ಕಾಲ ಕೆಟ್ಟೋಯ್ತು ಕಣ್ರಿ! ಯಾರು ಒಳ್ಳೆಯವರು, ಯಾರು ಕೆಟ್ಟವರು ಅಂತಾ ಹೇಳೋದೇ ಕಷ್ಟ.ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಬಾಡಿಗೆ ಮನೆ ಮಾಲೀಕರು ಎಷ್ಟು ಹುಷಾರಾಗಿದ್ದರು ಸಾಲಲ್ಲ. ಪೂರ್ವಪರ ವಿಚಾರಿಸದೆ ಬಾಡಿಗೆ ಕೊಟ್ಟರೆ ಯಾವಾಗ, ಯಾರು ಏನು ಮಾಡುತ್ತಾರೋ ಹೇಳೋದಕ್ಕಾಗಲ್ಲ. 4 ತಿಂಗಳು ಬಾಡಿಗೆಗಿದ್ದ ಜೋಡಿಯೊಂದು ಲಕ್ಷ ಲಕ್ಷ ಚಿನ್ನ ದೋಚಿದೆ.ಮಳ್ಳಿಯಂಗೆ ಮೆಲ್ಲಗೆ ಗೇಟ್ ಕ್ಲೋಸ್ ಮಾಡಿ ಹೋಗ್ತಿದ್ದಾಳಲ್ಲಾ ಇವ್ಳು ಅಂತಿಂತಾ ಐನಾತಿ ಅಲ್ಲ. ಬಾಡಿಗೆಗೆ ಇದ್ದ ಮನೆಯಲ್ಲೇ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಎಗರಿಸಿದ್ದಾಳೆ. ಹುಡುಗನಿಗಾಗಿ ಕಂಡೋರ ಮನೆಗೆ ಕನ್ನ ಹಾಕಿದವಳು ಈಗ ಕಂಬಿಹಿಂದೆ ಬಿದ್ದಿದ್ದಾಳೆ.ಕಾಲ ಕೆಟ್ಟೋಯ್ತು ಕಣ್ರಿ! ಯಾರು ಒಳ್ಳೆಯವರು, ಯಾರು ಕೆಟ್ಟವರು ಅಂತಾ ಹೇಳೋದೇ ಕಷ್ಟ. ಈಕೆ ಹೆಸರು ನಿಖಿತಾ, ವಯಸ್ಸು ಇನ್ನೂ ಬರೀ 20. ಇವರ ಹೆಸರು ಸುಮಂತ್. ಮೂಲತಃ ಶಿವಮೊಗ್ಗದವರು. 4 ತಿಂಗಳಿಂದ ಸುಬ್ರಮಣ್ಯಪುರದ ಎಜಿಎಸ್ ಲೇಔಟ್ನಲ್ಲಿ ಬಾಡಿಗೆಗಿದ್ದರುಲಿವಿಂಗ್ ಟುಗೆದರ್ನಲ್ಲಿದ್ದ ಈ ಜೋಡಿ ಒಂದು ತಿಂಗಳ ಹಿಂದೆ ರೂಂ ಖಾಲಿ ಮಾಡಿತ್ತು. ರೂಂ ಖಾಲಿ ಮಾಡಿ ಹೋದವರು, ಎಲ್ಲೋ ತಮ್ಮ ಪಾಡಿಗಿದ್ದಿದರೆ ಇವತ್ತು ಸುದ್ದಿನೇ ಆಗ್ತಿರಲಿಲ್ಲ.ಆರೋಪಿ ಸುಮಂತ್ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದನಂತೆ. ಈತನ ಸಾಲ ತೀರಿಸೋದಕ್ಕೆ ಈಕೆ ಕಳ್ಳತನಕ್ಕಿಳಿದಿದ್ದಾಳೆ. ಬಾಡಿಗೆಗಿದ್ದ ಮನೆಯಲ್ಲಿ ಏನೆಲ್ಲಾ ಇದೆ ಅನ್ನೋದನ್ನ ಮೊದಲೇ ತಿಳ್ಕೊಂಡಿದ್ದಳು. ಅದರಲ್ಲೂ ಬೀರು ಕೆಳಗೆ ಚಿನ್ನ ಇಟ್ಟಿದ್ದಾರೆ ಅನ್ನೋದು ಈಕೆಗೆ ಗೊತ್ತಿತ್ತು.ಅಷ್ಟೇ ಅಲ್ಲ ಬೆಳ್ಳಂಬೆಳಗ್ಗೆ ಓನರ್ ಜಿಮ್ಗೆ ಹೋದ ಮೇಲೆ ಡೋರ್ ಲಾಕ್ ಮಾಡಲ್ಲ ಅನ್ನೋದು ಈಕೆಗೆ ಗೊತ್ತಿತ್ತು. ಹೀಗಾಗಿಯೇ ಮಧ್ಯರಾತ್ರಿಯಿಂದ ಕಾದು ಕುಳಿತವಳು ನಾಲ್ಕು ಲಕ್ಷ ಮೌಲ್ಯದ ಚಿನ್ನ ಎಗರಿಸಿದ್ದಾಳೆ.ಚಿನ್ನಾ ಎತ್ಕೊಂಡು ಹೋಗಿ ಮೂರು ದಿನ ಆದ ಮೇಲೆ ಕಳ್ಳತನ ಆಗಿದ್ದು ಗೊತ್ತಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಕಳ್ಳಿಯ ಕೈಚಳಕ ಗೊತ್ತಾಗಿದೆ. ಫೀಲ್ಡ್ಗೆ ಇಳಿದ ಸುಬ್ರಹ್ಮಣ್ಯಪುರ ಪೊಲೀಸರು, ಶಿವಮೊಗ್ಗದಲ್ಲಿ ಲಾಕ್ ಮಾಡಿದ್ದಾರೆ. ಹುಡುಗನಿಗಾಗಿ ಚಿನ್ನ ಎಗರಿಸಿದವಳು ಈಗ ಮುದ್ದೆ ಮುರೀತಿದ್ದಾಳೆ. (ವರದಿ:

Post a Comment