ಬಂಧನ ವಾರೆಂಟ್! ಸೋಮವಾರ ಫರೀದ್‌ಪುರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ವಿಜಯ್ ಪಾಲ್ ಅವರ ಮನೆಗೆ ಆಗಮಿಸಿ ವಾರಂಟ್ ತೋರಿಸಿದರು. ಆಗ ಅದನ್ನು ನೋಡಿದ ನಿವೃತ್ತ ಬಸ್ ಚಾಲಕ ಕುಗ್ಗಿ ಹೋದರು.ಲಕ್ನೋ: 29 ವರ್ಷದ ಹಳೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾರ್ಶ್ವವಾಯು (Paralysed) ಆಗಿ ಹಾಸಿಗೆ ಹಿಡಿದಿರುವ 83 ವರ್ಷದ ನಿವೃತ್ತ ಬಸ್ ಚಾಲಕರೊಬ್ಬರಿಗೆ (Bus driver) ಬಂಧನ ವಾರಂಟ್ ಜಾರಿ (Arrest Warrent) ಮಾಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.83 ವರ್ಷದ ನಿವೃತ್ತ ಬಸ್ ಚಾಲಕ ಮುನವ್ವರ್ ಅವರು ಅನಾರೋಗ್ಯ ಕಾರಣದಿಂದ ಹಾಸಿಗೆ ಹಿಡಿದಿದ್ದು, ಎದ್ದೇಳಲೂ ಆಗದ ಸ್ಥಿತಿಯಲ್ಲಿ ಮಲಗಿದ್ದಲ್ಲೇ ಅವರ ಎಲ್ಲಾ ಕಾರ್ಯಗಳು ನಡೆಯುತ್ತಿದೆ. 29 ವರ್ಷಗಳ ಹಿಂದೆ ಅವರು ಡ್ರೈವರ್ ಆಗಿದ್ದಾಗ ಎಮ್ಮೆಯೊಂದಕ್ಕೆ ಬಸ್ ಡಿಕ್ಕಿ ಹೊಡೆದಿತ್ತು. ಹೀಗಾಗಿ ಅವರ ವಿರುದ್ಧ ಅತೀ ವೇಗದ ಚಾಲನೆ ಅಡಿ ಎಫ್‌ಐಆರ್ ದಾಖಲಾಗಿತ್ತು. ಇದೀಗ ಬರೋಬ್ಬರಿ 29 ವರ್ಷದ ನಂತರ ಅವರ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿದೆ.ಇದನ್ನೂ ಓದಿ: Tomato Prices: ಗಗನಕ್ಕೇರಿದ ಟೊಮೆಟೋ ಬೆಲೆಯಿಂದ ಗ್ರಾಹಕರು ಕಂಗಾಲು, ತರಕಾರಿ ದರ ಯಾವಾಗ ಕಡಿಮೆಯಾಗುತ್ತೆ?ಸೋಮವಾರ ಫರೀದ್‌ಪುರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ವಿಜಯ್ ಪಾಲ್ ಅವರ ಮನೆಗೆ ಆಗಮಿಸಿ ವಾರಂಟ್ ತೋರಿಸಿದರು. ಆಗ ಅದನ್ನು ನೋಡಿದ ನಿವೃತ್ತ ಬಸ್ ಚಾಲಕ ಕುಗ್ಗಿ ಹೋದರು. ಮುನವ್ವರ್ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ ಮತ್ತು ನಡೆಯುವಾಗಲೂ ಕಷ್ಟಪಡುತ್ತಾರೆ ಅನ್ನೋದನ್ನು ತಿಳಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಸಹಿ ಹಾಕಬೇಕು, ಇಲ್ಲವಾದಲ್ಲಿ ಬಲವಂತವಾಗಿ ಬಂಧಿಸಬೇಕು ಎಂದು ಹೇಳಿ ಹೋಗಿದ್ದಾರೆ.1995 ರಲ್ಲಿ ಮುನ್ವರ್ ಲಕ್ನೋದಿಂದ ಬರೇಲಿ ಮತ್ತು ಫರೀದ್‌ಪುರಕ್ಕೆ ಕೈಸರ್ ಬಾಗ್ ಡಿಪೋ ಮೂಲಕ ಚಾಲನೆ ಮಾಡುವಾಗ ಈ ಘಟನೆ ಸಂಭವಿಸಿತ್ತು. ಅಚ್ಚನ್ ಹೇಳುವ ಪ್ರಕಾರ ಏಕಾಏಕಿ ಎಲ್ಲಿಂದಲೋ ಎಮ್ಮೆಯೊಂದು ರಸ್ತೆಯಲ್ಲಿ ಬಂದಿದ್ದು, ಆ ಕ್ಷಣಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಿರಲಿಲ್ಲ. ಆಗ ಬಸ್‌ಗೆ ಎಮ್ಮೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಕುರಿತು ಫರೀದ್‌ಪುರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು. ಆ ನಂತರ ಪ್ರಕರಣ ಮುಚ್ಚಿ ಹೋಗಿದೆಯೋ ಇಲ್ಲವೋ ಅನ್ನೋದು ಗೊತ್ತಿಲ್ಲ. ಆದರೆ ಮುನವ್ವರ್ ಅವರು ಬಾರಾಬಂಕಿ ಡಿಪೋದಲ್ಲಿ ಸೇವೆಯಿಂದ ನಿವೃತ್ತರಾಗಿದ್ದಾರೆ.ಇದನ್ನೂ ಓದಿ: Rain Effect: ಉತ್ತರಾಖಂಡ್‌ನಲ್ಲಿ ರಣಭೀಕರ ಮಳೆಗೆ ಭಾರೀ ಭೂಕುಸಿತ, ಹೆದ್ದಾರಿಯಲ್ಲೇ ಸಿಲುಕಿಕೊಂಡ ಸಾವಿರಾರು ಪ್ರವಾಸಿಗರು!ಇದೆಲ್ಲದರ ಮಧ್ಯೆ ಈಗ ಮುನವ್ವರ್ ಅವರಿಗೆ ಆರೋಗ್ಯ ಹದಗೆಟ್ಟ ಕಾರಣ ನಡೆದಾಡಲು ಕಷ್ಟಕರವಾಗುತ್ತಿದೆ. ಆದರೂ ಅವರು ನ್ಯಾಯಾಲಯಕ್ಕೆ ಭೇಟಿ ನೀಡಬೇಕಾಗಿದೆ. ಮುಂದೇನಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

Post a Comment