ಸಿಎಂ ಸಿದ್ದರಾಮಯ್ಯ/ ಡಿಸಿಎಂ ಡಿಕೆ ಶಿವಕುಮಾರ್
ನಮಗೆ ಜಗಳ ಆಡಲು ಇಷ್ಟವಿಲ್ಲ. ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಕೋಲಾರ, ತುಮಕೂರು ಕಡೆಗಿನ ನೀರಿನ ವಿಚಾರವಾಗಿ ನೋಟಿಫಿಕೇಶನ್ ಮಾಡಬೇಕು ಎಂದಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.ಬೆಂಗಳೂರು: ತಮಿಳುನಾಡಿಗೆ (Tamil Nadu) ನಿಗದಿಯಂತೆ ಕಾವೇರಿ ನೀರು (Cauvery Water) ಬಿಡದ ವಿಚಾರಕ್ಕೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯೆ ನೀಡಿದ್ದು, ನಮಗೆ ಜಗಳ ಆಡಲು ಇಷ್ಟವಿಲ್ಲ, ಕುಳಿತು ಬಗೆಹರಿಸಿಕೊಳ್ಳೋಣ ಅಂತಾ ಕೇಂದ್ರ ಬಿಜೆಪಿ ಸರ್ಕಾರದ (BJP Govt) ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಏಕರೂಪ ನಾಗರೀಕ ಕಾಯಿದೆ (Uniform Civil Code) ಜಾರಿ ವಿಚಾರ ಕುರಿತು ಡಿಕೆ ಮಾತನಾಡಿದ್ದು, ನಮ್ಮ ರಾಷ್ಟ್ರೀಯ ನಾಯಕರು ನಿರ್ಧಾರ ತಿಳಿಸುತ್ತಾರೆ. ಈಗಲೂ ನಾವೆಲ್ಲಾ ಬದುಕುತ್ತಿದ್ದೇವೆ, ನಮ್ಮ ಪಾರ್ಟಿ ನಿರ್ಧಾರ ಹೇಳುತ್ತೆ ಅಂದರು.ಕೆ. ಕೆ ಗೆಸ್ಟ್ ಹೌಸ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನಮಗೆ ಜಗಳ ಆಡಲು ಇಷ್ಟವಿಲ್ಲ. ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಕೋಲಾರ, ತುಮಕೂರು ಕಡೆಗಿನ ನೀರಿನ ವಿಚಾರವಾಗಿ ನೋಟಿಫಿಕೇಶನ್ ಮಾಡಬೇಕು ಎಂದಿದ್ದಾರೆ.ಇದನ್ನೂ ಓದಿ: Karnataka Rains: ಕರಾವಳಿ ಜಿಲ್ಲೆಗಳಿಗಷ್ಟೇ ಸೀಮಿತವಾದ ಮುಂಗಾರು; ರಾಜ್ಯದ 24 ಜಿಲ್ಲೆಗಳಲ್ಲಿ ನೀರಿಲ್ಲದೇ ಬದುಕು ಭೀಕರ!ವಾಸ್ತವಾಂಶ ಅವರಿಗೆ ಗೊತ್ತಿಲ್ಲ ಎಂದು ಕಾಣಿಸುತ್ತದೆ, ಯಾವ ನೀರು ಅಂತ. ಬೇರೆ ಯಾವ ವಿಚಾರಕ್ಕೂ ನಾವು ಯುದ್ಧ ಮಾಡೋಕೆ ಇಷ್ಟವಿಲ್ಲ. ಅವರೆಲ್ಲ ನಮ್ಮ ಬ್ರದರ್ಸ್, ಅಲ್ಲಿಯವರೂ ಇಲ್ಲಿ ಕೆಲಸ ಮಾಡ್ತಾರೆ. ಇಲ್ಲಿಯವರೂ ಅಲ್ಲಿ ಕೆಲಸ ಮಾಡ್ತಾರೆ. ಕುಳಿತು ಬಗೆಹರಿಸಿಕೊಳ್ಳೋಣ ಎಂಬ ಆಸೆ ನಮ್ಮದು ಅಷ್ಟೇ ಎಂದು ಹೇಳಿದರು.ನಮಗೆ ಖಾಯಂ ಪರಿಹಾರ ಬೇಕುಇದೇ ವೇಳೆ ಅನ್ನಭಾಗ್ಯ ಯೋಜನೆ ಜಾರಿ ವಿಚಾರದಲ್ಲಿ ಸಚಿವ ಕೆಎಚ್ ಮುನಿಯಪ್ಪ ವಿಫಲರಾದರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಸಿಎಂ ಹಾಗೂ ಮುನಿಯಪ್ಪ ಅವರು ಪ್ರಯತ್ನ ಮಾಡುತ್ತಿದ್ದಾರೆ. ಎರಡು ತಿಂಗಳು, ಆರು ತಿಂಗಳು ಕೊಡಲು ಪಕ್ಕದ ರಾಜ್ಯದವರು ಕೊಡಲು ಸಿದ್ದರಾಗಿದ್ದರು. ಮಧ್ಯದಲ್ಲಿ ನಿಲ್ಲಿಸಬಾರದು ಎಂದು ಖಾಯಂ ಪರಿಹಾರ ಬೇಕು ನಮಗೆ, ಬಿಜೆಪಿಯವರು ಕೊಟ್ಟ ಸಲಹೆಯನ್ನು ತಲೆಯಲ್ಲಿಟ್ಟುಕೊಂಡೆ ಈ ತೀರ್ಮಾನ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

Post a Comment