ಸ್ಪಂದನಾ ವಿಜಯ ರಾಘವೇಂದ್ರ
ಇಂದು ಮಧ್ಯಾಹ್ನ ಸ್ಪಂದನಾ ಅಂತ್ಯಕ್ರಿಯೆ ನಡೆಯಲಿದೆ. ಹರಿಶ್ಚಂದ್ರ ಘಾಟ್‌ನ ಚಿತಾಗಾರದಲ್ಲಿ ಸ್ಪಂದನಾ ಅಂತ್ಯಕ್ರಿಯೆ ನಡೆಸಲು ಎರಡೂ ಕುಟುಂಬಸ್ಥರು ನಿರ್ಧರಿಸಿದ್ದಾರೆ.ಬೆಂಗಳೂರು: ನಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ (Spandana) ಅಂತ್ಯಕ್ರಿಯೆ (funeral) ಇಂದು ನಡೆಯಲಿದೆ. ಬೆಂಗಳೂರಿನ (Bengaluru) ಹರಿಶ್ಚಂದ್ರ ಘಾಟ್‌ನ (Harishchandra) ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲು ವಿಜಯ ರಾಘವೇಂದ್ರ ಕುಟುಂಬಸ್ಥರು ಹಾಗೂ ಬಿಕೆ ಶಿವರಾಂ (BK Shivaram) ಕುಟುಂಬಸ್ಥರು ನಿರ್ಧರಿಸಿದ್ದಾರೆ. ವಿದೇಶದಲ್ಲಿ ಮೃತಪಟ್ಟಿದ್ದ ಸ್ಪಂದನಾ ಮೃತದೇಹವನ್ನು ನಿನ್ನೆ ರಾತ್ರಿ ಬೆಂಗಳೂರಿಗೆ ತರಲಾಗಿತ್ತು. ಬ್ಯಾಂಕಾಕ್‌ನಿಂದ (Bangkok) ಥಾಯ್ ವಿಮಾನದಲ್ಲಿ ಬಂದ ಸ್ಪಂದನಾ ಪಾರ್ಥಿವ ಶರೀರವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕುಟುಂಬಸ್ಥರು ಪಡೆದುಕೊಂಡಿದ್ದರು. ಬಳಿಕ ಮಲ್ಲೇಶ್ವರಂನ (Malleswaram) ಸ್ಪಂದನಾ ತವರು ಮನೆಗೆ ತೆಗೆದಕೊಂಡು ಹೋಗಲಾಗಿತ್ತು. ನಿನ್ನೆ ರಾತ್ರಿಯಿಂದಲೇ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಇಂದು ಮಧ್ಯಾಹ್ನದವರೆಗೂ ಅಂತಿಮ ದರ್ಶನ ನೀಡಲು ನಿರ್ಧರಿಸಲಾಗಿದೆ.ಇಂದು ಸ್ಪಂದನಾ ಅಂತ್ಯಕ್ರಿಯೆಇಂದು ಮಧ್ಯಾಹ್ನ ಸ್ಪಂದನಾ ಅಂತ್ಯಕ್ರಿಯೆ ನಡೆಯಲಿದೆ. ಹರಿಶ್ಚಂದ್ರ ಘಾಟ್‌ನ ಚಿತಾಗಾರದಲ್ಲಿ ಸ್ಪಂದನಾ ಅಂತ್ಯಕ್ರಿಯೆ ನಡೆಸಲು ಎರಡೂ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಸ್ಪಂದನಾ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ನಿರ್ಧಾರಸ್ಪಂದನಾ ಮೃತದೇಹವನ್ನು ಅವರ ತವರು ಮನೆ ಅಂದರೆ ಬಿಕೆ ಶಿವರಾಂ ಅವರ ಮಲ್ಲೇಶ್ವರಂ ನಿವಾಸದಲ್ಲಿ ಇಡಲಾಗಿದೆ. ಪ್ರತ್ಯೇಕ ಬ್ಯಾರಿಕೇಡ್ ಹಾಕಿ, ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನದವರೆಗೆ ಅಂತಿಮ ದರ್ಶನ ನಡೆಯಲಿದ್ದು, ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ.ಇದನ್ನೂ ಓದಿ: Spandana Vijay Raghavendra: ಬೆಂಗಳೂರು ತಲುಪಿತು ಸ್ಪಂದನಾ ಪಾರ್ಥಿವ ಶರೀರ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ನಿನ್ನೆ ರಾತ್ರಿಯಿಂದಲೇ ಆಗಮಿಸುತ್ತಿರುವ ಜನರು ಏರ್‌ಪೋರ್ಟ್‌ನಿಂದ ಮೃತದೇಹ ಆಗಮಿಸುತ್ತಿದ್ದಂತೆ ನಿನ್ನೆ ರಾತ್ರಿಯೇ ಸಾರ್ವಜನಿಕರು ಸ್ಪಂದನಾ ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಜೊತೆಗೆ ಸ್ಪಂದನಾ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರು, ಹಿತೈಷಿಗಳೂ ಕೂಡ ಆಗಮಿಸಿ, ಸ್ಪಂದನಾ ಅಂತಿಮ ದರ್ಶನ ಪಡೆದ್ರು. ಜೊತೆಗೆ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.ಶೋಕ ಸಾಗರದಲ್ಲಿ ಕುಟುಂಬಸ್ಥರುಪ್ರೀತಿಯ ಪತ್ನಿಯನ್ನು ಕಳೆದುಕೊಂಡು ಒಂದೆಡೆ ನಟ ವಿಜಯ ರಾಘವೇಂದ್ರ ಆಘಾತಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ ಅತ್ತಿಗೆ ಸಾವಿಗೆ ನಟ ಶ್ರೀಮುರಳಿ ಕಣ್ಣೀರಿಟ್ಟಿದ್ದಾರೆ. ಅತ್ತ ಮನೆಮಗಳನ್ನು ಕಳೆದುಕೊಂಡು ಬಿಕೆ ಶಿವರಾಂ, ಬಿಕೆ ಹರಿಪ್ರಸಾದ್ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.ರಾತ್ರಿ ಮಲಗಿದವರು ಮೇಲೇಳಲೇ ಇಲ್ಲ ಸ್ಪಂದನಾ!ಸ್ಪಂದನಾ ತಮ್ಮ ಸ್ನೇಹಿತೆಯರ ಜೊತೆ ಥೈಲ್ಯಾಂಡ್‌ಗೆ ಪ್ರವಾಸಕ್ಕೆ ಹೋಗಿದ್ದರು ಎನ್ನಲಾಗಿದೆ. ಸ್ಪಂದನಾ ಅವರಿಗೆ ಆಗಸ್ಟ್ 6ರಂದು ಹೃದಯಾಘಾತ ಆಯಿತು. ರಾತ್ರಿ ಮಲಗಿದವರು ಬೆಳಗ್ಗೆ ಎದ್ದೇಳಲೇ ಇಲ್ಲವಂತೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನ ಆಗಿಲ್ಲ. ಬಳಿಕ ಸೋಮವಾರ (ಆಗಸ್ಟ್ 7) ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.ಇದನ್ನೂ ಓದಿ: Spandana Passed Away: 16ನೇ ವರ್ಷದ ವಿವಾಹ ವಾರ್ಷಿಕೊತ್ಸವದ ಹೊಸ್ತಿಲಲ್ಲೇ ಶಾಕ್! ಪತ್ನಿ ಕಳೆದುಕೊಂಡು ವಿಜಯ್ ರಾಘವೇಂದ್ರ ಕಣ್ಣೀರುಸ್ಪಂದನಾ ನಿಧನಕ್ಕೆ ಸ್ಯಾಂಡಲ್‌ವುಡ್ ಕಣ್ಣೀರುಸ್ಪಂದನಾ ಸಾವಿನ ಸುದ್ದಿ ಕೇಳಿ ಸ್ಯಾಂಡಲ್‌ವುಡ್ ಮಂದಿ ಕಣ್ಣೀರು ಹಾಕಿದ್ದಾರೆ. ಕನ್ನಡ ಚಿತ್ರರಂಗದ ಹಿರಿ ಕಿರಿಯ ನಟ- ನಟಿಯರು, ನಿರ್ದೇಶಕರು, ನಿರ್ಮಾಪಕರು, ಸಹ ಕಲಾವಿದರು, ತಂತ್ರಜ್ಞರು ಸೇರಿದಂತೆ ಇಡೀ ಸ್ಯಾಂಡಲ್‌ವುಡ್ ಸ್ಪಂದನಾ ನಿಧನಕ್ಕೆ ಮರುಗಿದೆ. ವಿಜಯ ರಾಘವೇಂದ್ರ – ಸ್ಪಂದನಾ ಎಂಬ ಆದರ್ಶ ದಂಪತಿಗೆ ಅದ್ಯಾರ ಕೆಟ್ಟ ಕಣ್ಣು ಬಿತ್ತು ಅಂತ ಚಿತ್ರರಂಗದ ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ.

Post a Comment