Jagadish Shettar: ಹೈಕಮಾಂಡ್​ನಿಂದ ಮಾಜಿ ಸಿಎಂಗೆ ಸ್ಪೆಷಲ್ ಟಾಸ್ಕ್!


 ಜಗದೀಶ್ ಶೆಟ್ಟರ್, ಮಾಜಿ ಸಿಎಂ

Loksabha Election 2024: ಶೆಟ್ಟರ್ ಅವರನ್ನು ಕಾಂಗ್ರೆಸ್ ಎಂಎಲ್​​​​ಸಿ. ಮಾಡಿತ್ತು. ಇದೀಗ ಮಹತ್ವದ ಜವಾಬ್ದಾರಿ ಕೊಡಲು ದೆಹಲಿಗೆ ಬುಲಾವ್ ನೀಡಲಾಗಿದೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ.ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar)​ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದ (North Karnataka) ಜವಾಬ್ದಾರಿ ಕೊಡ್ತಿದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಚುನಾವಣೆಯ ದೃಷ್ಟಿಯಲ್ಲಿ ಉತ್ತರ ಕರ್ನಾಟಕದಲ್ಲಿ ಸಂಘಟನೆ ಜವಾಬ್ದಾರಿ ಕೊಡಲಿದ್ದು, ಅತಿ ಹೆಚ್ಚು ಸೀಟು ಗೆಲ್ಲಿಸಿ ತರುವ ಟಾಸ್ಕ್ ನೀಡಲಾಗ್ತಿದೆ. ಲೋಕಸಭೆ ಚುನಾವಣೆ (Loksabha Election) ಸ್ಪರ್ಧೆಗೆ ಶೆಟ್ಟರ್ ನಿರಾಸಕ್ತಿ ತೋರಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಹೀಗಾಗಿ ಉತ್ತರ ಕರ್ನಾಟಕದಲ್ಲಿ ಪಕ್ಷ ಬಲವರ್ಧನೆಗೆ ಶೆಟ್ಟರ್ ಬಳಸಿಕೊಳ್ಳಲು ಕಾಂಗ್ರೆಸ್ (Congress) ತೀರ್ಮಾನಿಸಿದೆ. ಈ ಕುರಿತ ಚರ್ಚೆಗೆ ಕೈ ಕಮಾಂಡ್ ದೆಹಲಿಗೆ ಬುಲಾವ್ ನೀಡಿದ್ದು, ಈಗಾಗಲೇ ಶೆಟ್ಟರ್ ದೆಹಲಿಗೆ ತೆರಳಿದ್ದಾರೆ.ಎರಡು ದಿನಗಳ ಸಭೆಯಲ್ಲಿ ಶೆಟ್ಟರ್ ಭಾಗಿಯಾಗ್ತಿದಾರೆ. ಲೋಕಸಭೆ ಚುನಾವಣೆ ತಂತ್ರಗಾರಿಕೆ ಕುರಿತು ಶೆಟ್ಟರ್ ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದಾರೆ. ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡ ನನ್ನನ್ನು ಕರೆದಿದ್ದಾರೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಸಿದ್ಧನಿದ್ದೇನೆ ಎಂದು ಹೇಳಿದರು. ಕೊಟ್ಟ ಜವಾಬ್ದಾರಿ ನಿರ್ವಹಿಸುವೆಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಸೀಟು ಗೆಲ್ಲಿಸಿಕೊಂಡು ಬರೋದೆ ಗುರಿ. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ತೇನೆ. ಬಿಜೆಪಿಯಿಂದ ಪಕ್ಷಾಂತರಗೊಂಡಾಗ ಕೆಲ ಕಂಡಿಷನ್ ಹಾಕಿದ್ದೆ. ಅದರಂತೆಯೇ ಕಾಂಗ್ರೆಸ್ ನಡೆದುಕೊಂಡಿದೆ. ನನ್ನನ್ನು ಕಾಂಗ್ರೆಸ್​ನವರು ಗೌರವಯುತವಾಗಿ ನಡೆಸಿಕೊಳ್ತಿದಾರೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಅವರು ಕೊಡುವ ಜವಾಬ್ದಾರಿ ನಿಭಾಯಿಸ್ತೇನೆ ಎಂದು ಶೆಟ್ಟರ್ ನ್ಯೂಸ್ 18 ಗೆ ತಿಳಿಸಿದ್ದಾರೆ. ಜಗದೀಶ್ ಶೆಟ್ಟರ್, ಮಾಜಿ ಸಿಎಂ ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಶೆಟ್ಟರ್ ಸೋತಿದ್ದರು. ಆದರೆ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಸೀಟು ಗೆಲ್ಲಲು ಶೆಟ್ಟರ್ ಪಕ್ಷಾಂತರ ಸಹಕಾರಿಯಾಗಿತ್ತು. ಅದನ್ನು ದೃಷ್ಟಿಯಲ್ಲಿಟ್ಟುಕೊಂಡೇ ಶೆಟ್ಟರ್ ಅವರನ್ನು ಕಾಂಗ್ರೆಸ್ ಎಂಎಲ್​​​​ಸಿ. ಮಾಡಿತ್ತು. ಇದೀಗ ಮಹತ್ವದ ಜವಾಬ್ದಾರಿ ಕೊಡಲು ದೆಹಲಿಗೆ ಬುಲಾವ್ ನೀಡಲಾಗಿದೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ. ಬಿಜೆಪಿ ಬಗ್ಗೆ ಶೆಟ್ಟರ್ ಮರುಕ..!ಕರ್ನಾಟಕದ ಬಿಜೆಪಿಯನ್ನು ನೋಡಿದ್ರೆ ಅಯ್ಯೋ ಅನಿಸುತ್ತೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ. ಕರ್ನಾಟಕ ಬಿಜೆಪಿ ಲೀಡರ್ ಲೆಸ್ ಪಾರ್ಟಿ ಆಗಿ ಮಾರ್ಪಟ್ಟಿದೆ. ರಾಜ್ಯದಲ್ಲಿ ಬಿಜೆಪಿ ದಯನೀಯ ಸ್ಥಿತಿಗೆ ತಲುಪಿದೆ ಎಂದರು.ಅವರಿಗೊಬ್ಬ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡಲಾಗ್ತಿಲ್ಲ. ಕಳೆದ ತಿಂಗಳು ಮಹತ್ವದ ವಿಧಾನಸಭೆ ಅಧಿವೇಶನ ನಡೆಯಿತು. ರಾಜ್ಯಪಾಲರ ಭಾಷಣ ಮತ್ತು ಬಜೆಟ್ ಅಧಿವೇಶನವಿತ್ತು. ಅತ್ಯಂತ ಮಹತ್ವದ ಅಧಿವೇಶನದಲ್ಲಿ ಬಿಜೆಪಿಯಿಂದ ವಿರೋಧ ಪಕ್ಷದ ನಾಯಕನೇ ಇರಲಿಲ್ಲ ಎಂದು ಹೇಳಿದರು.ಎರಡು ಕಡೆ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡೋಕೆ ಆಗ್ತಿಲ್ಲ. ಪ್ರತಿಪಕ್ಷದ ನಾಯನಿಲ್ಲದೇ ಅಧಿವೇಶನ ಮುಗಿದಿದ್ದು ಇತಿಹಾಸದಲ್ಲಿ ಇದೇ ಮೊದಲು. ಯಾವುದೇ ಪ್ರತಿಪಕ್ಷಕ್ಕೆ ಈ ರೀತಿಯ ದಯನೀಯ ಪರಿಸ್ಥಿತಿ ಬಂದಿರಲಿಲ್ಲ.ಇದನ್ನೂ ಓದಿ: BJP President: ಜಿಲ್ಲೆಯಲ್ಲಿ ಒಂದೂ ಸ್ಥಾನ ಗೆಲ್ಲಿಸದೇ, ತಾವೇ ಸೋತ ಸಿಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷರಾದ್ರೆ ಸ್ವಾಗತ! ಬಿಜೆಪಿ ಕಾಲೆಳೆದೆ ಕಾಂಗ್ರೆಸ್ಯಾರನ್ನು ನೇಮಕ ಮಾಡಿದ್ರೆ ಏನಾಗುತ್ತೆ ಅಂತ ವರಿಷ್ಠರಿಗೆ ಹೆದರಿಕೆ ಇರಬಹುದು. ಹೀಗಾಗಿ ಲೀಡರ್ ಲೆಸ್ ಪಾರ್ಟಿ ಆಗಿ ಬಿಜೆಪಿ ಮುಂದುವರಿದಿದೆ ಎಂದು ತಿಳಿಸಿದರು.

Post a Comment

Previous Post Next Post