ಸಿಟಿ ರವಿ
ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಕೆಂಪೇಗೌಡ ಏರ್ಪೋಟ್ನಿಂದ ದೆಹಲಿಯತ್ತ 3 ಗಂಟೆಯ ಇಂಡಿಗೋ ವಿಮಾನದಲ್ಲಿ ಸಿಟಿ ರವಿ ತೆರಳಿದ್ದಾರೆ.ಬೆಂಗಳೂರು: ಚುನಾವಣೆ (Assembly Election) ಮುಗಿದು ಸರ್ಕಾರ ರಚನೆಯಾಗಿ 3 ತಿಂಗಳಾಗುತ್ತಿದ್ದರೂ, ಬಿಜೆಪಿ ಇನ್ನೂ ವಿಪಕ್ಷ ನಾಯಕ (Opposition Party leader) ಹಾಗೂ ರಾಜ್ಯಾಧ್ಯಕ್ಷರನ್ನ (BJP State President) ಘೋಷಿಸಿಲ್ಲ. ಮಾಜಿ ಸಚಿವ ವಿ ಸುನೀಲ್ ಕುಮಾರ್, ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ, ಅಶ್ವಥ ನಾರಾಯಣ, ಸಿಟಿ ರವಿ ಸೇರಿ ಹಲವು ನಾಯಕರ ಹೆಸರುಗಳು ಈ ಎರಡು ಸ್ಥಾನಕ್ಕೆ ಕೇಳಿಬರುತ್ತಿವೆ. ಆದರೆ ಕಳೆದ ಎರಡು ಮೂರು ದಿನಗಳಿಂದ ಹಿರಿಯ ನಾಯಕ ಸಿ.ಟಿ. ರವಿ ಹೆಸರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್ಚಾಗಿ ಕೇಳಿಬರುತ್ತಿದೆ. ಈ ವಿಚಾರವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ಸಿಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷರಾದ ಪಕ್ಷ ಸಂತೋಷದಿಂದ ಸ್ವಾಗತಿಸುತ್ತದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ ಕಾಲೆಳೆದಿದೆ. ಸಿ.ಟಿ ರವಿ ಅವರನ್ನು ದೆಹಲಿಗೆ ಹೋದ ಬೆನ್ನಲ್ಲೇ ಕಾಂಗ್ರೆಸ್ ಈ ಟ್ವೀಟ್ ಮಾಡಿದೆ.ದೆಹಲಿಗೆ ಹೊರಟ ಸಿ.ಟಿ ರವಿಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಕೆಂಪೇಗೌಡ ಏರ್ಪೋಟ್ನಿಂದ ದೆಹಲಿಯತ್ತ 3 ಗಂಟೆಯ ಇಂಡಿಗೋ ವಿಮಾನದಲ್ಲಿ ಸಿಟಿ ರವಿ ತೆರಳಿದ್ದಾರೆ. ಈ ವೇಳೆ ಏರ್ಪೋರ್ಟ್ನಲ್ಲಿ ಮಾತನಾಡಿದ ಸಿಟಿ ರವಿ, ದೆಹಲಿಯ ನನ್ನ ಕಚೇರಿಯನ್ನ ಮುಚ್ಚಿದ್ದೇನೆ. ಹೀಗಾಗಿ ಸಿಬ್ಬಂದಿಗೆ ಧನ್ಯವಾದ ತಿಳಿಸಲು ಹೋಗುತ್ತಿದ್ದೇನೆ. ಹಾಗೆ ಕೆಲ ಸಹೋದ್ಯೋಗಿಗಳನ್ನು ಸಹ ಭೇಟಿಯಾಗಿ ಮೂರು ನಾಲ್ಕು ದಿನಗಳಲ್ಲಿ ಮರಳುತ್ತೇನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: Karnataka BJP: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಟಿ ರವಿ ಬಹುತೇಕ ಫಿಕ್ಸ್, ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೊಕ್!ಸಿ.ಟಿ ರವಿ ಅಧ್ಯಕ್ಷರಾದರೆ ಕಾಂಗ್ರೆಸ್ಗೆ ಲಾಭ!ಸಿ.ಟಿ ರವಿ ದೆಹಲಿಯತ್ತ ಪ್ರಯಾಣ ಬೆಳೆಸಿದ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ ಬಿಜೆಪಿ ಕಾಲೆಳೆದಿದೆ. " ತವರು ಜಿಲ್ಲೆಯಾದ ಚಿಕ್ಕಮಗಳೂರಿನಲ್ಲಿ ಒಂದೇ ಒಂದು ಕ್ಷೇತ್ರವನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ, ಬೇರೆ ಕ್ಷೇತ್ರವನ್ನು ಗೆಲ್ಲಿಸುವುದಿರಲಿ, ಸ್ವತಃ ಸಿಟಿ ರವಿ ಅವರೇಹಿನಾಯವಾಗಿ ಸೋತಿದ್ದಾರೆ. ಇನ್ನು ತಮಿಳುನಾಡಿನ ಉಸ್ತುವಾರಿಯಾಗಿ ಅವರು ಮಾಡಿದ ಸಾಧನೆ ಸಹ ಶೂನ್ಯ. ಇಂತಹ ಹಲವು ವೈಫಲ್ಯಗಳ ಸರದಾರ ಸಿಟಿ ರವಿಯನ್ನು ಬಿಜೆಪಿಯ ರಾಜ್ಯಾಧ್ಯಕ್ಷನನ್ನಾಗಿ ಮಾಡುವ ತೀರ್ಮಾನದಿಂದ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಲಾಭವಾಗಲಿದೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದೆ. ಮುಂದುವರೆದು ಅಕಸ್ಮಾತ್ ಬಿಜೆಪಿ ಅವರಿಗೆ ರಾಜ್ಯಾಧ್ಯಕ್ಷ ಮಾಡುವ ನಿರ್ಧಾರ ಕೈಗೊಂಡರೆ ಕಾಂಗ್ರೆಸ್ ಪಕ್ಷ ಸಂತೋಷದಿಂದ ಸ್ವಾಗತಿಸುತ್ತದೆ ಎಂದು ಬಿಜೆಪಿ ಕಾಲೆಳೆದಿದೆ.ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಸಾಧ್ಯತೆ ಹೆಚ್ಚುಸಿಟಿ ರವಿ ಅವರನ್ನು ರಾಜ್ಯ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತೆ ಅನ್ನುವ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಸಿಟಿ ರವಿ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆರವುಗೊಳಿಸಲಾಗಿದೆ. ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೊಕ್ ನೀಡಿರುವ ಕಾರಣ ಮತ್ತು ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ಅಲಿಖಿತ ನಿಯಮ ಚಾಲ್ತಿಯಲ್ಲಿರುವ ಕಾರಣ ಸಿಟಿ ರವಿ ಅವರನ್ನು ರಾಜ್ಯ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತೆ ಅನ್ನುವ ಚರ್ಚೆಗೆ ಮತ್ತಷ್ಟು ಇಂಬು ನೀಡಿತ್ತು.

Post a Comment