೇ ಆಗಿವೆ. ಈ ನಡುವೆ ಅರುಣಾಚಲ ಪ್ರದೇಶ, ಸಿಕ್ಕಿಂ ಭಾರತದ ಅವಿಭಾಜ್ಯ ಅಂಗವಾಗಿವೆ.Mao's 5 finger strategyಇದು ಕೇವಲ ಬಲಗೈ ವಿಚಾರ ಮಾತ್ರವಾಯ್ತು. ಇದನ್ನು ಹೊರತು ಪಡಿಸಿ ತೈವಾನ್ ಅನ್ನು ಇನ್ನೊಂದು ದೇಶ ಅಂತ ಚೀನಾ ಎಂದು ಒಪ್ಪಿಕೊಳ್ಳಲಿಲ್ಲ. ತೈವಾನ್ ಇಂದಿಗೂ ಸ್ವತಂತ್ರ ದೇಶವಾಗಿಯೇ ಆಡಳಿತ ನಡೆಸುತ್ತಿದೆ. ಇನ್ನು ಹಾಂಕಾಂಗ್ ಅನ್ನ ಶಿ ಜಿನ್ಪಿಂಗೇ ಇಂಗ್ಲೆಂಡ್ ಮಡಿಲಿನಿಂದ ಕಿತ್ತುಕೊಂಡಾಗಿದೆ. ಇನ್ನುಳಿದಂತೆ ಮಾವೋನ ಪುನರ್ಜನ್ಮ ಅನ್ನೋ ರೀತಿ ಪರದಾಡ್ತಿರೋ ಶಿ ಜಿನ್ಪಿಂಗ್, ಇಡೀ ದಕ್ಷಿಣ ಚೀನಾ ಕಡಲನ್ನೇ ತನ್ನದು ಅಂತ ಹೇಳಿಕೊಳ್ತಿದ್ದಾರೆ.ಇದನ್ನೂ ಓದಿ: Chandrayaan-3: ಚಂದ್ರನ ಅಂಗಳಕ್ಕೆ ಇನ್ನೊಂದೇ ಹೆಜ್ಜೆ! ಚಂದ್ರಯಾನ 3 ಬೆನ್ನಿಗೆ ನಿಂತ ಸಂಸ್ಥೆಗಳು ಯಾವುವು ಗೊತ್ತಾ?ಮತ್ತೊಂದೆಡೆ ಜಪಾನ್ಗೆ ಸೇರಿದ ದ್ವೀಪಗಳನ್ನೂ ವಶಪಡಿಸಿಕೊಳ್ಳು ಹವಣಿಕೆಯಲ್ಲಿ ಚೀನಾ ಇದೆ. ಅಷ್ಟೇ ಅಲ್ಲ ಮಂಗೋಲಿಯಾವನ್ನೂ ತನ್ನದಾಗಿಸಿಕೊಳ್ಳು ಕನಸು ಕಾಣ್ತಿರುವ ಚೀನಾ, ರಷ್ಯಾದ ಭೂಭಾಗದ ಮೇಲೂ ಕಣ್ಣು ಹಾಕಿದೆ. ಹೇಳೋಕೆ ಯಾರಪ್ಪನ ಪರ್ಮಿಷನ್ ಬೇಕು? ನಾಳೆ ಇಡೀ ಸೌರಮಂಡಲವೇ ತನ್ನದು ಅಂತ ಚೀನಾ ಹೇಳಿಕೊಂಡರೂ ಅಚ್ಚರಿಯಿಲ್ಲ. ಆರ್ಥಿಕವಾಗಿ ಬಸವಳಿದಿರುವ ಶಿ ಜಿನ್ಪಿಂಗ್ಗೆ ತನ್ನ ಇಮೇಜ್ ಉಳಿಸಿಕೊಳ್ಳುವ ಹವಣಿಕೆಯಿದ್ದು, ಅದಕ್ಕೆ ಪೂರಕವಾಗಿ ನ್ಯಾಷನಲಿಸಂ ಅನ್ನ ಜನರಲ್ಲಿ ಮೂಡಿಸಲು ಈ ಗಡಿಸಮಸ್ಯೆಯನ್ನು ಕದಡುತ್ತಿದ್ದಾರೆ. ಅದೇನೆ ಇದ್ದರೂ, ಚೀನಾದ ದುಷ್ಟ ಹೆಜ್ಜೆಗೆ, ಭಾರತವಂತೂ ಸರಿಯಾಗಿಯೇ ಮದ್ದರೆಯುತ್ತಿದೆ.

Post a Comment