Congress ಅಂಗಳದಲ್ಲಿ ಮತ್ತೊಂದು ಲೆಟರ್ ಬಾಂಬ್ ಸ್ಪೋಟ; ಮಾಜಿ ಶಾಸಕ ಬರೆದ ಪತ್ರದಲ್ಲೇನಿದೆ?


 ಸಾಂದರ್ಭಿಕ ಚಿತ್ರ

 Former MLA Bhima Naik Letter: ಅಡ್ಜಸ್ಟಮೆಂಟ್ ರಾಜಕೀಯ ಮಾಡಿದ ಹಿನ್ನೆಲೆ 12 ಸಾವಿರ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದೇನೆ ಎಂದು ಭೀಮಾನಾಯ್ಕ್ ಆರೋಪಿಸಿದ್ದಾರೆ.ವಿಜಯನಗರ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ (Congress Government) ಮತ್ತೊಂದು ಪತ್ರ ಬಾಂಬ್ ಸ್ಪೋಟಗೊಂಡಿದ್ದು, ಹೊಂದಾಣಿಕೆ ರಾಜಕಾರಣದ (Adjustment Politics) ಆರೋಪ ಕೇಳಿ ಬಂದಿದೆ. ಮಾಜಿ ಶಾಸಕ ಭೀಮಾನಾಯ್ಕ್ (Former MLA Bhima Naik) ತಮ್ಮ ಸೋಲಿಗೆ ಸ್ಥಳೀಯ ಪ್ರಮುಖ ಕಾಂಗ್ರೆಸ್ ನಾಯಕರ (Congress Leaders) ಹೊಂದಾಣಿಕೆಯ ರಾಜಕಾರಣ ಎಂದು ಆರೋಪಿಸಿ ಪತ್ರ (Letter) ಬರೆದ್ದಾರೆ. ಮಾಜಿ ಶಾಸಕ ಭೀಮಾ ನಾಯ್ಕ್, ಕಾಂಗ್ರೆಸ್ ಮುಖಂಡರಾದ ಮಾಜಿ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ (KC Kondaiah), ವಿಜಯನಗರ ಜಿಲ್ಲಾಧ್ಯಕ್ಷ ಸೀರಾಜ್ ಶೇಖ್ (Siraz Shek) ವಿರುದ್ಧ ದೂರು ನೀಡಿದ್ದಾರೆ.ಹಗರಿಬೊಮ್ಮನಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನೇಮಿರಾಜ್ ನಾಯ್ಕ್ (JDS Candidate Nemiraj Naik) ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ಅಡ್ಜಸ್ಟಮೆಂಟ್ ರಾಜಕೀಯ ಮಾಡಿದ ಹಿನ್ನೆಲೆ 12 ಸಾವಿರ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದೇನೆ ಎಂದು ಭೀಮಾನಾಯ್ಕ್ ಆರೋಪಿಸಿದ್ದಾರೆ.ಜೆಡಿಎಸ್ ಬಲವಿಲ್ಲದೇ ಇರೋ ಕ್ಷೇತ್ರವಾದ್ರೂ ಜೆಡಿಎಸ್ ಅಭ್ಯರ್ಥಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ. ಒಂದು ಕಡೆಗೆ ಬಿಜೆಪಿ ಅಭ್ಯರ್ಥಿಗೆ ಮತ್ತೊಂದು ಕಡೆ ಜೆಡಿಎಸ್ ಕಡೆ ಮತ ವಿಭಜನೆಯಾದ ಹಿನ್ನೆಲೆ ಸೋಲಾಯ್ತು. ಇವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಭೀಮಾನಾಯ್ಕ್ ಒತ್ತಾಯಿಸಿದ್ದಾರೆ.ಭೀಮಾ ನಾಯ್ಕ್ , ಮಾಜಿ ಶಾಸಕಜಮೀರ್ ಅಹಮ್ಮದ್ ಖಾನ್ ಹೇಳಿಕೆಈ ಸಂಬಂಧ ನನಗೂ ಪತ್ರ ಬರೆದಿದ್ದಾರೆ, ಅದು ಪಕ್ಷದವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಮ್ಮ ಪಕ್ಷದಲ್ಲಿ ಒಮ್ಮತದ ಕೊರತೆ ಇಲ್ಲ. ಇದುವರೆಗೆ ನನಗೆ ಸಮನ್ವಯದ ವಿಚಾರದಲ್ಲಿ ಯಾರೂ ಕೂಡ ದೂರು ಕೊಟ್ಟಿಲ್ಲ. ಸಣ್ಣ ಪುಟ್ಟ- ವ್ಯತ್ಯಾಸಗಳಿವೆ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಜಾರಿಕೊಂಡರು. ಭೀಮಾ ನಾಯ್ಕ್ , ಮಾಜಿ ಶಾಸಕಯಾರಿಗೆಲ್ಲಾ ಪತ್ರ ರವಾನೆಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ಸುರ್ಜಿವಾಲ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಕಾರ್ಯಧ್ಯಕ್ಷರಿಗೂ ದೂರಿನ ಪತ್ರವನ್ನು ಭೀಮಾ ನಾಯ್ಕ್ ರವಾನಿಸಿದ್ದಾರೆ.ಇದನ್ನೂ ಓದಿ: Kumar Bangarappa: ಕಾಂಗ್ರೆಸ್​​ನತ್ತ ಮುಖ ಮಾಡಿದ್ರಾ ಮಾಜಿ ಸಚಿವ? ಫೋಟೋ ವೈರಲ್!ಬಿಜೆಪಿಯಲ್ಲಿಯೂ ಹೊಂದಾಣಿಕೆ ರಾಜಕಾರಣದ ಆರೋಪವಿಧಾನಸಭಾ ಚುನಾವಣೆ ಸೋಲಿನ ಬಳಿಕ ರಾಜ್ಯ ಬಿಜೆಪಿ ಅಂಗಳದಲ್ಲಿಯೂ ಹೊಂದಾಣಿಕೆ ರಾಜಕಾರಣದ ಆರೋಪ ಕೇಳಿ ಬಂದಿತ್ತು. ಸಂಸದ ಪ್ರತಾಪ್ ಸಿಂಹ ಹೊಂದಾಣಿಕೆ ರಾಜಕಾರಣದ ಗಂಭೀರ ಆರೋಪ ಮಾಡಿದ್ದರು.

Post a Comment

Previous Post Next Post