ಸಾಂಕೇತಿಕ ಚಿತ್ರ
ಫೇಸ್ ಬುಕ್ ಸುಂದರಿಯ ಬ್ಲಾಕ್ ಮೇಲ್‌ಗೆ ಹೆದರಿ ಯುವಕ ಹಣ ಕಳೆದುಕೊಂಡಿದ್ದಾನೆ. 100 ರೂಪಾಯಿ, ಸಾವಿರ ರೂಪಾಯಿ ಅಲ್ಲ, ಬರೋಬ್ಬರಿ 41 ಲಕ್ಷ ಹಣ ಕಳೆದುಕೊಂಡಿದ್ದಾನೆ.ರಾಮನಗರ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು (Online fraud case) ಹೆಚ್ಚಾಗುತ್ತಿವೆ. ಫೇಸ್ ಬುಕ್‌ನಲ್ಲಿ (Facebook) ಅಪರಿಚಿತರೊಡನೆ ಚಾಟ್ (chatting with a stranger) ಮಾಡುವಾಗ ಎಚ್ಚರ ತಪ್ಪಿದ್ರೆ ಹಣ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಲಿದೆ. ಫೇಕ್ ಅಕೌಂಟ್ (fake account), ಹುಡುಗಿಯರ ಹೆಸರಲ್ಲಿ ಫ್ರೆಂಡ್ ರಿಕ್ವೆಸ್ಟ್ (friend request) ಬಂದಾಗ ಎಚ್ಚರಿಕೆ ವಹಿಸದಿದ್ರೆ ಪಶ್ವಾತಾಪ ಪಡುವ ಸಂದರ್ಭ ಬಂದೊದಗಲಿದೆ. ಇಂತಹದ್ದೇ ಒಂದು ಪ್ರಕರಣ ರಾಮನಗರ (Ramanagar) ಜಿಲ್ಲೆಯ ಕನಕಪುರ (Kanakapur) ತಾಲೂಕಿನಲ್ಲಿ ನಡೆದಿದೆ.ಫೇಸ್‌ಬುಕ್ ಹೆಣ್ಣಿನ ವ್ಯಾಮೋಹಕ್ಕೆ ಬಿದ್ದ ಯುವಕ! ಫೇಸ್‌ಬುಕ್ ಹೆಣ್ಣಿನ ವ್ಯಾಮೋಹಕ್ಕೆ ಬಿದ್ದು ಯುವಕನೋರ್ವ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾನೆ. ಹುಡುಗಿಯ ಹೆಸರಲ್ಲಿ ಯುವಕನ ಪೋಟೋ ಹಾಗೂ ಇತರ ಮಾಹಿತಿ ಪಡೆದ ಅಪರಿಚಿತ ವ್ಯಕ್ತಿ, ಪೋಟೋ ಎಡಿಟ್ ಮಾಡಿ, ಬ್ಲಾಕ್ ಮೇಲ್ ಮಾಡಿದ್ದಾನೆ. ಯುವಕನ ಪೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಫೇಸ್ ಬುಕ್‌ನಲ್ಲಿ ಅಪ್ಲೋಡ್ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ.L41 ಲಕ್ಷ ರೂಪಾಯಿ ಕಳೆದುಕೊಂಡ ಯುವಕಅಪರಿಚಿತ ವ್ಯಕ್ತಿಯ ಬ್ಲಾಕ್ ಮೇಲ್‌ಗೆ ಹೆದರಿ ರಾಮನಗರ ಜಿಲ್ಲೆಯ ಕನಕಪುರದ ಮೂಲದ ಯುವಕ ರಾಜೇಶ್ ಎಂಬಾತ ಹಣ ಕಳೆದುಕೊಂಡಿದ್ದಾನೆ. 100 ರೂಪಾಯಿ, ಸಾವಿರ ರೂಪಾಯಿ ಅಲ್ಲ, ಬರೋಬ್ಬರಿ 41 ಲಕ್ಷ ಹಣ ಕಳೆದುಕೊಂಡಿದ್ದಾನೆ.ಇದನ್ನೂ ಓದಿ: Crime News: ಅಪ್ರಾಪ್ತೆ ಮೇಲೆ ಕಾಮುಕರ ಕಣ್ಣು, ಮೂವರು ಯುವಕರಿಂದ ಅತ್ಯಾಚಾರ!ಕಳೆದ ಡಿಸೆಂಬರ್‌ನಿಂದಲೂ ಹಣ ವಸೂಲಿಗೀತಾ *** ಎಂಬ ಫೇಸ್ ಬುಕ್ ಪ್ರೊಫೈಲ್‌ನಿಂದ ಯುವಕನಿಗೆ ವಂಚನೆ ಮಾಡಲಾಗಿದೆ. ಕಳೆದ ಡಿಸೆಂಬರ್‌ನಿಂದ ನಿರಂತರವಾಗಿ ಬ್ಲಾಕ್‌ಮೇಲ್ ಮಾಡಿರೋ ಖದೀಮರು, ರಾಜೇಶ್ ಬಳಿ ಲಕ್ಷಾಂತರ ರೂಪಾಯಿ ಹಣ ಪೀಕಿದ್ದಾರೆ. ಈ ಸಂಬಂಧ ರಾಮನಗರ ಸೆನ್ ಪೊಲೀಸ್ ಠಾಣೆಯಲ್ಲಿ ರಾಜೇಶ್ ಪ್ರಕರಣ ದಾಖಲು ಮಾಡಿದ್ದು, ಎಫ್ಐಆರ್ ದಾಖಲಾಗಿದೆ.ಆನ್ ಲೈನ್ ನಿಂದ ದಿಕ್ಕು ತಪ್ಪುತ್ತಿರುವ ಯುವಸಮೂಹ !?ಹೌದು, ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಫೇಸ್ ಬುಕ್ ನಲ್ಲಿ ಅಂದಚೆಂದದ ಹುಡುಗಿಯರು ಫೋಟೋ ತೋರಿದರೆ ಸಾಕು, ಇನ್ನಿಲ್ಲದ ಉತ್ಸಾಹ. ಅವರು ಯಾರು, ಏನೆಂದು ತಿಳಿಯದೇ ಚಾಟ್ ಶುರು ಮಾಡುತ್ತಾರೆ. ಆದರೆ ನಂತರದಲ್ಲಿ ಆಗುವ ಅನಾಹುತಗಳು ನಿಜಕ್ಕೂ ಆತಂಕಕಾರಿ.ಮೊದಲು ವಯ್ಯಾರ, ಆಮೇಲೆ ಬ್ಲಾಕ್‌ಮೇಲ್!ಯಾವುದೇ ಅಕೌಂಟ್ ನಿಂದ ರಿಕ್ವೆಸ್ಟ್ ಬಂದರೂ ಸಹ ಏಕಾಏಕಿ ಅಕ್ಸೆಪ್ಟ್ ಮಾಡುವುದು ನಿಜಕ್ಕೂ ದಡ್ಡತನದ ಪರಮಾವಧಿ. ಯಾರೋ ಎಲ್ಲೋ ಕೂತು ಹೆಣೆಯುವ ಬಲೆಗೆ ತಾನಾಗಿಯೇ ಬಿದ್ದಾಂತಾಗುತ್ತದೆ. ಮೊದಲು ಸ್ಮೂತ್ ಆಗಿಯೇ ಮಾತನಾಡುವ ಲಲನೆಯರು, ನಂತರ ತಮ್ಮ ಗಿರಾಕಿಗಳನ್ನ ಬಿಟ್ಟು ಬೆದರಿಕೆ ಹಾಕಿಸುತ್ತಾರೆ. ಹಣದ ಜೊತೆ ಮಾನವೂ ಹೋಗುತ್ತೆ!ಲಲನೆಯರ ಮಾತಿಗೆ ಮರಳಾಗಿ ಎಲ್ಲವನ್ನು ತೋರಿದರೆ ಅದನ್ನೇ ಇಟ್ಟುಕೊಂಡು ಗುಂಡಿತೋಡುತ್ತಾರೆ. ಹಣ, ಒಡವೆ, ಇತ್ಯಾದಿಗಳನ್ನ ಕೊಡು ಎಂದು ಪೀಡಿಸುತ್ತಾರೆ. ಕೊಡದಿದ್ದರೆ, ನಿನ್ನ ಮಾನ ಹರಾಜು ಹಾಕುತ್ತೇವೆ ಎಂದು ಧಮ್ಕಿ ಹಾಕುತ್ತಾರೆ. ನಂತರ ಮರ್ಯಾದೆಗೆ ದೆಹರಿಕೊಂಡು ಎಲ್ಲೂ ಹೇಳಲು ಆಗದೇ, ಇರುವುದೆಲ್ಲವನ್ನೂ ಕಳೆದುಕೊಳ್ಳಬೇಕು ಅಷ್ಟೇ!ಇದನ್ನೂ ಓದಿ: Bengaluru: ರಾಜಧಾನಿಯಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ರೇಪ್; ಮೂವರು ಅರೆಸ್ಟ್ಹಾಗಾಗಿ ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಚಾರಗಳನ್ನ ಅತ್ಯಂತ ಸೂಕ್ಷ್ಮವಾಗಿ ಗಮನಿಸಿಕೊಂಡು ಹೋದರೆ ಯಾವುದೇ ಅಪಾಯವಿಲ್ಲ. ಬಣ್ಣಕ್ಕೆ ಮರುಳಾದರೆ ಕೊನೆಗೆ ಹಣವೂ ಇಲ್ಲ,

Post a Comment