ರೈಲ್ವೇ ಸಚಿವ ಅಶ್ವಿನಿ ವೈಷ್ಣವ್
ದೇಶದ ಘನಘೋರ ರೈಲು ದುರಂತ ಇದಾಗಿದ್ದು, 290ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದರು. ಸಾವಿರಾರು ಮಂದಿ ಗಾಯಗೊಂಡಿದ್ದರೆ, ಇದರಲ್ಲಿ 50 ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರವಾಗಿದೆ.
ನವದೆಹಲಿ: ಒಡಿಶಾದ ಬಾಲಸೋರ್ (Odisha Balsore) ರೈಲು ಅಪಘಾತ (Train Accident) ಪ್ರಕರಣವನ್ನು ಸಿಬಿಐ ತನಿಖೆಗೆ (CBI Probe) ರೈಲ್ವೆ ಮಂಡಳಿ (Indian Railway) ಶಿಫಾರಸು ಮಾಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini vaishnaw) ಹೇಳಿದ್ದಾರೆ. ದೇಶದ ಘನಘೋರ ರೈಲು ದುರಂತ ಇದಾಗಿದ್ದು, 290ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದರು. ಸಾವಿರಾರು ಮಂದಿ ಗಾಯಗೊಂಡಿದ್ದರೆ, ಇದರಲ್ಲಿ 50 ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರವಾಗಿದೆ. ಇನ್ನು ರೈಲ್ವೆ ಮಂಡಳಿಯು ಬಾಲಸೋರ್‌ನ ಎರಡು ರೈಲು ಮಾರ್ಗಗಳನ್ನು ಭಾನುವಾರ ರಾತ್ರಿ ಪುನಃಸ್ಥಾಪಿಸಲಾಗುವುದು ಎಂದು ಸಚಿವರು ಬಹಿರಂಗಪಡಿಸಿದ್ದಾರೆ.
ಮೂರು ರೈಲುಗಳ ನಡುವೆ ಅಪಘಾತಗಳು ಸಂಭವಿಸಿದ ಪ್ರದೇಶದಲ್ಲಿ ಹಳಿಗಳ ಮರುಸ್ಥಾಪನೆ ಕಾರ್ಯ ವೇಗವಾಗಿ ನಡೆಯುತ್ತಿದೆ ಎಂದು ಸಚಿವರು ಸರಣಿ ಟ್ವೀಟ್‌ಗಳಲ್ಲಿ ಉಲ್ಲೇಖಿಸಿದ್ದಾರೆ. ಬಾಲಸೋರ್‌ನ ಅಪಘಾತ ಸ್ಥಳದಲ್ಲಿ ಓವರ್‌ಹೆಡ್ ವಿದ್ಯುದ್ದೀಕರಣ ಕಾರ್ಯ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Odisha Train Accident: ರೈಲು ದುರಂತಕ್ಕೆ ಅಸಲಿ ಕಾರಣವೇನು? ಕೇಂದ್ರ ರೈಲ್ವೆ ಸಚಿವರು ಹೇಳಿದ್ದಾರೆ ಕೇಳಿ
ಶವವನ್ನು ಪತ್ತೆ ಹಚ್ಚಲು ಮೂರು ವೆಬ್ಸೈಟ್
ರೈಲು ದುರಂತದಲ್ಲಿ ಸಾವನ್ನಪ್ಪಿದ ಸುಮಾರು 290ಕ್ಕೂ ಜನರು ವಿವಿಧ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ಹಾಗಾಗಿ ಮೃತರನ್ನು ಗುರುತಿಸುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಮೃತರ ಫೋಟೋಗಳನ್ನು ಮೂರು ವೆಬ್‌ಸೈಟ್‌ಗಳಲ್ಲಿ ಅಪ್ಲೋಡ್ ಮಾಡಲಾಗಿದೆ. ರೈಲು ಪ್ರಯಾಣಿಕರ ವಿವರಗಳನ್ನು ಮೃತರ ಛಾಯಾಚಿತ್ರಗಳೊಂದಿಗೆ Special Relief Commissioner (SRC), Bhubaneswar Municipal Corporation ಮತ್ತು Odisha State Disaster Management Authority ವೆಬ್‌ಸೈಟ್‌ಗಳಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ಒಡಿಶಾ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
1929 ಸಹಾಯವಾಣಿಗೆ ಕರೆ ಮಾಡಲು ಸೂಚನೆ
ಆದರೆ ಸತ್ತವರ ಚಿತ್ರಗಳು ಭಯಾನಕವಾಗಿವೆ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ ಒಡಿಶಾ ಪರಿಹಾರ ಆಯೋಗದ ಲಿಖಿತ ಅನುಮತಿ ಇಲ್ಲದೆ ಯಾರೂ ಈ ಫೋಟೋಗಳನ್ನು ಪ್ರಕಟಿಸಬಾರದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರನ್ನು ಗುರುತಿಸಿದ ಸಂತ್ರಸ್ತರ ಕುಟುಂಬಗಳು 1929 ಸಹಾಯವಾಣಿಗೆ ಕರೆ ಮಾಡಲು ತಿಳಿಸಲಾಗಿದೆ.
ಇದನ್ನೂ ಓದಿ: Travel Insurance: ಕೇವಲ 35 ಪೈಸೆಯಲ್ಲಿ 10 ಲಕ್ಷ ರೈಲ್ವೆ ಟ್ರಾವೆಲ್ ಇನ್ಶೂರೆನ್ಸ್! ಅಪಘಾತದಲ್ಲಿ ಸತ್ತರೆ ಕುಟುಂಬಸ್ಥರು ಕ್ಲೈಮ್ ಮಾಡೋದು ಹೇಗೆ?
ಕಂಟ್ರೋಲ್ ರೂಮ್ನಲ್ಲಿ ಎಲ್ಲರ ವಿವರ
ಒಡಿಶಾದ ರಾಜಧಾನಿ ಭುವನೇಶ್ವರದ ಮುನ್ಸಿಪಲ್ ಕಮಿಷನರ್ ಕಚೇರಿಯಲ್ಲಿ ಕಂಟ್ರೋಲ್ ರೂಮ್ ಸಹ ಸ್ಥಾಪಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವವರ ವಿವರಗಳು, ಮೃತರ ವಿವರಗಳು, ಮಾಹಿತಿ ಮತ್ತು ಮೃತ ದೇಹಗಳನ್ನು ಗುರುತಿಸಲು ಸಹಾಯ ಮಾಡಲು ಜನರು ಈ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ವೆಬ್‌ಸೈಟ್‌ಗಳ ಲಿಂಕ್ ಮೂಲಕ ರೈಲು ಅಪಘಾತಕ್ಕೊಳಗಾದವರನ್ನು ಸಹ ಪತ್ತೆಹಚ್ಚಬಹುದು ಎಂದು ಉಲ್ಲೇಖಿಸಲಾಗಿದೆ. ಆದರೆ ಮಾಧ್ಯಮಗಳು ಸೇರಿದಂತೆ ಯಾರೂ ಪೂರ್ವಾನುಮತಿ ಇಲ್ಲದೆ ರೈಲು ಅಪಘಾತಕ್ಕೊಳಗಾದವರ ಫೋಟೋಗಳನ್ನು ಪ್ರಕಟಿಸಬಾರದು ಎಂದು ರೈಲ್ವೆ ಇಲಾಖೆ ಸೂಚನೆ ನೀಡಿದೆ.

Post a Comment