ನೂಡಲ್ಸ್ ತಿಂದು ಇಬ್ಬರು ಮಕ್ಕಳು ಸಾವು
ಭೂಪೇಂದ್ರ ಎಂಬುವವರ ಕುಟುಂಬದವರು ಬುಧವಾರ ರಾತ್ರಿ ಪರೋಟ ಮತ್ತು ನೂಡಲ್ಸ್ ತಿಂದಿದ್ದಾರೆ. ನಂತರ ಇಡೀ ಕುಟುಂಬ ರಾತ್ರಿ ಆರಾಮವಾಗಿ ಆದರೆ ರಾತ್ರಿ ಒಂದು ಗಂಟೆ ಸುಮಾರಿಗೆ ಭೂಪೇಂದ್ರ ಅವರ ಮೂವರು ಮಕ್ಕಳ ಸ್ಥಿತಿ ತೀವ್ರ ಹದಗೆಟ್ಟಿದೆ.ಸೋನಿಪತ್: ಇಂದಿನ ಮಕ್ಕಳು ಫಾಸ್ಟ್ ಫುಡ್ (Past food) ಅನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅವು ಆರೋಗ್ಯಕ್ಕೆ (Health) ಹಾನಿಕರ ಎಂದು ತಿಳಿದಿದ್ದರೂ ಮಕ್ಕಳು ಕೆಲವೊಮ್ಮೆ ಹಠ ಮಾಡಿ ತಿನ್ನುತ್ತವೆ. ಪೋಷಕರು (Parents) ಕೂಡ ಕಡಿಮೆ ಸಮಯದಲ್ಲಿ ಮಾಡಬಹುದು ಎಂದು ಮಾಡಿಕೊಡುತ್ತಾರೆ. ಮತ್ತು ಕೆಲವೊಮ್ಮೆ ಪೋಷಕರು ಹೊರಗಿನ ಆಹಾರವನ್ನು ತಂದು ಮಕ್ಕಳಿಗೆ ನೀಡುತ್ತಾರೆ. ಆದರೆ ಈ ಫಾಸ್ಟ್ ಫುಡ್ ಇಬ್ಬರು ಮಕ್ಕಳ ಪ್ರಾಣವನ್ನೇ ತೆಗೆದಿದೆ. ಇಂತಹ ಪ್ರಕರಣ ಹರಿಯಾಣದ (Haryana) ಸೋನಿಪತ್ನಲ್ಲಿ ಮುನ್ನೆಲೆಗೆ ಬಂದಿದೆ. ಅಲ್ಲಿ ನೂಡಲ್ಸ್, ಪರೋಟ ತಿಂದ ಮೂವರು ಮಕ್ಕಳ ಆರೋಗ್ಯ ಹದಗೆಟ್ಟಿದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ವೇಳೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮತ್ತೊಂದು ಮಗುವಿನ ಸ್ಥಿತಿಯೂ ಗಂಭೀರವಾಗಿದೆ.ಫಡ್ ಪಾಯಿಸನ್ ಶಂಕೆ

Post a Comment