ರೈಲು ಅಪಘಾತ
ಸಾಮಾಜಿಕ ಜಾಲತಾಣದಲ್ಲಿ (Social Media) ದುರಂತ ನಡೆದ ಸ್ಥಳದಲ್ಲಿರುವ ಮಸೀದಿ (Mosque) ಫೋಟೋವನ್ನು ಹಂಚಿಕೊಂಡು, ಅಪಘಾತಕ್ಕೆ ಕಾರಣವಿರಬಹುದಾ? ಎಂದು ಪೋಸ್ಟ್ ಮಾಡುತ್ತಿದ್ದು, ಈ ಪೋಸ್ಟ್‌ಗಳಿಗೆ ಸಾಕಷ್ಟು ಲೈಕ್‌ಗಳು ಮತ್ತು ಶೇರ್‌ಗಳಾಗಿ ಬಂದು ವೈರಲ್ ಆಗುತ್ತಿದೆ.
ಭುವನೇಶ್ವರ: ಒಡಿಶಾದ ಬಾಲಸೋರ್ (Balasore accident) ಜಿಲ್ಲೆಯಲ್ಲಿ ಮೂರು ರೈಲುಗಳು ಡಿಕ್ಕಿ (Train accident) ಹೊಡೆದು ಸುಮಾರು 290ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಶುಕ್ರವಾರ ನಡೆದಿತ್ತು. ಆದರೆ ಕೆಲವು ವಿಕೃತ ಮನಸ್ಸುಳ್ಳವರು ಈ ದುರಂತಕ್ಕೂ ಧಾರ್ಮಿಕ ಬಣ್ಣ (Communal Colour) ಬಳಿಯಲು ಯತ್ನಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ದುರಂತ ನಡೆದ ಸ್ಥಳದಲ್ಲಿರುವ ಮಸೀದಿ (Mosque) ಫೋಟೋವನ್ನು ಹಂಚಿಕೊಂಡು, ಅಪಘಾತಕ್ಕೆ ಕಾರಣವಿರಬಹುದಾ? ಎಂದು ಪೋಸ್ಟ್ ಮಾಡುತ್ತಿದ್ದು, ಈ ಪೋಸ್ಟ್‌ಗಳಿಗೆ ಸಾಕಷ್ಟು ಲೈಕ್‌ಗಳು ಮತ್ತು ಶೇರ್‌ಗಳಾಗಿ ಬಂದು ವೈರಲ್ ಆಗುತ್ತಿದೆ. ಈ ಬೆಳವಣಿಗೆಗೆ ಅಸಮಾಧಾನ ವ್ಯಕ್ತಪಡಿಸಿರುವ ಒಡಿಶಾ ಪೊಲೀಸರು ಅಪಘಾತಕ್ಕೆ ಕೋಮು ಬಣ್ಣ ಪ್ರಯತ್ನಿಸಲು ಯತ್ನಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಕಾನೂನಿನಾತ್ಮಕ ಕ್ರಮದ ಎಚ್ಚರಿಕೆಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿಒಡಿಶಾ ರೈಲು ಅಪಘಾತದ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ರಾಜ್ಯದ ಪೊಲೀಸರು ಪ್ರತಿಕ್ರಿಯಿಸಿದ್ದು, ಅದೆಲ್ಲ ಸುಳ್ಳು ಪ್ರಚಾರ ಎಂದು ತಿಳಿಸಿದ್ದಾರೆ. ಇನ್ನು ಘಟನೆ ನಡೆದ ಸ್ಥಳದ ಪಕ್ಕದಲ್ಲಿರುವ ಕಟ್ಟಡವು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿರುವಂತೆ ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿದ್ದಲ್ಲ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: Odisha Train Accident: ಭೀಕರ ದುರಂತದ ತನಿಖೆ ಹೊಣೆ ಸಿಬಿಐ ಹೆಗಲಿಗೆ, ರೈಲ್ವೆ ಮಂಡಳಿಯಿಂದ ಶಿಫಾರಸು
ಈ ಘಟನೆಯ ಕುರಿತು ಯಾರಾದರೂ ಕೋಮು ಬಣ್ಣ ಕಟ್ಟಿ ಪೋಸ್ಟ್‌ಗಳನ್ನು ಮಾಡಿದರೆ ಅದನ್ನು ಸಹಿಸುವುದಿಲ್ಲ ಎಂದು ಒಡಿಶಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸಮಾಜದಲ್ಲಿ ಧಾರ್ಮಿಕ ಸಾಮರಸ್ಯ ಕದಡುವ ರೀತಿಯಲ್ಲಿ ಪೋಸ್ಟ್ ಹಾಕುವ ಹಾಗೂ ನಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಇಂತಹ ದುರಂತದ ಬಗ್ಗೆ ಸುಳ್ಳು ಮತ್ತು ಕೆಟ್ಟ ಪ್ರಚಾರ ಮಾಡುವ ಪೋಸ್ಟ್‌ಗಳನ್ನು ಶೇರ್ ಮಾಡದಂತೆ ಜನರಿಗೂ ಮನವಿ ಮಾಡಿ ಒಡಿಶಾ ಪೊಲೀಸರು ಸರಣಿ ಟ್ವೀಟ್ ಮಾಡಿದ್ದಾರೆ.ಮಸೀದಿ ಅಲ್ಲ, ಇಸ್ಕಾನ್ ದೇವಾಲಯ
ರೈಲು ದುರಂತದ ಸ್ಥಳದಲ್ಲಿ ಇರುವ ಕಟ್ಟಡ ಮಸೀದಿ, ಅದರಲ್ಲೂ ಘಟನೆ ನಡೆದ ದಿನ ಶುಕ್ರವಾರ ಎಂದು ಕೋಮುದ್ವೇಷದ ಪೋಸ್ಟ್ಗಳು ಹರಿದಾಡಿದ್ದವು. ಆದರೆ ಫೋಟೋದಲ್ಲಿ ಕಂಡು ಬಂದಿರುವ ಕಟ್ಟೆಡ ಮಸೀದಿಯೇ ಅಲ್ಲ, ಅದು ಇಸ್ಕಾನ್ ದೇವಾಲಯ ಎಂದು ಎಆರ್ಜೆ ಎಂಬ ಹೆಸರಿನ ಟ್ವಿಟರ್ ಬಳಕೆದಾರರೊಬ್ಬರು ವಿಡಿಯೋ ಸಮೇತ ಪೋಸ್ಟ್ ಮಾಡಿದ್ದಾರೆ.
290 ಸಾವು, 1000ಕ್ಕೂ ಹೆಚ್ಚು ಮಂದಿಗೆ ಗಾಯ
ಒಡಿಶಾದಲ್ಲಿ ಕೋರಮಂಡಲ್ ಎಕ್ಸ್‌ಪ್ರೆಸ್, ಗೂಡ್ಸ್ ರೈಲು ಮತ್ತು ಹೌರಾ-ಬೆಂಗಳೂರು ಎಕ್ಸ್‌ಪ್ರೆಸ್ ನಡುವೆ ಡಿಕ್ಕಿಯಾಗಿ ಸುಮಾರು 290 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸಚಿವರ ಹೇಳಿಕೆಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬಹಿರಂಗಪಡಿಸಿದ್ದಾರೆ. 1000ಕ್ಕೂ ಜನರು ಗಾಯಗೊಂಡಿದ್ದಾರೆ. ಇನ್ನು ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನು ಕೆಲವರು ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Odisha Train Accident: ರೈಲು ದುರಂತಕ್ಕೆ ಅಸಲಿ ಕಾರಣವೇನು? ಕೇಂದ್ರ ರೈಲ್ವೆ ಸಚಿವರು ಹೇಳಿದ್ದಾರೆ ಕೇಳಿ
ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಧೋಷ ಕಾರಣ
ಇನ್ನೈ ರೈಲ್ವೆ ಸಚಿವರ ಪ್ರಕಾರ, ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆಯಲ್ಲಿ ಬದಲಾವಣೆಯಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಘಟನೆಯ ತನಿಖೆ ಮುಂದುವರಿದಿದ್ದು, ಪೂರ್ಣಗೊಂಡ ನಂತರ ಸಂಪೂರ್ಣ ವಿವರ ನೀಡಲಾಗುವುದು ಎಂದು ತಿಳಿಸಿದ್ದಾರೆ.

Post a Comment