ಎಂಬಿ ಪಾಟೀಲ್ ಮತ್ತು ತೇಜಸ್ವಿ ಸೂರ್ಯ
Chakravarty sulibele: ನಾವು ನ್ಯಾಯಾಲಯದ ಒಳಗೆ ಮತ್ತು ಹೊರಗೆ ಅಧಿಕಾರದ ದುರುಪಯೋಗದ ವಿರುದ್ಧ ಹೋರಾಡುತ್ತೇವೆ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮೂಕ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು: ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಚಿವ ಎಂಬಿ ಪಾಟೀಲ್ (Minister MB Patil), ಕಾಂಗ್ರೆಸ್ ಸರ್ಕಾರವನ್ನು (Congress Government) ಟೀಕಿಸಿದ್ದ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವೇಳೆ ಗಲಾಟೆ ಮಾಡಿದರೆ ಜೈಲಿಗೆ ಹಾಕಲಾಗುತ್ತದೆ ಎಂದು ಎಚ್ಚರಿಕೆ ಸಂದೇಶವನ್ನು ಸಹ ರವಾನಿಸಿದ್ದರು. ಎಂಬಿ ಪಾಟೀಲ್ ಹೇಳಿಕೆಗೆ ಬಿಜೆಪಿ (BJP) ಹಾಗೂ ಸೂಲಿಬೆಲೆ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ರಾಷ್ಟ್ರೀಯ ಬಿಜೆಪಿ ಯುವ ಘಟಕದ ಅಧ್ಯಕ್ಷ ಸಂಸದ ತೇಜಸ್ವಿ ಸೂರ್ಯ (MP Tejasvi Surya) ಟ್ವೀಟ್ ಮೂಲಕ ಎಂಬಿ ಪಾಟೀಲರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಸಚಿವ ಎಂ.ಬಿ.ಪಾಟೀಲ್ ಅವರು ಸೂಲಿಬೆಲೆ ಚಕ್ರವರ್ತಿಯವರಿಗೆ ಜೈಲು ಬೆದರಿಕೆ ಹಾಕಿರುವುದು ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಹಿಟ್ಲರ್ ಸರ್ಕಾರ ಎಂಬ ಸೂಲಿಬೆಲೆಯವರ ಆರೋಪವನ್ನು ಮತ್ತಷ್ಟು ಸಾಬೀತುಪಡಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.ಅಧಿಕಾರದ ದುರುಪಯೋಗದ ವಿರುದ್ಧ ಹೋರಾಟ
ಅಧಿಕಾರ ಸ್ವೀಕರಿಸಿದ ಹದಿನೈದು ದಿನಗಳೊಳಗೆ, ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಈ ಬಹಿರಂಗ ಬೆದರಿಕೆಗಳು ಸಿದ್ದರಾಮಯ್ಯ ಸರ್ಕಾರದ ಸಾಮಾನ್ಯ ಲಕ್ಷಣವಾಗಿದೆ. ನಾವು ನ್ಯಾಯಾಲಯದ ಒಳಗೆ ಮತ್ತು ಹೊರಗೆ ಅಧಿಕಾರದ ದುರುಪಯೋಗದ ವಿರುದ್ಧ ಹೋರಾಡುತ್ತೇವೆ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮೂಕ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಇದನ್ನೂ ಓದಿ: Elephant Attack: ಸಫಾರಿಗೆ ತೆರಳಿದ್ದ ವೇಳೆ ಕಾಡಾನೆ ದಾಳಿ, ಸ್ವಲ್ಪದರಲ್ಲೇ ಬಚಾವಾದ ವಿಚಾರವಾದಿ ಕೆಎಸ್ ಭಗವಾನ್!
ಈ ಹಿಂದೆ ಮಾಡಿದಂಗೆ ನಾಟಕ ಮಾಡಿದ್ರೆ ಜೈಲು ಪಾಲಾಗುತ್ತೀರಿ. ಈ ಮೊದಲು ಹಿಜಾಬ್ (Hijab), ಹಲಾಲ್ (Halal) ಎಂದು ಗಲಾಟೆ ಮಾಡಿದ್ದೀರಿ. ಇದಕ್ಕೆಲ್ಲ ಬ್ರೇಕ್ ಹಾಕುತ್ತೇವೆ. ಇನ್ನು ಮುಂದೆ ಅದೆಲ್ಲ ನಡೆಯಲ್ಲ. ಏನಾದರೂ ಗಲಾಟೆ ಮಾಡಿದರೆ ಜೈಲು ಕಂಬಿ ಏಣಿಸ್ತೀರಾ ಹುಷಾರ್ ಎಂದು ಎಂಬಿ ಪಾಟೀಲ್ ಹೇಳಿದ್ದರು.

Post a Comment