ನರೇಂದ್ರ ಮೋದಿ-ಅಜಿತ್ ಪವಾರ್
2024 ರ ಲೋಕಸಭಾ ಚುನಾವಣೆಯ ಅಂಕಿ ಅಶವನ್ನು ನೋಡಿದರೆ, ಮಹಾರಾಷ್ಟ್ರವು 48 ಸಂಸದರನ್ನು ಹೊಂದಿದೆ. ಅದರಲ್ಲಿ ಬಿಜೆಪಿ 22 ಸಂಸದರನ್ನು ಹೊಂದಿದ್ದು, ದೊಡ್ಡ ಪಕ್ಷವಾಗಿದೆ. ಇದರ ನಂತರ ಶಿವಸೇನೆ 18 ಮತ್ತು ಎನ್‌ಸಿಪಿ 4 ಸಂಸದರನ್ನು ಹೊಂದಿದೆ.ಮುಂಬೈ: ಶಿವಸೇನೆಯಲ್ಲಿನ (Shiv Sena) ಒಡಕಾಗಿ ಮತ್ತು ಮಹಾರಾಷ್ಟ್ರದಲ್ಲಿ (Maharashtra) ಎನ್‌ಡಿಎ ಸರ್ಕಾರ (NDA Government) ಸುಗಮವಾಗಿ ಸಾಗುತ್ತಿರುವ ನಡುವೆಯೇ ಭಾನುವಾರ ಎನ್‌ಸಿಪಿ ಮುಖಂಡ ಅಜಿತ್ ಪವಾರ್ (NCP Ajit Pawar) ಬಂಡಾಯ ಎದ್ದಿರುವುದು ರಾಜಕೀಯ ವಲಯದಲ್ಲಿ ಕೋಲಾಹಲ ಎಬ್ಬಿಸಿದೆ. ಅವರು ತಮ್ಮ ಚಿಕ್ಕಪ್ಪ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ 'ಎನ್‌ಸಿಪಿ' ಪೋಷಕ ಶರದ್ ಪವಾರ್ (Sharad Pawar) ವಿರುದ್ಧ ಎರಡನೇ ಬಾರಿಗೆ ಬಂಡಾಯವೆದ್ದಿದ್ದಾರೆ. ಈ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಬಹುಶಃ ಇದಕ್ಕೆ ಸುಲಭದ ಉತ್ತರವೆಂದರೆ, ಅಜಿತ್ ಪವಾರ್ ಅವರ ಈಡೇರದ ರಾಜಕೀಯ ಆಕಾಂಕ್ಷೆಗಳು, ಕನಸುಗಳು ಎನ್‌ಸಿಪಿಯಲ್ಲಿ ನಿಧಾನವಾಗಿ ಸಾಯುತ್ತಿವೆ ಎಂಬುದನ್ನು ತೋರಿಸುತ್ತಿದೆ. ಜೊತೆಗೆ ಭವಿಷ್ಯದ ರಾಜಕೀಯಕ್ಕೆ ಸಂಬಂಧಿಸಿದೆ. ಜೊತೆಗೆ ಶರದ್ ಪವಾರ್ ವಿರುದ್ಧ ಅಜಿತ್ ಪವಾರ್ ಬಂಡಾಯದ ನೇರ ಅರ್ಥವೆಂದರೆ 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election)ಭಾರತೀಯ ಜನತಾ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲ ನೀಡುವುದು ಕೂಡ ಮಹತ್ವದ ಉದ್ದೇಶವಾಗಿದೆ.ಲೋಕಸಭಾ ಲೆಕ್ಕಾಚಾರ2024 ರ ಲೋಕಸಭಾ ಚುನಾವಣೆಯ ಅಂಕಗಣಿತವನ್ನು ನೋಡಿದರೆ, ಮಹಾರಾಷ್ಟ್ರವು 48 ಸಂಸದರನ್ನು ಹೊಂದಿದೆ. ಅದರಲ್ಲಿ ಬಿಜೆಪಿ 22 ಸಂಸದರನ್ನು ಹೊಂದಿದ್ದು, ದೊಡ್ಡ ಪಕ್ಷವಾಗಿದೆ. ಇದರ ನಂತರ ಶಿವಸೇನೆ 18 ಮತ್ತು ಎನ್‌ಸಿಪಿ 4 ಸಂಸದರನ್ನು ಹೊಂದಿದೆ. ಲೋಕಸಭೆಯ ವೆಬ್‌ಸೈಟ್ ಪ್ರಕಾರ, ಎರಡು ಸ್ಥಾನಗಳು ಖಾಲಿ ಉಳಿದಿವೆ. 2019 ರ ಚುನಾವಣೆಯ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ 350 ಸ್ಥಾನಗಳನ್ನು ಗೆದ್ದು ಬಹುಮತ ಪಡೆಯಲು ಬಿಜೆಪಿ ಬಯಸಿದೆ.ಶಿವಸೇನೆಯ 18 ಸಂಸದರ ಈಗಾಗಲೇ ಇಬ್ಭಾಗವಾಗಿದ್ದಾರೆ. ಹಾಗಾಗಿ ಕೆಲವು ಕಡೆ ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಸಿಪಿ ಮುನ್ನಡೆ ಸಾಧಿಸುವ ಸಾಧ್ಯತೆಯಾಗಿದೆ. ಆದರೆ ಅಜಿತ್ ಪವಾರ್ ಅವರ ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ್ ಮತ್ತು ಧನಂಜಯ್ ಮುಂಡೆ ಅವರಂತಹ ಶಾಸಕರು ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಸೇರ್ಪಡೆಗೊಳ್ಳುವುದರೊಂದಿಗೆ ಎನ್‌ಸಿಪಿ ಕೂಡ ಇಬ್ಭಾಗವಾಗಿದೆ.ಇದನ್ನೂ ಓದಿ: Maharashtra Politics: 2 ವರ್ಷಗಳಲ್ಲಿ 2 ಪಕ್ಷಗಳಿಗೆ ಹೊಡೆತ ಕೊಟ್ಟ ಬಿಜೆಪಿ, 'ಮಹಾ' ಮೈತ್ರಿಕೂಟ ಮತ್ತಷ್ಟು ದುರ್ಬಲ!ಲೋಕಸಭೆಯಲ್ಲಿ ಲಾಭಕ್ಕಾಗಿ ಅಜಿತ್ ಆಕಾಂಕ್ಷೆಗಳನ್ನು ಈಡೇರಿಸುವ ಬಿಜೆಪಿ53 ಎನ್‌ಸಿಪಿ ಶಾಸಕರ ಪೈಕಿ 43 ಶಾಸಕರ ಬೆಂಬಲ ತನಗಿದೆ ಎಂದು ನಂಬಿರುವ ಅಜಿತ್ ಪವಾರ್ ಅವರನ್ನು ಬಿಜೆಪಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಏಕನಾಥ್ ಶಿಂಧೆ ಹಿಂದೆ ತಾವೇ ನೈಜ ಶಿವಸೇನೆಯನ್ನು ಮುನ್ನಡೆಸುತ್ತೇನೆ ಎಂದು ಹೇಳಿದಂತೆ, ಇಂದು ನೈಜ ಎನ್‌ಸಿಪಿ ತಮ್ಮದೇ ಎಂದು ಅಜಿತ್ ಹೇಳಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಅಜಿತ್ ಪವಾರ್ ಅವರ ರಾಜಕೀಯ ಆಕಾಂಕ್ಷೆಗಳನ್ನು ಈಡೇರಿಸುವ ಮೂಲಕ 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಪಡೆಯಲು ಬಯಸಿದೆ.ಬಿಜೆಪಿ ಏಕಾಂಗಿಯಾಗಿ 350 ಸ್ಥಾನಗಳನ್ನು ಗೆಲ್ಲಲಿದೆಜೂನ್ ಆರಂಭದಲ್ಲಿ ಬಿಜೆಪಿಯ ರಾಜ್ಯಸಭಾ ಸಂಸದ ಮತ್ತು ರಾಜ್ಯ ನಾಯಕ ಪ್ರಕಾಶ್ ಜಾವಡೇಕರ್, 'ಪ್ರಧಾನಿ ಮೋದಿ ಮೇಲಿನ ಜನರ ನಂಬಿಕೆಯೇ ನಮ್ಮ ದೊಡ್ಡ ಶಕ್ತಿ ಮತ್ತು ಬಿಜೆಪಿ ಸ್ವತಂತ್ರವಾಗಿ 350 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದು ನಾವು ದೃಢವಾಗಿ ನಂಬುತ್ತೇವೆ. ಮತ್ತು ನ್ಯಾಶನಲ್ ಡೆಮಾಕ್ರಟಿಕ್ ಅಲೈಯನ್ಸ್ 'ಎನ್‌ಡಿಎ' 2024 ರ ಲೋಕಸಭಾ ಚುನಾವಣೆಯಲ್ಲಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದಿದ್ದಾರೆ.ಇದನ್ನೂ ಓದಿ: Maharashtra Politics: ಎನ್‌ಸಿಪಿ ವಿರುದ್ಧ ಸಿಡಿದೆದ್ದ ಅಜಿತ್ ಪವಾರ್ ಶಿಂಧೆ ಸರ್ಕಾರಕ್ಕೆ ಸೇರ್ಪಡೆ, ಡಿಸಿಎಂ ಆಗಿ ಪ್ರಮಾಣವಚನ ಸ್ವೀಕಾರ!ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ದುರ್ಬಲಗೊಳಿಸಿದ ಬ್ರ್ಯಾಂಡ್ ಮೋದಿಕಳೆದ ವರ್ಷ ಲಾಭವನ್ನು ಲೆಕ್ಕಿಸದೇ ಮೈತ್ರಿ ಮುರಿದುಕೊಂಡು ಬಂದಿದ್ದ ಶಿಂಧೆಗೆ ಸಿಎಂ ಪಟ್ಟ ನೀಡಿದ್ದ ಬಿಜೆಪಿ, ಶಿವಸೇನೆಯನ್ನ ದುರ್ಬಲಗೊಳಿಸಿತ್ತು. ಅಲ್ಲದೆ ನೈಜ ಶಿವಸೇನೆ ಚಿಹ್ನೆಯನ್ನು ಶಿಂಧೆ ಬಳಗವೇ ಪಡೆದುಕೊಂಡಿರುವುದು ಮೈತ್ರಿಯ ಬಲವನ್ನು ಹೆಚ್ಚಿಸಿದೆ. ಇದೀಗ ಒಂದು ವರ್ಷದಲ್ಲಿ ಮತ್ತೊಂದು ಪ್ರಬಲ ಪಕ್ಷವಾದ ಎನ್‌ಸಿಪಿ ಕೂಡ ಇಬ್ಭಾಗವಾಗುತ್ತಿದೆ. ಅಜಿತ್ ಪವಾರ್ಗೆ ಶರದ್ ಪವಾರ್ಗಿಂತಲೂ ಹೆಚ್ಚಿನ ಬೆಂಬಲ ಇದೆ ಎಂದು ನಂಬಲಾಗುತ್ತಿದೆ. ಒಂದು ವೇಳೆ ಇದು ನಿಜವಾದರೆ, ಎನ್‌ಸಿಪಿ ಸಂಪೂರ್ಣ ಬೆಂಬಲ ಬಿಜೆಪಿಗೆ ಸಿಗುತ್ತದೆ. ರಾಜ್ಯ ಸರ್ಕಾರವನ್ನು ಮೈತ್ರಿಗೆ ಬಿಟ್ಟುಕೊಟ್ಟರೂ, ಕೇಂದ್ರದಲ್ಲಿ ಬಿಜೆಪಿಗೆ ಲಾಭ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.ವಿಪಕ್ಷಗಳ ಮೈತ್ರಿ ದುರ್ಬಲಅಜಿತ್ ಪವಾರ್ ಅವರ ಈ ಬಂಡಾಯ ಕೇವಲ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಲಾಭವನ್ನು ಉಂಟು ಮಾಡಿಲ್ಲ. ಬದಲಾಗಿ ಮುಂದಿನ ಲೋಕ ಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮಹಾ ಮೈತ್ರಿಕೂಟ ರಚನೆ ಮಾಡಲು ಮುಂದಾಳಾಗಿ ಓಡಾಡುತ್ತಿರುವ ಶರದ್ ಪವಾರ್ ಅವರಿಗೆ ಮತ್ತು ವಿರೋಧ ಪಕ್ಷಗಳಿಗೂ ದೊಡ್ಡ ಪೆಟ್ಟನ್ನು ನೀಡಿದೆ. ತಮ್ಮ ಪಕ್ಷವನ್ನೇ ಉಳಿಸಿಕೊಳ್ಳಲಾಗದ ಸ್ಥಿತಿಯಲ್ಲಿರುವ ಶರದ್ ಪವಾರ್ಗೆ ಬಿಜೆಪಿ ವಿರುದ್ಧ ಮೈತ್ರಿ ಕೂಟ ರಚನೆ ಮಾಡಿ ಚುನಾವಣೆ ಎದುರಿಸುವುದು ನಿಜಕ್ಕೂ ಅಸಾಧ್ಯವಾಗಲಿದೆ.

Post a Comment