Karnataka BJP: ನಾಯಕನಿಲ್ಲದೇ ಸೊರಗ್ತಿರೋ ರಾಜ್ಯ ಬಿಜೆಪಿಗೆ ಎನರ್ಜಿ ತುಂಬಿದ್ರಾ ಬಿಎಲ್​ ಸಂತೋಷ್? ಇಂದಿನ ಸಭೆಯ ಇನ್​ಸೈಡ್ ಸ್ಟೋರಿ


 ಬಿಎಲ್ ಸಂತೋಷ್. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

BL Santhosh Meeting: ವರಿಷ್ಠರು ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಮಾಡಲಿದ್ದಾರೆ. ಆದರೆ ನೀವಂತೂ ಒಟ್ಟಾಗಿ ಪಕ್ಷದ ಕೆಲಸ ಮಾಡಿ.ಬೆಂಗಳೂರು: ಚುನಾವಣೆ ಬಳಿಕ ನಾಯಕನಿಲ್ಲದೇ ಸೊರಗ್ತಿರೋ ರಾಜ್ಯ ಬಿಜೆಪಿಗೆ (Karnataka BJP) ಇಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santhosh) ಎನರ್ಜಿ ತುಂಬುವ ಕೆಲಸವನ್ನು ಮಾಡಿದಂತೆ ಕಾಣಿಸುತ್ತಿದೆ. ರಾಜ್ಯದಲ್ಲಿ ಆಪರೇಷನ್ ಕಾಂಗ್ರೆಸ್ (Operation Congress) ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿ ಎಲ್ಲಾ ನಾಯಕರ ಜೊತೆ ಇಂದು ಬೆಳಗ್ಗೆ ಮಲ್ಲೇಶ್ವರ ಕಚೇರಿಯಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಆಪರೇಷನ್ ಹಸ್ತದ ಬಗ್ಗೆ ಕೆಲವರು ಆತಂಕ ಹೊರ ಹಾಕಿದ್ದಕ್ಕೆ ಪ್ರತಿಕ್ರಿಯಿಸಿದ ಬಿಎಲ್ ಸಂತೋಷ್, ತಮ್ಮ ಸಂಪರ್ಕದಲ್ಲಿ ಸುಮಾರು 40-45 ಕಾಂಗ್ರೆಸ್ ಶಾಸಕರಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.ಯಾರು ನಿರಾಸೆಯಾಗಬೇಡಿ, ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ಏನಾಗುತ್ತೆ ಎಂದು ನೋಡಿ. ಚುನಾವಣೆಯಲ್ಲಿ ಪಕ್ಷ ಸೋತಿರೋದಕ್ಕೆ ನಿರಾಸೆ ಆಗೋದು ಬೇಡ. ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ ಎಂದು ಬಿಎಲ್ ಸಂತೋಷ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಕ್ಷದ ಜವಾಬ್ದಾರಿ ನಿರ್ವಹಿಸಿರಾಜ್ಯಾಧ್ಯಕ್ಷ ಸ್ಥಾನ, ವಿಪಕ್ಷ ನಾಯಕನ ಆಯ್ಕೆ ವಿಳಂಬ ಆಗಿರೋದು ನಿಜ. ಆದರೆ ಅದರ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ವರಿಷ್ಠರು ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಮಾಡಲಿದ್ದಾರೆ. ಆದರೆ ನೀವಂತೂ ಒಟ್ಟಾಗಿ ಪಕ್ಷದ ಕೆಲಸ ಮಾಡಿ. ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ, ಪಕ್ಷ ವಹಿಸಿದ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಎಂದು ಬಿಎಲ್ ಸಂತೋಷ್ ಕರೆ ಕೊಟ್ಟಿದ್ದಾರೆ ಎನ್ನಲಾಗಿದೆ.ಸೆ.17ರ ನರೇಂದ್ರ ಮೋದಿ ಜನ್ಮದಿನದಿಂದ ಅ.2 ಗಾಂಧಿ ಜಯಂತಿವರೆಗೆ ಸೇವಾ ಪಾಕ್ಷಿಕ ಆಚರಣೆ ಮಾಡಲಾಗುವುದು. ರಾಜ್ಯ ಅಧ್ಯಕ್ಷ, ವಿಪಕ್ಷ ‌ಅಯಕ ಆಯ್ಕೆ ತಡವಾಗಿದೆ ಅನ್ನೋದುಸಂಘಟನಾ ಕಾರ್ಯದರ್ಶಿ ಆಗಿ ನನಗೆ ಹೆಚ್ಚು ಅರಿವಿದೆ. ನೇಮಕ ಆಗಿಲ್ಲ ಎನ್ನುವುದನ್ನೇ ದೊಡ್ಡದು ಮಾಡಿ ಚರ್ಚಿಸುವ ಅಗತ್ಯ ಏನಿದೆ ಎಂದು ಶಾಸಕರು ಮತ್ತು ಮಾಜಿ ಶಾಸಕರನ್ನು ಬಿಎಲ್ ಸಂತೋಷ್ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: BL Santhosh ಕರೆದ ಸಭೆಗೆ ಗೈರಾದ ಕಮಲ ನಾಯಕರು ಯಾರು? ಇಲ್ಲಿದೆ ಮಾಹಿತಿಶಘ್ರವೇ ಎರಡೂ ಸ್ಥಾನಗಳಿಗೆ ನೇಮಕ ಮನೆಯಲ್ಲಿ ಮದುವೆ ಆಗದ ಮಗಳು ಇದ್ದರೆ ಹೊರಗೆ ಹಾಕೋಕೆ ಆಗುತ್ತಾ? ಕೆಲಸ ಸಿಗದ ಮಗ ಇದ್ದರೆ ಮನೆಯಿಂದ ಹೊರಗೆ ಹಾಕ್ತೀರಾ? ತಡವಾಗಿದೆ ಎನ್ನುವುದು ಎಷ್ಟು ಸತ್ಯವೋ ನೇಮಕ ಆಗುತ್ತದೆ ಎನ್ನುವುದೂ ಅಷ್ಟೇ ಸತ್ಯ.ಈ ಹಿಂದೆ ಪಕ್ಷ ಪೂರ್ಣ ನೆಲಸಮವಾಗುತ್ತೇವೆ ಎಂದಿದ್ದರು. ಆಗ 40 ಸ್ಥಾನ ಗೆದ್ದೆವು, ಈಗ 60 ಸ್ಥಾನ ಗೆದ್ದಿದ್ದೇವೆ. ಈಗ ವಿಪಕ್ಷವಾಗಿ ಇನ್ನಷ್ಟು ಶಕ್ತಿಯುತವಾಗಿದ್ದೇವೆ ಎಂದು ಸಮಾರೋಪ ಭಾಷಣದಲ್ಲಿ ಬಿಎಲ್ ಸಂತೋಷ್ ಹೇಳಿರುವ ಮಾಹಿತಿ ಲಭ್ಯವಾಗಿದೆ.

Post a Comment

Previous Post Next Post