ಡಿಸಿಎಂ ಡಿಕೆ ಶಿವಕುಮಾರ್DCM DK Shivakumar: ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಕಾಮಗಾರಿಗಳ ಬಿಲ್ 25 ದಿನ 40 ದಿನದೊಳಗೆ ಬಿಡುಗಡೆ ಆಗಿವೆ. ಆದ್ದರಿಂದ ನಾನು ತನಿಖೆ ಮಾಡಿಸುತ್ತಿದ್ದೇನೆ ಎಂದು ಹೇಳಿದರು. ಬೆಂಗಳೂದರು: ನಾವು ಯಾವ ಗುತ್ತಿಗೆದಾರರಿಗೂ (Contractors) ಉತ್ತರ ಕೊಡುವ ಅವಶ್ಯಕತೆ ಇಲ್ಲ. ನನಗೂ ಪ್ರಜ್ಞೆ ಇದೆ, ನನಗೂ ರಾಜಕೀಯ ಗೊತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಗುಡುಗಿದ್ದಾರೆ. ಈ ಬ್ಲ್ಯಾಕ್ಮೇಲ್ ತಂತ್ರಕ್ಕೆಲ್ಲಾ ಹೆದರಲ್ಲ. ಯಾರು ಏನ್ ಬೇಕಾದ್ರೂ ಮಾಡಿಕೊಳ್ಳಲಿ. ಇದೆಲ್ಲದರ ಹಿಂದೆ ಯಾರಿದ್ದಾರೆ ಅಂತ ಗೊತ್ತಿದೆ. ನಾನು ಯಾರಿಗೂ ಪ್ರಮಾಣ ಮಾಡುವ ಅಗತ್ಯವಿಲ್ಲ ಮತ್ತು ಉತ್ತರ ಕೊಡುವ ಅಗತ್ಯವಿಲ್ಲ. ಒಂದೇ ತಿಂಗಳಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಕೆಲಸ ಆಗುತ್ತಾ ಎಂದು ಡಿಸಿಎಂ ಪ್ರಶ್ನೆ ಮಾಡಿದರು. ನಾವು ಇರೋದು ಪಾಲಿಸಿ ಮಾಡೋಕೆ, ಕಂಟ್ರಾಕ್ಟರ್‌ಗಳ ಬಗ್ಗೆ ತಲೆ ಹಾಕಲ್ಲ. ಗುತ್ತಿಗೆದಾರರು ನನ್ನ ಬಳಿಯೇ ಬಂದಿದ್ರು. ಯಾರು ಕೆಲಸ ಮಾಡಿದ್ದಾರೋ ಅವರಿಗೆ ಬಿಲ್ ಆಗುತ್ತದೆ. ಈ ಬ್ಲಾಕ್‌ಮೇಲ್‌ಗೆಲ್ಲಾ ಈ ಡಿಕೆ ಶಿವಕುಮಾರ್ ಹೆದರಲ್ಲ ಎಂದು ಗುತ್ತಿಗೆದಾರರ ಆರೋಪಕ್ಕೆ ಡಿಸಿಎಂ ಎಚ್ಚರಿಕೆ ನೀಡಿದರು. ಡಿಕೆ ಶಿವಕುಮಾರ್ ಶಂಕೆಹಿಂದಿನ ಕಾಮಗಾರಿಗಳ ಬಾಕಿ ಬಿಲ್ ಬಿಡುಗಡೆ ಮಾಡಲು ನನ್ನ ತಕರಾರು ಇಲ್ಲ. ಆದರೆ ಕೆಲ ಕಾಮಗಾರಿಗಳ ಬಿಲ್ ಗಳು ಅನುಮಾನ ಮೂಡಿಸುವಂತಿವೆ ಎಂದು ಶಂಕೆ ವ್ಯಕ್ತಪಡಿಸಿದರು.ಕಾಂಗ್ರೆಸ್ ಶಾಸಕರು ಇರುವ ಕಡೆ ಹತ್ತು ಕೋಟಿ ಕಾಮಗಾರಿಗಳ ಬಿಲ್, ಇನ್ನೂ ಕೆಲ ಕ್ಷೇತ್ರಗಳಲ್ಲಿ ಬಿಡುಗಡೆ ಮಾಡಿಲ್ಲ. ಆದರೆ ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಕಾಮಗಾರಿಗಳ ಬಿಲ್ 25 ದಿನ 40 ದಿನದೊಳಗೆ ಬಿಡುಗಡೆ ಆಗಿವೆ. ಆದ್ದರಿಂದ ನಾನು ತನಿಖೆ ಮಾಡಿಸುತ್ತಿದ್ದೇನೆ ಎಂದು ಹೇಳಿದರು ತನಿಖೆ ಸಂಪೂರ್ಣವಾಗಿ ಮುಗಿಯುವವರೆಗೂ ಬಿಲ್ಗಳನ್ನು ಬಿಡುಗಡೆ ಮಾಡಲ್ಲ. ಆದಷ್ಟು ಬೇಗ ತನಿಖೆ ಮುಗಿಸಿ, ವರದಿ ತರಿಸುತ್ತೇನೆ. ಯಾವ ಕಾಮಗಾರಿಗಳು ಸರಿಯಾಗಿ ನಡೆದಿವೆ. ಅಂತಹ ಬಿಲ್ ಗಳನ್ನು ಬಿಡುಗಡೆ ಮಾಡಿಸೋಣ. ಈಗ ರಾಜಕೀಯ ಒತ್ತಡ ಹಾಕಲು ಹೀಗೆ ಮಾಡುತ್ತಿದ್ದಾರೆ ಅಷ್ಟೇ ಎಂದರು.ರಾಜ್ಯಪಾಲರ ಮೊರೆಪೂರ್ಣವಾಗಿರುವ ಕಾಮಗಾರಿಗಳ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಗುತ್ತಿಗೆದಾರರು ರಾಜ್ಯಪಾಲರ ಮೊರೆ ಹೋಗಿದ್ದಾರೆ. ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ ಟಿ ಮಂಜುನಾಥ್ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು.ಇದನ್ನೂ ಓದಿ: N Chaluvarayaswamy: ನಕಲಿ ಪತ್ರ ಸೃಷ್ಟಿಸಿ ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ; ಸಚಿವರ ಆರೋಪಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಗುತ್ತಿಗೆದಾರರು ಮನವಿ ಸಲ್ಲಿಸಿದ್ದಾರೆ.

Post a Comment