Narendra Modi: ಶೇಕಡಾ 80ರಷ್ಟು ಜನರಿಗೆ ಮೋದಿ ಬಗ್ಗೆ ಒಲವು! ಮತ್ತೊಮ್ಮೆ 'ನಮೋ' ಅಂತಾರಾ ಮತದಾರರು?


 ಭಾರತ ಕಂಡ ಜನಪ್ರಿಯ ಪ್ರಧಾನಿಗಳಲ್ಲಿ ನರೇಂದ್ರ ಮೋದಿ ಕೂಡಾ ಒಬ್ಬರು. ಜಗತ್ತಿನ ಅತ್ಯಂತ ಜನಪ್ರಿಯ ನಾಯಕ ಅಂತ ಗುರುತಿಸಿಕೊಂಡ ನರೇಂದ್ರ ಮೋದಿ ಮೇಲೆ ಶೇಕಡಾ 80ರಷ್ಟು ಜನರು ಉತ್ತಮ ಅಭಿಪ್ರಾಯ ಹೊಂದಿದ್ದಾರಂತೆ! ಸಮೀಕ್ಷೆಯ ಹೈಲೈಟ್ಸ್ ಇಲ್ಲಿದೆ...ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಜನಪ್ರಿಯ ನಾಯಕ ಎನ್ನುವುದು ಸಾಬೀತಾಗಿದೆ. ಅಮೆರಿಕದ ಪಕ್ಷಾತೀಯ ಸರ್ವೆ ಸಂಸ್ಥೆಯಾದ ಫ್ಯೂ (Pew) ನಡೆಸಿದ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿದೆ. ಶೇಕಡಾ 80ರಷ್ಟು ಭಾರತೀಯರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ ಅಂತ ಸರ್ವೆ ಹೇಳಿದೆ. 2014ರಿಂದ ಅಧಿಕಾರದಲ್ಲಿರುವ ಮೋದಿ, 2 ಬಾರಿ ಪ್ರಧಾನಿಯಾಗಿದ್ದಾರೆ. ಇದೀಗ ಮೂರನೇ ಬಾರಿಯೂ ಮೋದಿಯವರೇ ಪ್ರಧಾನಿಯಾಗಬೇಕು ಅಂತ ಅವರ ಅಭಿಮಾನಿಗಳು ಬಯಸುತ್ತಿದ್ದಾರೆ. ಈ ವೇಳೆ ಫ್ಯೂ ಸಂಸ್ಥೆ ನಡೆಸಿದ ಸರ್ವೆ ರಿಪೋರ್ಟ್ ಬಿಜೆಪಿಗೆ ಬೂಸ್ಟ್ ಸಿಕ್ಕಂತಾಗಿದೆ. ಭಾರತೀಯರು ತಮ್ಮ ಪ್ರಧಾನಿಯನ್ನು ಹೇಗೆ ನೋಡುತ್ತಾರೆ ಎಂಬುದನ್ನೂ ಸಮೀಕ್ಷೆ ವಿಶ್ಲೇಷಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಎಂಬ ನಾಲ್ಕು ನಾಯಕರನ್ನು ಸಮೀಕ್ಷೆಯು ಗಣನೆಗೆ ತೆಗೆದುಕೊಳ್ಳುತ್ತದೆ.10 ಭಾರತೀಯರಲ್ಲಿ 8 ಮಂದಿ ಮೋದಿಯವರ ನಾಯಕತ್ವಕ್ಕೆ ಬಹುಪರಾಕ್ ಎಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರದ ಪ್ರಭಾವವು ಬಲವಾಗಿ ಬೆಳೆಯುತ್ತಿದೆ ಎಂದು ಹತ್ತರಲ್ಲಿ ಏಳು ಭಾರತೀಯರು ಹೇಳಿದ್ದಾರೆ. ಆದರೆ ಐದನೇ ಒಂದು ಭಾಗದಷ್ಟು ಕಡಿಮೆ ಜನ ಭಾರತದ ಪ್ರಭಾವ ದುರ್ಬಲವಾಗುತ್ತಿದೆ ಎಂದು ಭಾವಿಸುತ್ತಾರಂತೆ. G20 ಶೃಂಗಸಭೆಗೆ ಮುಂಚಿತವಾಗಿ ಬಿಡುಗಡೆಯಾದ ಈ ಸಮೀಕ್ಷೆಯು ಶೇಕಡಾ 46ರಷ್ಟು ಸರಾಸರಿ ಭಾರತದ ಬಗ್ಗೆ ಅನುಕೂಲಕರವಾದ ಅಭಿಪ್ರಾಯಗಳನ್ನು ವರದಿ ಮಾಡುವ ಮೂಲಕ ಪ್ರಪಂಚದಾದ್ಯಂತ ಭಾರತದ ಸಾರ್ವಜನಿಕ ಅಭಿಪ್ರಾಯವು ಸಾಮಾನ್ಯವಾಗಿ ಧನಾತ್ಮಕವಾಗಿದೆ ಎಂದು ತಿಳಿಸಿದೆ. ಇನ್ನು ಹದಿನಾರು ಪ್ರತಿಶತ ಜನರು ಯಾವುದೇ ಅಭಿಪ್ರಾಯವನ್ನು ಹಂಚಿಕೊಳ್ಳಲಿಲ್ಲ.ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ದಕ್ಷಿಣ ಕೊರಿಯಾ, ಕೀನ್ಯಾ ಮತ್ತು ನೈಜೀರಿಯಾದಂತಹ ದೇಶಗಳು ಭಾರತವನ್ನು ಹೆಚ್ಚು ಧನಾತ್ಮಕವಾಗಿ ನೋಡುತ್ತವೆ, ಆದರೆ ಇಸ್ರೇಲ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. "ಭಾರತದ ದೃಷ್ಟಿಕೋನಗಳು ಇಸ್ರೇಲ್‌ನಲ್ಲಿ ಹೆಚ್ಚು ಸಕಾರಾತ್ಮಕವಾಗಿವೆ, ಅಲ್ಲಿ 71% ಅವರು ದೇಶದ ಬಗ್ಗೆ ಅನುಕೂಲಕರ ದೃಷ್ಟಿಕೋನವನ್ನು ಹೊಂದಿದ್ದಾರೆಂದು ಹೇಳುತ್ತಾರೆ" ಎಂದು ವರದಿ ಸೂಚಿಸುತ್ತದೆ.51% ಅಮೆರಿಕನ್ನರು, 55% ಜಪಾನಿಯರು ಮತ್ತು 52% ಆಸ್ಟ್ರೇಲಿಯನ್ನರು ಭಾರತವನ್ನು ಧನಾತ್ಮಕವಾಗಿ ಪರಿಗಣಿಸುತ್ತಾರೆ. ಇವರು ಭಾರತದ ಜೊತೆಗೆ QUAD ನ ಸದಸ್ಯರಾಗಿದ್ದಾರೆ. ಆಫ್ರಿಕಾ ಹಾಗೂ ಕೀನ್ಯಾದಲ್ಲಿ 64% ಮತ್ತು ನೈಜೀರಿಯಾದಲ್ಲಿ 60% ಭಾರತವನ್ನು ಧನಾತ್ಮಕವಾಗಿ ಪರಗಣಿಸುತ್ತಾರೆ.ಭಾರತದಲ್ಲಿ, 2019 ರಲ್ಲಿ ದೇಶವನ್ನು ಕೊನೆಯದಾಗಿ ಸಮೀಕ್ಷೆ ಮಾಡಿದಾಗಿನಿಂದ ಚೀನಾದ ನಕಾರಾತ್ಮಕ ದೃಷ್ಟಿಕೋನಗಳು ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿವೆ ಎಂದು ಪ್ಯೂ ವರದಿ ಹೇಳಿದೆ. ಮೂರನೇ ಎರಡರಷ್ಟು ಭಾರತೀಯರು ಚೀನಾದ ಬಗ್ಗೆ ವಿರೋಧ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಮಾರ್ಚ್ 25 ಮತ್ತು ಮೇ 11 ರ ನಡುವೆ 2,611 ಭಾರತೀಯರೊಂದಿಗೆ ಸಮೀಕ್ಷೆ ನಡೆಸಲಾಗಿದೆ ಎಂದು ಪ್ಯೂ ತಿಳಿಸಿದೆ. ಈ ವರದಿಯು ಬಿಜೆಪಿ ಹಾಗೂ ನರೇಂದ್ರ ಮೋದಿಗೆ ಮತ್ತಷ್ಟು ಬಲತಂದುಕೊಡಲಿದೆ ಅಂತ ನಂಬಲಾಗಿದೆ.

Post a Comment

Previous Post Next Post