Maharashtra Politics: 2 ವರ್ಷಗಳಲ್ಲಿ 2 ಪಕ್ಷಗಳಿಗೆ ಹೊಡೆತ ಕೊಟ್ಟ ಬಿಜೆಪಿ, 'ಮಹಾ' ಮೈತ್ರಿಕೂಟ ಮತ್ತಷ್ಟು ದುರ್ಬಲ!


 ಫಡ್ನವೀಸ್, ಅಜಿತ್ ಪವಾರ್, ಏಕನಾಥ್​ ಶಿಂಧೆ

ಭಾನುವಾರ ಅಜಿತ್​ ಪವಾರ್​ ಜೊತೆಗೆ 8 ಎನ್​ಸಿಪಿ ಮುಖಂಡರು ಮಹಾರಾಷ್ಟ್ರ ಸರ್ಕಾರಕ್ಕೆ ಸೇರಿದರು. ಪವಾರ್​ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ಬಿಜೆಪಿಯ ದೇವೇಂದ್ರ ಫಡ್ನವೀಸ್​ ಜೊತೆಗೆ ಡಿಸಿಎಂ ಹುದ್ದೆಯನ್ನು ಹಂಚಿಕೊಂಡಿದ್ದಾರೆ.ಮುಂಬೈ: ಕೇಂದ್ರ ಮಟ್ಟದಲ್ಲಿ ಪ್ರತಿಪಕ್ಷಗಳ ದೊಡ್ಡ ಮೈತ್ರಿಕೂಟವನ್ನು (Opposition Party Alliance) ರಚಿಸುವುದರಲ್ಲಿ ರಾಜಕೀಯ ತಂತ್ರಗಾರಿಕೆಯ ಹೆಗ್ಗಳಿಕೆಗೆ ಪಾತ್ರರಾಗಿರುವ ಶರದ್ ಪವಾರ್ (Sharad Pawar) ಅವರು ತಮ್ಮ ಸೋದರಳಿಯ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಟಾಪ್​ ಲೀಡರ್​ ಅಜಿತ್ ಪವಾರ್ (Ajit Pawar) ಬಂಡಾಯದಿಂದ ಭಾರೀ ಮುಖಭಂಗ ಅನುಭವಿಸಿದ್ದಾರೆ. ಈ ಮೂಲಕ ಕಳೆದ 24 ವರ್ಷಗಳಿಂದ ಕಟ್ಟಿ ಬೆಳೆಸಿದ್ದ ಎನ್​ಸಿಪಿಯಲ್ಲಿನ ಬಿರುಕು ತುಂಬಲಾರದ ನಷ್ಟ ಅನುಭವಿಸುವಂತಾಗಿದೆ. ಕಳೆದ ವರ್ಷ 40 ಶಿವಸೇನಾ (Shiva Sena) ಶಾಸಕರೊಂದಿಗೆ ಏಕನಾಥ್ ಶಿಂದೆ ಮಹಾ ವಿಕಾಸ್​ ಅಘಾಡಿ ಮೈತ್ರಿ ಕೂಟದಿಂದ ಹೊರನಡೆದ ಕೇವಲ ಒಂದು ವರ್ಷದಲ್ಲಿ ಅಜಿತ್ ಪವಾರ್ ಅವರು ತಮ್ಮ ಜೊತೆ 30ಕ್ಕೂ ಹೆಚ್ಚು ಶಾಸಕರನ್ನು ಕರೆದುಕೊಂಡು ಎನ್​ಡಿಎ ಮೈತ್ರಿ ( NDA Alliance) ಸೇರಿದ್ದಾರೆ. ಈ ಮೂಲಕ ಬಿಜೆಪಿ, ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ವಿರೋಧ ಪಕ್ಷದ ಮೈತ್ರಿಗೆ ಎರಡು ವರ್ಷಗಳಲ್ಲಿ ಎರಡು ಭಾರೀ ಹೊಡೆತ ನೀಡಿದೆ. ಅಜಿತ್​ ಪವಾರ್ ಎನ್​ಡಿಎ ಸರ್ಕಾರಕ್ಕೆ ಸೇರ್ಪಡೆ ಭಾನುವಾರ ಅಜಿತ್​ ಪವಾರ್​ ಜೊತೆಗೆ 8 ಎನ್​ಸಿಪಿ ಮುಖಂಡರು ಮಹಾರಾಷ್ಟ್ರ ಸರ್ಕಾರಕ್ಕೆ ಸೇರಿದರು. ಪವಾರ್ ಉಪ​ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ಬಿಜೆಪಿಯ ದೇವೇಂದ್ರ ಫಡ್ನವೀಸ್​ ಜೊತೆಗೆ ಡಿಸಿಎಂ ಉದ್ದೆಯನ್ನು ಹಂಚಿಕೊಂಡಿದ್ದಾರೆ.ಆಶ್ಚರ್ಯವೆಂದರೆ ಶರದ್​ ಪವಾರ್​ ಮಗಳು ಸುಪ್ರಿಯಾ ಸುಳೆ ಜೊತೆಗೆ ಇತ್ತೀಚೆಗೆ ಎನ್​ಸಿಪಿ ಕಾರ್ಯಾಧ್ಯಕ್ಷರಾಗಿ ನೇಮಕವಾಗಿದ್ದ ಪ್ರಫುಲ್ ಪಟೇಲ್ ಕೂಡ ಅಜಿತ್​ ಬಣಕ್ಕೆ ಸೇರಿಕೊಂಡಿದ್ದಾರೆ. ಇವರಿಬ್ಬರ ಜೊತೆಗೆ ಮತ್ತೊಬ್ಬ ಹಿರಿಯ ನಾಯಕ ಛಗನ್ ಭುಜ್​ಬಲ್, ದಿಲೀಪ್ ವಾಲ್ಸೇ ಪಾಟೋಲ್, ಹಸನ್​ ಮುಶ್ರಿಪ್​, ರಾಮ್​ರಾಜೆ ನಿಂಬಾಳ್ಕರ್​, ಧನಂಜಯ್​ ಮುಂಡೆ, ಅದಿತಿ ಠಾಕರೆ, ಸಂಜಯ್​ ಬಾನ್ಸೋಡೆ, ಧರ್ಮರಾವ್ ಬಾಬಾ ಅತ್ರಾಮ್, ಅನಿಲ್ ಭಾಯ್​ದಾಸ್ ಪಟೇಲ್ ಇಂದು ಶಿಂಧೆ ಸಂಪುಟ ಸೇರಿದ್ದಾರೆ.ಇದನ್ನೂ ಓದಿ: Maharashtra Politics: ಎನ್‌ಸಿಪಿ ವಿರುದ್ಧ ಸಿಡಿದೆದ್ದ ಅಜಿತ್ ಪವಾರ್ ಶಿಂಧೆ ಸರ್ಕಾರಕ್ಕೆ ಸೇರ್ಪಡೆ, ಡಿಸಿಎಂ ಆಗಿ ಪ್ರಮಾಣವಚನ ಸ್ವೀಕಾರ!ಉಲ್ಟಾ ಹೊಡೆ ಶಿಂಧೆಬಜೆಪಿ ಮುಖಂಡ ಫಡ್ನವೀಶ್ ನಿನ್ನೆಯಷ್ಟೇ ಮಹಾರಾಷ್ಟ್ರ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಹೇಳಿದ್ದರು. ಏಕನಾಥ್ ಶಿಂಧೆ ಇತ್ತಿಚೆಗೆ ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಅವರು ಕಳೆದ ಏಪ್ರಿಲ್​ನಲ್ಲಿ ಅಜಿತ್ ಪವಾರ್ ಎನ್​ಸಿಪಿ ಶಾಸಕರೊಂದಿಗೆ ಎನ್​ಡಿಎ ಸೇರಿಕೊಂಡರೆ ಸರ್ಕಾರದಿಂದ ಹೊರ ನಡೆಯುವುದಾಗಿ ಬಿಜೆಪಿಗೆ ಬೆದರಿಕೆ ಹಾಕಿದ್ದರು. ಆದರೆ ಇದೀಗ ಉಲ್ಟಾ ಹೊಡೆದಿದ್ದಾರೆ.ತ್ರಿಬಲ್ ಇಂಜಿನ್ ಸರ್ಕಾರ" ಈಗ ನಮಗೆ ಒಬ್ಬ ಮುಖ್ಯಮಂತ್ರಿ ಮತ್ತು ಇಬ್ಬರು ಉಪಮುಖ್ಯಮಂತ್ರಿಗಳಿದ್ದಾರೆ. ನಮ್ಮ ಡಬಲ್ ಇಂಜಿನ್ ಸರ್ಕಾರ ಈಗ ಟ್ರಿಪಲ್ ಇಂಜಿನ್ ಆಗಿ ಮಾರ್ಪಟ್ಟಿದೆ. ಮಹಾರಾಷ್ಟ್ರದ ಅಭಿವೃದ್ಧಿಗಾಗಿ, ನಾನು ಅಜಿತ್ ಪವಾರ್ ಮತ್ತು ಅವರ ನಾಯಕರನ್ನು ಮೈತ್ರಿಗೆ ಸ್ವಾಗತಿಸುತ್ತೇನೆ. ಅಜಿತ್ ಪವಾರ್ ಅವರ ಅನುಭವವು ರಾಜ್ಯದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ" ಎಂದು ಏಕನಾಥ್ ಶಿಂಧೆ ಪವಾರ ಪ್ರಮಾಣವಚನದ ಬಳಿಕ ಹೇಳಿದರು.ಮಹಾ ವಿಕಾಸ್ ಅಘಾಡಿಗೆ ಡಬಲ್ ಶಾಕ್ ಕೊಟ್ಟ ಬಿಜೆಪಿಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಶಾಸಕರನ್ನು ಪಡೆದರೂ ಬಿಜೆಪಿ ಸರ್ಕಾರವನ್ನು ರಚಿಸುವಷ್ಟು ಬಹುಮತ ಪಡೆದಿರಲಿಲ್ಲ. ದಶಕಗಳ ಕಾಲ ಬಿಜೆಪಿ ಜೊತೆಗಿದ್ದ ಶಿವಸೇನೆ ಮೈತ್ರಿ ಮುರಿದುಕೊಂಡು ಹೋಗಿದ್ದರಿಂದ ಸರ್ಕಾರ ರಚಿಸುವ ಅವಕಾಶವನ್ನು ಬಿಜೆಪಿ ಕಳೆದುಕೊಂಡಿತ್ತು. ಕಾಂಗ್ರೆಸ್​, ಎನ್​ಸಿಪಿ ಜೊತೆ ಸೇರಿದ ಶಿವಸೇನಾ ಲೀಡರ್ ಉದ್ಧವ್ ಠಾಕ್ರೆ ಮಹಾ ವಿಕಾಸ್ ಅಘಾಡಿ ಮೈತ್ರಿ ಹೆಸರಲ್ಲಿ ಸರ್ಕಾರ ರಚಿಸಿ ಸಿಎಂ ಆಗಿದ್ದರು.ಆದರೆ ಬಿಜೆಪಿ ಏಕನಾಥ್​ ಶಿಂಧೆಗೆ ಸಿಎಂ ಪಟ್ಟದ ಆಫರ್ ನೀಡುವುದರೊಂದಿಗೆ ಮೊದಲು ಶಿವಸೇನೆ ಇಬ್ಭಾಗವಾಗುವಂತೆ ಮಾಡಿತ್ತು. ನಂತರ ಹೊಸ ಸರ್ಕಾರ ರಚಿಸಿದ್ದ ಎನ್​ಡಿಎ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಎಂವಿಎ ಮೈತ್ರಿಯನ್ನು ದುರ್ಬಲಗೊಳಿಸಲು ಬಯಸಿತ್ತು. ಆದರೆ ಪ್ರಬಲ ನಾಯಕ ಶರದ್​ ಪವಾರ್​ ಎಲ್ಲಾ ವಿಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದರಿಂದ ಇದು ಶಿಂಧೆ ಸರ್ಕಾರಕ್ಕೆ ಅಸಾಧ್ಯವಾಗಿತ್ತು. ಆದರೆ ಅಜಿತ್​ ಪವಾರ್​ ಬಂಡಾಯದೊಂದಿಗೆ ಎಂವಿಎ ಮೈತ್ರಿಗಷ್ಟೇ ಅಲ್ಲದೆ ಎನ್​ಸಿಪಿಗೂ ದೊಡ್ಡ ಆಘಾತ ನೀಡಿದೆ.ಇದನ್ನೂ ಓದಿ: Explained: NCPಗೆ ಇಬ್ಬರು ಕಾರ್ಯಾಧ್ಯಕ್ಷರು, ಈ ನಡೆ ಹಿಂದಿನ ರಹಸ್ಯವೇನು? ಇಲ್ಲಿದೆ ನೋಡಿ ಪವಾರ್​ ಮಾಸ್ಟರ್​ ಪ್ಲಾನ್​!ಅಜಿತ್​ಗೆ 40 ಶಾಸಕರ ಬೆಂಬಲರಾಜ್ಯ ವಿಧಾನ ಸಭೆಯಲ್ಲಿ ಎನ್‌ಸಿಪಿಯ ಒಟ್ಟು 53 ಶಾಸಕರ ಪೈಕಿ 40ಕ್ಕೂ ಹೆಚ್ಚು ಶಾಸಕರ ಬೆಂಬಲವನ್ನು ಬಂಡಾಯ ನಾಯಕ ಅಜಿತ್ ಪವಾರ್ ಹೊಂದಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಪಕ್ಷಾಂತರ ವಿರೋಧಿ ಕಾನೂನಿನ ನಿಬಂಧನೆಗಳಿಂದ ತಪ್ಪಿಸಿಕೊಳ್ಳಲು ಅಜಿತ್ ಪವಾರ್ 36 ಕ್ಕೂ ಹೆಚ್ಚು ಶಾಸಕರನ್ನು ಹೊಂದಿರಬೇಕು.ಅನರ್ಹತೆ ಭೀತಿಸಂವಿಧಾನದ 10ನೇ ಶೆಡ್ಯೂಲ್ ಅಡಿಯಲ್ಲಿ ಎಲ್ಲಾ ಬಂಡಾಯ ಶಾಸಕರ ಅನರ್ಹತೆಗೆ ಎನ್‌ಸಿಪಿ ಮುಂದಾಗುವ ಸಾಧ್ಯತೆ ಇದೆ. ಇತ್ತೀಚಿನ ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ತೀರ್ಪಿನ ಪ್ರಕಾರ, ಮೂಲ ಪಕ್ಷವು ಗರಿಷ್ಠ ಬೆಂಬಲವನ್ನು ಹೊಂದಿರುವುದನ್ನುಭಾರತದ ಚುನಾವಣಾ ಆಯೋಗದ ಮುಂದೆ ಸಾಬೀತು ಪಡಿಸಿ, ತಮ್ಮದು ಒರಿಜಿನಲ್​ NCP ಎಂದು ಸಾಬೀತುಪಡಿಸಬೇಕು. ಅಲ್ಲಿಯವರೆಗೆ, ಅವರು ಮತ್ತು ಅವರ ಬೆಂಬಲಿಗ ಶಾಸಕರು ಅನರ್ಹತೆಯನ್ನು ಎದುರಿಸಬೇಕಾಗುತ್ತದೆ.ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಅಜಿತ್ ಪವಾರ್​, ತಮಗೆ 40 ಶಾಸಕರ ಬೆಂಬಲವಿದ್ದು, ಮುಂದಿನ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಎನ್​ಸಿಪಿ ಪಕ್ಷ ಮತ್ತು ಚಿಹ್ನೆಯಲ್ಲೇ ಸ್ಪರ್ಧಸಲು ಹೋರಾಡುತ್ತೇವೆ ಎಂದು ಹೇಳಿದ್ದಾರೆ. ಎಲ್ಲಾ ಎನ್​ಸಿಪಿ ಸದಸ್ಯರು ನಮ್ಮೊಂದಿಗಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ವಿರೋಧ ಪಕ್ಷದಲ್ಲಿ ಕೆಲಸ ಮಾಡುತ್ತಿರುವ ನಾವು ಸಮಸ್ಯೆಗಳನ್ನು ಹತ್ತಿರದಿಂದ ನೋಡಿದ್ದೇವೆ. ಈಗ ಸಂಪುಟ ಸಭೆಯಲ್ಲಿ ಆ ವಿಷಯಗಳನ್ನು ಪ್ರಸ್ತಾಪಿಸುತ್ತೇವೆ. ನಾವು ಆ ಸಮಸ್ಯೆಯನ್ನು ಸರ್ಕಾರದ ಮೂಲಕ ನಿಭಾಯಿಸುತ್ತೇವೆ.ಒಟ್ಟಿನಲ್ಲಿ ಗರಿಷ್ಠ ಸ್ಥಾನ ಪಡೆದರೂ ಮ್ಯಾಜಿಕ್ ನಂಬರ್​ ತಲುಪಲಾಗದೇ ಸರ್ಕಾರ ರಚಿಸಲು ವಿಫಲವಾಗಿದ್ದ ಬಿಜೆಪಿ ಸತತ ಎರಡು ವರ್ಷಗಳಲ್ಲಿ ಮೈತ್ರಿಯ ಪ್ರಬಲ ಎರಡು ಒಕ್ಕೂಟವನ್ನೇ ದುರ್ಬಲಗೊಳಿಸುವಲ್ಲಿ ಸಫಲವಾಗಿದೆ. ಈ ಮೂಲಕ ಲೋಕಸಭೆ ಚುನಾವಣೆಗೂ ಮುನ್ನ ವಿಪಕ್ಷಗಳನ್ನು ಒಂದುಗೂಡಿಸಿ ಬಿಜೆಪಿಗೆ ಶಾಕ್​ ಕೊಡಲು ಹೊರಟಿದ್ದ ಶರದ್​ ಪವಾರ್​ಗೆ ಸ್ವಪಕ್ಷದಲ್ಲಿನ ಬಿಕ್ಕಟ್ಟು ದೊಡ್ಡ ಆಘಾತವನ್ನೇ ತಂದಿದೆ.

Post a Comment

Previous Post Next Post