Basavaraj Bommai: ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಕೇಳಿದ ಮಾಜಿ ಸಿಎಂಗೆ ಅಮಿತ್ ಶಾ ಹೇಳಿದ್ದೇನು?


 ಬಸವರಾಜ್ ಬೊಮ್ಮಾಯಿ-ಅಮಿತ್ ಶಾ

Amit shah: ರಾಜಕೀಯ ಬೆಳವಣಿಗೆ ಹಾಗೂ ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಅಮಿತ್ ಶಾ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆಬೆಂಗಳೂರು: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ (Former CM Basavaraj Bommai) ಮಂಗಳವಾರ ಕೇಂದ್ರ ಸಚಿವ ಅಮಿತ್ ಶಾ (Union Minister Amit Shah) ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಆದ್ರೆ ಈ ಭೇಟಿಯಲ್ಲಿ ವಿರೋಧ ಪಕ್ಷದ ನಾಯಕನ (Opposition Party Leader) ಆಯ್ಕೆ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಭೇಟಿಯ ವೇಳೆ ರಾಜ್ಯದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆ ಹಾಗೂ ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಅಮಿತ್ ಶಾ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕೊಟ್ಟ ಮಾತಿನಂತೆ ಕಾಂಗ್ರೆಸ್ ಗ್ಯಾರಂಟಿಗಳ (Congress guarantees) ಅನುಷ್ಠಾನ ಮಾಡಿದೆಯೆ? ಗ್ಯಾರಂಟಿಗಳಿಗೆ ಹಣಕಾಸಿನ ಪರಿಸ್ಥಿತಿ ಏನು? ಗ್ಯಾರಂಟಿಗಳ ಬಗ್ಗೆ ಜನರು ಏನು ಹೇಳುತ್ತಿದ್ದಾರೆ ಎಂಬ ವಿಷಯಗಳ ಕುರಿತ ವಿವರವನ್ನು ಅಮಿತ್ ಶಾ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.ಈ ಭೇಟಿ ವೇಳೆ ಗ್ಯಾರಂಟಿಗಳ ಲೋಪದ ಬಗ್ಗೆ ಬೃಹತ್ ಹೋರಾಟಕ್ಕೆ ಕರೆ ನೀಡುವಂತೆ ಅಮಿತ್ ಶಾ ಸೂಚನೆ ನೀಡಿದ್ದಾರಂತೆ. ಸರ್ಕಾರದ ವೈಫಲ್ಯದ ಬಗ್ಗೆ ಜನರಿಗೆ ತಿಳಿಸಬೇಕು. ಆಕ್ರಮಣಕಾರಿಯಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು ಎಂದು ಕರೆ ಕೊಟ್ಟಿದ್ದಾರೆ ಎನ್ನಲಾಗಿದೆ.ಬಸವರಾಜ್ ಬೊಮ್ಮಾಯಿ-ಅಮಿತ್ ಶಾಒಟ್ಟಾಗಿ ಕೆಲಸ ಮಾಡುವಂತೆ ಕರೆ ನಾಯಕತ್ವದ ಬಗ್ಗೆ ತಲೆಕೆಡೆಸಿಕೊಳ್ಳಬೇಡಿ. ಆದಷ್ಟು ಬೇಗ ಎಲ್ಲರದ್ದೂ ಒಂದೇ ಬಾರಿ ಆಗುತ್ತದೆ. ಆದರೆ ಕಾಂಗ್ರೆಸ್ ನ ಗ್ಯಾರಂಟಿಗಳು ಮತ್ತೆ ಬರುವ ಲೋಕಸಭೆ ಚುನಾವಣೆ ಮೇಳೆ ಎಫೆಕ್ಟ್ ಆಗಬಾರದು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಒಟ್ಟಾಗಿ ಕೆಲಸ ಮಾಡುವಂತೆ ಕರೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಈ ವೇಳೆ ವಿಪಕ್ಷ ನಾಯಕನಿಲ್ಲದೇ ಪಕ್ಷಕ್ಕೆ ಆಗ್ತಿರುವ ಮುಜುಗರದ ಬಗ್ಗೆ ಅಮಿತ್ ಶಾ ಗಮನಕ್ಕೆ ಬಸವರಾಜ್ ಬೊಮ್ಮಾಯಿ ತಂದಿದ್ದಾರೆ ಎನ್ನಲಾಗಿದೆ. ಜೊತೆಗೆ ಇತ್ತೀಚಿನ ಸರ್ಕಾರದ ಮೇಲಿನ ಕಮಿಷನ್ ಹಾಗೂ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: Ayodhya Journey: ರಾಮೇಶ್ವರಂನಿಂದ ಅಯೋಧ್ಯೆಗೆ ಹೋಗೋರಿಗೆ ಗುಡ್‌ನ್ಯೂಸ್‌, ಇಲ್ಲಿದೆ ವೇಗವಾಗಿ ತಲುಪುವ ಮಾರ್ಗ!ಮತ್ತೆ ವಿದೇಶಕ್ಕೆ ತೆರಳಿದ ಹೆಚ್​ಡಿಕೆಇತ್ತೀಗಷ್ಟೇ ಕುಟುಂಬದ ಜೊತೆ ಯುರೋಪ್ ಪ್ರವಾಸ ಮುಗಿಸಿ ಬಂದಿದ್ದ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಇದೀಗ ಮತ್ತೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ತಮ್ಮ ಆಪ್ತಬಳಗದವರೊಂದಿಗೆ ಈಗ ಮತ್ತೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಆಪ್ತರ ಜೊತೆಗೆ ಮಲೇಶಿಯಾದ ಕೌಲಾಲಂಪುರಕ್ಕೆ ಪ್ರಯಾಣ ಬೆಳೆಸಿದ್ದಾರೆಂದು ತಿಳಿದು ಬಂದಿದೆ.

Post a Comment

Previous Post Next Post