ರಿಷಿ ಸುನಕ್
ರಿಷಿ ಸುನಕ್ ಅವರಿಗೆ ಭಾರತ ಕ್ರಿಕೆಟಿಗರಲ್ಲಿ ಒಬ್ಬರು ಸಖತ್ ಇಷ್ಟವಂತೆ. ಕಾರಣ ಏನು ಅಂತ ಕೇಳಿದ್ರೆ ನಿಮಗೂ ಅಚ್ಚರಿ ಆಗಬಹುದೇನೋ! ತಮ್ಮ ಪೂರ್ವಜರ ಮತ್ತು ತಮ್ಮ ಹೆಂಡತಿ ಅಕ್ಷತಾ ಮೂರ್ತಿ ಅವರ ಮೂಲಕ ಭಾರತೀಯ ಸಂಪರ್ಕವನ್ನು (Communication) ಹೊಂದಿರುವ ಯುಕೆಯ ಪ್ರಧಾನಿ ರಿಷಿ ಸುನಕ್ ಅವರಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು 'ದಿ ವಾಲ್' ಅಂತಾನೆ ಜನಪ್ರಿಯತೆ ಗಳಿಸಿದ್ದ ಬ್ಯಾಟರ್ ರಾಹುಲ್ ದ್ರಾವಿಡ್ (Rahul Dravid) ಅಂದ್ರೆ ತುಂಬಾನೇ ಇಷ್ಟವಂತೆ. ಇದನ್ನು ನಾವು ಹೇಳುತ್ತಿಲ್ಲ, ಇದನ್ನು ಖುದ್ದು ರಿಷಿ ಸುನಕ್ ಅವರೇ ಹೇಳಿದ್ದಾರೆ ನೋಡಿ. ರಿಷಿ (Rishi) ಅವರು ರಾಹುಲ್ ದ್ರಾವಿಡ್ ಅವರನ್ನು ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು ಅಂತ ಹೇಳಿದ್ದಾರೆ.ಸುನಕ್ ಅವರಿಗೆ ಈ ಕ್ರಿಕೆಟಿಗ ಅಂದ್ರೆ ಬಲು ಇಷ್ಟವಂತೆಕಳೆದ ವರ್ಷ ಯುಕೆ ಪ್ರಧಾನಿಯಾದ 43 ವರ್ಷದ ರಿಷಿ ಸುನಕ್ ಅವರು ರಾಹುಲ್ ದ್ರಾವಿಡ್ ಅವರ ವ್ಯಕ್ತಿತ್ವ, ಬ್ಯಾಟಿಂಗ್ ತಂತ್ರ ಮತ್ತು ಅವರ ವರ್ತನೆಯನ್ನು ತುಂಬಾನೇ ಇಷ್ಟಪಡುತ್ತಾರೆ ಅಂತ ಹೇಳಿದ್ದಾರೆ.ಸುನಕ್ ಬಿಬಿಸಿಯ ಟೆಸ್ಟ್ ಮ್ಯಾಚ್ ಸ್ಪೆಷಲ್ ಕಾರ್ಯಕ್ರಮದಲ್ಲಿ ಊಟದ ಸಮಯದಲ್ಲಿ ಅತಿಥಿಯಾಗಿ ಬಂದಿದ್ದರು. ಇವರ ಜೊತೆ ಸದ್ಯಕ್ಕೆ ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಹಣಾಹಣಿಯ ಬಗ್ಗೆ ಮಾತನಾಡುತ್ತಾ, ಲಾರ್ಡ್ಸ್ ನಲ್ಲಿ ಬರುವ ಬೌನ್ಸರ್ ಚೆಂಡುಗಳಿಗೆ ಬ್ಯಾಟರ್ ಹೇಗೆ ಆಡಬೇಕು, ರಾಹುಲ್ ದ್ರಾವಿಡ್ ತರಹ ಅದಕ್ಕೆ ಬಗ್ಗಿ ಕುಳಿತುಕೊಂಡು ಆಡಬೇಕೆ ಅಥವಾ ಅದನ್ನು ಹೊಡೆಯಬೇಕೆ ಅಂತ ಕೇಳಿದ್ದಕ್ಕೆ, ರಿಷಿ ಸುನಕ್ ಅವರು ನಗುತ್ತಾ “ರಾಹುಲ್ ದ್ರಾವಿಡ್ ನಿಜವಾಗಿಯೂ ನನ್ನ ನೆಚ್ಚಿನ ಆಟಗಾರರಲ್ಲಿ ಒಬ್ಬರು. ನಾನು ಅವರ ಬ್ಯಾಟಿಂಗ್ ತಂತ್ರವನ್ನು ಮತ್ತು ಆಟದ ಬಗ್ಗೆ ಅವರ ವರ್ತನೆಯನ್ನು ನಾನು ತುಂಬಾನೇ ಇಷ್ಟಪಡುತ್ತಿದ್ದೆ" ಎಂದು ಹೇಳಿದರು.2008 ರಲ್ಲಿ ಭಾರತಕ್ಕೆ ಬಂದ ಸುನಕ್ ಅವರು ಸಚಿನ್ ಬ್ಯಾಟಿಂಗ್ ನೋಡಿದ್ರಂತೆಸೌತಾಂಪ್ಟನ್‌ನಲ್ಲಿ ಜನಿಸಿದ ರಿಷಿ ಸುನಕ್ ಅವರು 2008 ರಲ್ಲಿ ಭಾರತಕ್ಕೆ ಬಂದದ್ದನ್ನು ನೆನಪಿಸಿಕೊಂಡರು ಮತ್ತು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಆಟವನ್ನು ಲೈವ್‌ನಲ್ಲಿ ವೀಕ್ಷಿಸಲು ಹೋಗಿದ್ದರು ಎಂದು ಹೇಳಿದರು.2008 ರಲ್ಲಿ ಭಯೋತ್ಪಾದಕ ದಾಳಿ ನಡೆದಾಗ ನಾನು ಭಾರತದಲ್ಲಿದ್ದೆ. ಇಂಗ್ಲೆಂಡ್ ಕ್ರಿಕೆಟ್ ತಂಡ ಸಹ ಭಾರತದ ಪ್ರವಾಸದಲ್ಲಿತ್ತು. ಗೆಳೆಯನ ಮದುವೆಗೆ ಅಂತ ನಾನು ಭಾರತಕ್ಕೆ ಹೋಗಿದ್ದೆ. ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯವನ್ನು ನೋಡಲು ನಾನು ಹೋಗಿದ್ದೆ. ಆ ಪಂದ್ಯದಲ್ಲಿ ರನ್ ಚೇಸ್ ಮಾಡುವಾಗ ಸಚಿನ್ ತೆಂಡೂಲ್ಕರ್ ಅವರು ಆಡಿದ ಅತ್ತ್ಯುತ್ತಮವಾದ ಆಟವನ್ನು ನೋಡಿದೆ.ಇದನ್ನೂ ಓದಿ: ತ್ರಿಪಕ್ಷೀಯ ಹೆದ್ದಾರಿಯ ಇನ್ನಷ್ಟು ಅಪ್ಡೇಟ್ ಇಲ್ಲಿದೆ, ಇದರ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳೋದೇನು?ಆದರೆ ಅವತ್ತು ನಾವು ಸೋತಿದ್ದೇವು ಮತ್ತು ಭಾರತ ತಂಡವು ಗೆದ್ದಿತ್ತು. ಸಚಿನ್ ಅವರು ಬ್ಯಾಟ್ ಮಾಡುವುದನ್ನು ಲೈವ್ ಆಗಿ ನೋಡುವುದು ತುಂಬಾ ಚೆನ್ನಾಗಿತ್ತು” ಎಂದು ಸುನಕ್ ಹೇಳಿದರು.ಸುನಕ್ ಅವರಿಗೆ ಕ್ರಿಕೆಟ್ ಬಗ್ಗೆ ತುಂಬಾನೇ ಆಸಕ್ತಿ ಇದೆಯಂತೆ"ನಾನು ರಾಬಿನ್ ಸ್ಮಿತ್, ಹ್ಯಾಂಪ್‌ಶೈರ್ ಸ್ಟಾರ್ ಮಾಲ್ಕಮ್ ಮಾರ್ಷಲ್ ಅವರನ್ನು ನೋಡುತ್ತಾ ಬೆಳೆದಿದ್ದೇನೆ.. ಅವರೆಲ್ಲರನ್ನೂ ವೀಕ್ಷಿಸಿರುವುದಕ್ಕೆ ನಾನು ಅದೃಷ್ಟ ಮಾಡಿರಬೇಕು" ಎಂದು ಸುನಕ್ ಹೇಳಿದರು.ಅವರು ಭಾರತೀಯ ಅಭಿಮಾನಿಗಳಂತೆ ಕ್ರಿಕೆಟ್ ಬಗ್ಗೆ ಭಾವೋದ್ರಿಕ್ತರಾಗುತ್ತಾರೆಯೇ ಎಂದು ಕೇಳಿದಾಗ, ಸುನಕ್ ಅವರು “ಈ ಕೆಲಸದಲ್ಲಿ ನಾನು ಅದನ್ನು ಕಡಿಮೆ ವ್ಯಕ್ತಪಡಿಸಬಲ್ಲೆ. ನಾನು ಈ ಕೆಲಸಕ್ಕೆ ಬರುವ ಮೊದಲು ಕ್ರಿಕೆಟ್ ಆಟದ ಬಗ್ಗೆ ತುಂಬಾನೇ ಒಲವನ್ನು ಹೊಂದಿದ್ದೆ. ನಾನು ಸಹ ಒಬ್ಬ ಕ್ರೀಡಾ ಅಭಿಮಾನಿ. ಇಂಗ್ಲೆಂಡ್ ತಂಡವು ಲಾರ್ಡ್ಸ್‌ನಲ್ಲಿ ಆಡುತ್ತಿರುವಾಗ ಮೊದಲ ವಿಕೆಟ್ ಪಡೆದಾಗ, ನಾನು ಎದ್ದು ನಿಂತು ಚೆಪ್ಪಾಳೆ ಹೊಡೆದು ಸಂಭ್ರಮಿಸಿದೆ" ಎಂದು ಅವರು ಹೇಳಿದರು.

Post a Comment