Rajnath Singh: ಇದು ಮೊದಲಿನ ಭಾರತ ಅಲ್ಲ, ಬದಲಾಗಿದೆ- ನೆರೆಯ ದೇಶಗಳಿಗೆ ರಾಜನಾಥ್ ಸಿಂಗ್ ವಾರ್ನಿಂಗ್


 ರಾಜನಾಥ್​ ಸಿಂಗ್

ಯಾರಾದರೂ ಭಾರತ ದೇಶಕ್ಕೆ ಹಾನಿ ಮಾಡಲು ಪ್ರಯತ್ನಿಸಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಭಾರತದ ನೆರೆರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ.ಯಾರಾದರೂ ಭಾರತ (Inidia) ದೇಶಕ್ಕೆ ಹಾನಿ ಮಾಡಲು ಪ್ರಯತ್ನಿಸಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಶನಿವಾರ ಭಾರತದ ನೆರೆರಾಷ್ಟ್ರವಾದ ಪಾಕಿಸ್ತಾನಕ್ಕೆ (Pakistan) ಎಚ್ಚರಿಕೆ ನೀಡಿದ್ದಾರೆ. ಛತ್ತೀಸ್‌ಗಢದ ನಕ್ಸಲ್ ಪೀಡಿತ ಕಂಕೇರ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್​, ಛತ್ತೀಸ್‌ಗಢದ ಕಾಂಗ್ರೆಸ್ ಸರ್ಕಾರವು (Congress Govt) "ಸಂಪೂರ್ಣವಾಗಿ ಸಹಕರಿಸಿದ್ದರೆ" ಎಡಪಂಥೀಯ ಉಗ್ರವಾದವನ್ನು (ಎಲ್‌ಡಬ್ಲ್ಯೂಇ) ದೇಶದಿಂದ ನಿರ್ನಾಮ ಮಾಡುಬಹುದಿತ್ತು ಎಂದು ಹೇಳಿದ್ದಾರೆ. ಇದಲ್ಲದೆ ಈ ಸಂದರ್ಭಲ್ಲಿ ರಾಜ್ಯದಲ್ಲಿ ಬಲವಂತದ ಧಾರ್ಮಿಕ ಮತಾಂತರಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು.ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತಉರಿ (2016) ಮತ್ತು ಪುಲ್ವಾಮಾ (2019) ಭಯೋತ್ಪಾದಕ ದಾಳಿಯ ನಂತರ ಭಾರತದ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ ಮತ್ತು ಅದು ಇನ್ನು ಮುಂದೆಯೂ ಪ್ರಬಲವಾಗುವುದಲ್ಲದೇ ದುರ್ಬಲವಾಗಲ್ಲ ಎಂದು ಹೇಳಿದ್ದಾರೆ.“ಪಾಕಿಸ್ತಾನದ ಕೆಲವು ಭಯೋತ್ಪಾದಕರು ಭಾರತದೊಳಗೆ ನುಸುಳಿದರು ಮತ್ತು ನಮ್ಮ ಯೋಧರ ಮೇಲೆ ದಾಳಿ ಸಹ ಮಾಡಿದರು. ಈ ಸಂದರ್ಭದಲ್ಲಿ ಅನೇಕ ಯೋಧರು ಹುತಾತ್ಮರಾದರು. ಆದರೆ ನಾನು ಆಗ ಗೃಹ ಸಚಿವನಾಗಿದ್ದೆ, ಈ ಸಮಯದಲ್ಲಿ ತಕ್ಷಣ ಪ್ರಧಾನಿ ದೆಹಲಿಯಲ್ಲಿ ಸಭೆ ನಡೆಸಿ, ಕೇವಲ ಹತ್ತೇ ನಿಮಿಷಗಳಲ್ಲಿ ನಿರ್ಧಾರ ಕೈಗೊಂಡರು. ಅದೇ ರೀತಿ ನಮ್ಮ ಸೇನಾ ಯೋಧರು ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದಕರನ್ನು ಯಶಸ್ವಿಯಾಗಿ ಸದೆಬಡಿದ್ದಾರೆ” ಎಂದು ಹೇಳಿದರು.ಇದನ್ನೂ ಓದಿ: ಅಮರನಾಥ ಯಾತ್ರಾರ್ಥಿಗಳಿಗೆ ನಕಲಿ ನೋಂದಣಿ ಸ್ಲಿಪ್​ಗಳ ಮಾರಾಟ, ಆರೋಪಿಗಳು ಅಂಧರ್ರಾಜನಾಥ್ ಸಿಂಗ್​ ಅವರಿಂದ ನೆರೆರಾಷ್ಟ್ರಕ್ಕೆ ಎಚ್ಚರಿಕೆಇದಕ್ಕಾಗಿ ಯಾವುದೇ ಕಾರಣಕ್ಕೂ ಭಾರತೀಯರನ್ನು ಪ್ರಚೋದಿಸಲು ಪ್ರಯತ್ನಿಸಬೇಡಿ ಎಂದು ನಾನು ನಮ್ಮ ನೆರೆಹೊರೆಯವರಿಗೆ ಹೇಳಲು ಬಯಸುತ್ತೇನೆ. ನಾವೂ ಈಗ ಪ್ರಬಲರಾಗಿದ್ದೇವೆ, ಅಗತ್ಯ ಬಂದಾಗ ನಾವು ಗಡಿ ದಾಟಿ ಪ್ರವೇಶಿಸಿ ದಾಳಿ ಮಾಡಬಹುದು. ಈಗ ಭಾರತ ಬದಲಾಗಿದೆ,'' ಎಂದು ಸಿಂಗ್ ಎಚ್ಚರಿಕೆ ನೀಡಿದ್ದಾರೆ.ಕಾಂಗ್ರೆಸ್ ಸರಕಾರ ಸಹಕಾರ ನೀಡಿದ್ದರೆ ಎಲ್‌ಡಬ್ಲ್ಯೂಇ ನಿರ್ನಾಮ“ಛತ್ತೀಸ್‌ಗಢವು ಎಡಪಂಥೀಯ ಉಗ್ರವಾದದ ಬೆದರಿಕೆಯೊಂದಿಗೆ ದೀರ್ಘಕಾಲ ಹೋರಾಡುತ್ತಿದೆ. ಒಂಬತ್ತು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಪರಿಣಾಮಕಾರಿ ಕ್ರಮದಿಂದಾಗಿ, ಬದಲಾವಣೆಯಿಂದ ಸ್ವಲ್ಪ ಪ್ರಬಲವಾಗಿದೆ. ಎಡಪಂಥೀಯ ಉಗ್ರವಾದವನ್ನು ಈಗ ಕೇವಲ 10-12 ಜಿಲ್ಲೆಗಳಿಗೆ ಸೀಮಿತಗೊಳಿಸಲಾಗಿದೆ. ಇವುಗಳಲ್ಲಿ ಕೆಲವು ಜಿಲ್ಲೆಗಳು ಛತ್ತೀಸ್‌ಗಢದಲ್ಲಿವೆ. ಕಾಂಗ್ರೆಸ್ ಸರಕಾರ ಸಂಪೂರ್ಣ ಸಹಕಾರ ನೀಡಿದ್ದರೆ ಎಲ್‌ಡಬ್ಲ್ಯೂಇ ದೇಶದಿಂದ ನಿರ್ನಾಮವಾಗುತ್ತಿತ್ತು ಎಂದು ನಾನು ಹೇಳಬಲ್ಲೆ" ಎಂದು ಸಿಂಗ್ ಹೇಳಿದ್ದಾರೆ.ರಾಜನಾಥ್​ ಸಿಂಗ್ಹೆಚ್ಚಾಗುತ್ತಿವೆ ಧಾರ್ಮಿಕ ಮತಾಂತರಗಳುಇನ್ನು ಇದೇ ಸಮಯದಲ್ಲಿ ಭೂಪೇಶ್ ಬಘೆಲ್ ಸರ್ಕಾರವನ್ನು ಗುರಿಯಾಗಿಟ್ಟುಕೊಂಡು, ರಕ್ಷಣಾ ಸಚಿವರು ಛತ್ತೀಸ್‌ಗಢದಲ್ಲಿ ವಿಶೇಷವಾಗಿ ಬುಡಕಟ್ಟು ಪ್ರಾಬಲ್ಯದ ಬಸ್ತಾರ್ ಪ್ರದೇಶದಲ್ಲಿ ಧಾರ್ಮಿಕ ಮತಾಂತರದ ಘಟನೆಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು ಮತ್ತು ಇದು ಸ್ವೀಕಾರಾರ್ಹವಲ್ಲ ಎಂದು ಸಹ ಹೇಳಿದರು. ಬಲವಂತದ ಮತಾಂತರವನ್ನು ತಡೆಯಲು ಕಾಂಗ್ರೆಸ್ ಸರಕಾರ ಕ್ರಮಕೈಗೊಳ್ಳಬೇಕು, ಅಗತ್ಯಬಿದ್ದರೆ ಈ ವಿಷಯದಲ್ಲಿ ರಾಜ್ಯಕ್ಕೆ ಕೇಂದ್ರ ಬೆಂಬಲ ನೀಡಲಿದೆ ಎಂದು ಹೇಳಿದರು.ಮೋದಿ ಸರಕಾರ ಆದಿವಾಸಿಗಳ ಪರವಾದ ಕ್ರಮಗಳನ್ನು ಎತ್ತಿ ಹಿಡಿದ ಅವರು, ಆದಿವಾಸಿಗಳ ಕಲ್ಯಾಣಕ್ಕಾಗಿ 90 ಸಾವಿರ ಕೋಟಿ ರೂ.ಗಳ ಪ್ರತ್ಯೇಕ ಬಜೆಟ್ ರಚಿಸಿ ನವೆಂಬರ್ 15 ಅನ್ನು ಜನಜಾತಿಯ ಗೌರವ್ ದಿವಸ್ ಎಂದು ಘೋಷಿಸಿದರುಕಾಂಗ್ರೆಸ್ ಬುಡಕಟ್ಟು ಸಮುದಾಯವನ್ನು ಮರೆತು ನಿರ್ಲಕ್ಷಿಸಿದೆವರ್ಷಾಂತ್ಯದ ವೇಳೆಗೆ ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ಬುಡಕಟ್ಟು ಕಲ್ಯಾಣದ ಬಗ್ಗೆ ಮತ್ತಷ್ಟು ಮಾತನಾಡಿದ ಬಿಜೆಪಿಯ ಹಿರಿಯ ನಾಯಕ, “ಬ್ರಿಟಿಷರನ್ನು ದೇಶದಿಂದ ಓಡಿಸುವಲ್ಲಿ ಬುಡಕಟ್ಟು ಸಮಾಜವು ಸಕ್ರಿಯ ಪಾತ್ರ ವಹಿಸಿದೆ. ದೇಶ ಕಟ್ಟುವಲ್ಲಿ ಬುಡಕಟ್ಟು ಸಮುದಾಯಗಳ ಪಾತ್ರದ ಬಗ್ಗೆ ಮಾತನಾಡಿದರೆ ಕೆಲವರಿಗೆ ವಿಚಿತ್ರ ಅನಿಸುತ್ತದೆ. ಇದರರ್ಥ ಬುಡಕಟ್ಟು ಸಮುದಾಯದ ಕೊಡುಗೆಯ ಬಗ್ಗೆ ದೇಶಕ್ಕೆ ಹೇಳಲಾಗಿಲ್ಲ ಮತ್ತು ಅವರ ಬಗ್ಗೆ ಹೇಳಿದ್ದು ಕಡಿಮೆ. ಸ್ವಾತಂತ್ರ್ಯಾನಂತರ ದೇಶವನ್ನು ಹಲವು ವರ್ಷಗಳ ಕಾಲ ಆಳಿದವರು ಮತ್ತು ತಮಗೂ ತಮ್ಮ ರಾಜಕೀಯಕ್ಕೂ ಆದ್ಯತೆ ನೀಡಿದರು. ಆದರೆ ಈಗ ಕಾಂಗ್ರೆಸ್ ಬುಡಕಟ್ಟು ಸಮುದಾಯವನ್ನು ಮರೆತು ನಿರ್ಲಕ್ಷಿಸಿದೆ" ಎಂದು ಹೇಳಿದರು.

Post a Comment

Previous Post Next Post