ದೇವೆಗೌಡ
ಪುತ್ರನ ಆರೋಗ್ಯ ವಿಚಾರಿಸುವ ಸಲುವಾಗಿ ಕುಮಾರ ಸ್ವಾಮಿ ಅವರು ಅಡ್ಮಿಟ್ ಆದ ಜಯನಗರದ ಅಪೋಲೊ ಖಾಸಗಿ ಆಸ್ಪತ್ರೆಗೆ ದೇವೆಗೌಡ ಅವರು ಆಗಮಿಸಿದ್ದಾರೆ. ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿಗೆ (HD Kumaraswamy) ತಡರಾತ್ರಿ ಸುಸ್ತು ಮತ್ತು ವೀಕ್ನೆಸ್ನಿಂದ ಬಳಲಿ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಬೆಳಗಿನ ಜಾವ 3 ಗಂಟೆಗೆ ಸುಸ್ತು ತಾಳಲಾದರೆ ಆಸ್ಪತ್ರೆಗೆ ತೆರಳಿದ್ದರು ಈಗ ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂದು ವಿಚಾರಿಸಲು ಕುಟುಂಬಸ್ಥರು ಆಗಮಿಸುತ್ತಿದ್ದಾರೆ. ಅವರ ಪತ್ನಿ ಅನಿತಾ ಕುಮಾರ್ ಸ್ವಾಮಿ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಪುತ್ರನ ಆರೋಗ್ಯ ವಿಚಾರಿಸಲು ದೇವೆಗೌಡರು ಆಸ್ಪತ್ರೆಗೆ ಆಗಮಿಸಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿರುವ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಇಂದು ಬುಧವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಈ ಹಿಂದೆಯೇ ವರದಿಯಾಗಿತ್ತು. ಈಗ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ವೈದ್ಯರು ಹೇಳಿದ್ದಾರೆ.ಇದನ್ನೂ ಓದಿ: HD Kumaraswamy: ಬೆಳಗಿನ ಜಾವ 3 ಗಂಟೆಗೆ ದಿಢೀರನೇ ಬಿಗಡಾಯಿಸಿದ ಆರೋಗ್ಯ; ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲುಪುತ್ರನ ಆರೋಗ್ಯ ವಿಚಾರಿಸುವ ಸಲುವಾಗಿ ಕುಮಾರ ಸ್ವಾಮಿ ಅವರು ಅಡ್ಮಿಟ್ ಆದ ಜಯನಗರದ ಅಪೋಲೊ ಖಾಸಗಿ ಆಸ್ಪತ್ರೆಗೆ ದೇವೆಗೌಡ ಅವರು ಆಗಮಿಸಿದ್ದಾರೆ. ಪುತ್ರ ಕುಮಾರ ಸ್ವಾಮಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಸದ್ಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಅಪೋಲೋ ಆಸ್ಪತ್ರೆ ಕುಮಾರ ಸ್ವಾಮಿ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ತಿಳಿಸಿದೆ.ಕುಮಾರಸ್ವಾಮಿ ಅವರ ಆರೋಗ್ಯ ಸ್ಥಿತಿ ಸದ್ಯ ಚೇತರಿಕೆ ಕಂಡಿದೆ ಎಂದು ವರದಿಯಾಗಿದೆ. ಡಾಕ್ಟರ್ ಪಿ ಸತೀಶ್ ಚಂದ್ರ ನೇತೃತ್ವದಲ್ಲಿ ಕುಮಾರ ಸ್ವಾಮಿ ಅವರಿಗೆ ಟ್ರೀಟ್ಮೆಂಟ್ ನಡೆಯುತ್ತಿದೆ.

Post a Comment