ಸಾಂಕೇತಿಕ ಚಿತ್ರ
ಮೊದಲ ದಿನವೇ ರೂಲ್ಸ್ ಬ್ರೇಕ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 137 ಕೇಸ್ ದಾಖಲಾಗಿದೆ. ಅಷ್ಟೇ ಅಲ್ಲ ಮೊದಲ ದಿನವೇ 68,500 ರೂಪಾಯಿ ಹಣ ದಂಡದ ರೂಪದಲ್ಲಿ ಸಂಗ್ರಹವಾಗಿದೆ. ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆಯಲ್ಲಿ (Bangalore-Mysore Express Highway) ದ್ವಿಚಕ್ರ ವಾಹನ (Two-wheeler), ತ್ರಿಚಕ್ರ ವಾಹನಗಳನ್ನು (three-wheeler vehicles) ಇಂದು ಅಂದರೆ ಆಗಸ್ಟ್ 1ರಿಂದ ನಿಷೇಧಿಸಲಾಗಿತ್ತು. ರೂಲ್ಸ್ ಬ್ರೇಕ್ ಮಾಡುವುದನ್ನು ತಡೆಯಲು ಹೈವೆಯಲ್ಲಿ ಅಲ್ಲಲ್ಲಿ ಪೊಲೀಸರನ್ನು (police) ನಿಯೋಜಿಸಲಾಗಿತ್ತು. ಆದರೂ ಬೈಕ್ (Bike) ಸೇರಿದಂತೆ ಅನೇಕ ವಾಹನ ಸವಾರರು ರೂಲ್ಸ್ ಇರೋದೇ ಬ್ರೇಕ್ ಮಾಡೋದಕ್ಕೆ ಅಂತ ರೂಲ್ಸ್ ಬ್ರೇಕ್ (Rules Break) ಮಾಡಿದ್ದಾರೆ. ಹೀಗೆ ಮೊದಲ ದಿನವೇ ರೂಲ್ಸ್ ಬ್ರೇಕ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 137 ಕೇಸ್ (Case) ದಾಖಲಾಗಿದೆ. ಅಷ್ಟೇ ಅಲ್ಲ ಮೊದಲ ದಿನವೇ 68,500 ರೂಪಾಯಿ ಹಣ ದಂಡದ (fines) ರೂಪದಲ್ಲಿ ಸಂಗ್ರಹವಾಗಿದೆ.ಮೊದಲ ದಿನವೇ 68 ಸಾವಿರ ರೂಪಾಯಿ ದಂಡ ಸಂಗ್ರಹಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ಹೈವೆಯಲ್ಲಿ ದ್ವಿಚಕ್ರ ವಾಹನಗಳಿಗೆ ಇಂದಿನಿಂದ ನಿರ್ಬಂಧ ಹೇರಲಾಗಿತ್ತು. ಇಂದು ಮೊದಲ ದಿನವೇ ನೂರಾರು ಮಂದಿ ಬೈಕ್ ಸವಾರರು ನಿಯಮ ಉಲ್ಲಂಘನೆ ಮಾಡಿದ್ದಾರೆ. ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 137 ಪ್ರಕರಣಗಳು ಮೊದಲ ದಿನವೇ ದಾಖಲಾಗಿದೆ. ಹಾಗೆಯೇ ಮೊದಲ ದಿನವೇ 68,500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಅಂತ ರಾಮನಗರ ಜಿಲ್ಲಾ ಪೊಲೀಸು ಮಾಹಿತಿ ನೀಡಿದ್ದಾರೆ. ಅಲ್ಲದೇ ನಾಳೆಯಿಂದ ನಿಯಮ ಉಲ್ಲಂಘನೆ ಮಾಡಬೇಡಿ ಎಂದು ವಾಹನ ಸವಾರರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.ಹೈವೆಯುದ್ದಕ್ಕೂ ಪೊಲೀಸರ ಕಣ್ಗಾವಲುರಾಮನಗರದ ಸಂಗಬಸವನದೊಡ್ಡಿ ಎಕ್ಸಿಟ್ ಗೇಟ್ ಬಳಿ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದರು. ದಂಡ ಕಟ್ಟಿಸಿಕೊಂಡು ಬೈಕ್ ಸವಾರರಿಗೆ ಸಂಚಾರಿ ನಿಯಮ ಕುರಿತು ತಿಳಿ ಹೇಳುತ್ತಿದ್ದರು. ಬೈಕ್ ಸವಾರರು ಸರ್ವೀಸ್ ರಸ್ತೆ ಬಳಸುವಂತೆ ಸೂಚನೆ ನೀಡಲಾಗಿತ್ತು. ಇದನ್ನೂ ಓದಿ: Bengaluru Mysuru Expressway: ದ್ವಿಚಕ್ರ ವಾಹನ ಸವಾರರೇ ಗಮನಿಸಿ, ಇಲ್ಲೆಲ್ಲ ಇದ್ದಾರೆ ಪೊಲೀಸ್! ವಾಹನ ಸವಾರರಿಗೆ ಪೊಲೀಸರ ಸೂಚನೆಹೆದ್ದಾರಿ ಪ್ರವೇಶಿಸುತ್ತಿರುವ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ವಾಹನ ನಿರ್ಬಂಧದ ಕುರಿತು ಮಾಹಿತಿ ನೀಡುತ್ತಿದ್ದರು. ಮತ್ತೊಮ್ಮೆ ಹೆದ್ದಾರಿ ಪ್ರವೇಶಿಸದಂತೆ ಎಚ್ಚರಿಕೆ ನೀಡುತ್ತಿದ್ದರು.ಸಾರ್ವಜನಿಕರ ಸುರಕ್ಷತೆಗಾಗಿ ಈ ಕ್ರಮಪೊಲೀಸ್ ಇಲಾಖೆ - ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುರಕ್ಷತೆಗಾಗಿ ಈ ನಿಮಯ ಮಾಡಿದ್ದೇವೆ. ಎಲ್ಲ ಸಾರ್ವಜನಿಕರು ಆದೇಶವನ್ನ ಪಾಲಿಸಬೇಕು. ನಿಯಮ ಉಲ್ಲಂಘನೆ ಮಾಡಿದರೆ ದಂಡ ಹಾಕಲಾಗುತ್ತದೆ. ಈಗಾಗಲೇ ಈ ಕುರಿತಾಗಿ ಎಲ್ಲ ರೀತಿಯ ಮಾಹಿತಿ ನೀಡಿದ್ದೇ.

Post a Comment