ಸಾಂದರ್ಭಿಕ ಚಿತ್ರ ಈ ತೀರ್ಪಿನೊಂದಿಗೆ ಗಲಾಟೆಯ ಪ್ರಕರಣದ ಆರೋಪಿಗೆ ಮೂರು ವರ್ಷಗಳ ಕಾಲ ಶಿಕ್ಷೆ ನೀಡಿ ತೀವ್ರ ಗಾಯ ಮಾಡಿದ ದೋಷಿ ಎಂದು ಆದೇಶ ಹೊರಡಿಸಿದೆ.ಬೆಂಗಳೂರು: ವ್ಯಕ್ತಿಯ ವೃಷಣವನ್ನು ಹಿಸುಕುವುದು ಕೊಲೆ ಯತ್ನವಲ್ಲ, ಇದನ್ನು ಮರ್ಡರ್ ಪ್ರಕರಣ ಎಂದು ಪರಿಗಣಿಸಲಾಗುವುದಿಲ್ಲ ಎಂದು ರಾಜ್ಯ ಹೈಕೋರ್ಟ್ ಗಲಾಟೆಯೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನೊಂದಿಗೆ ಗಲಾಟೆಯ ಪ್ರಕರಣದ ಆರೋಪಿಗೆ ಮೂರು ವರ್ಷಗಳ ಕಾಲ ಶಿಕ್ಷೆ ನೀಡಿ ತೀವ್ರ ಗಾಯ ಮಾಡಿದ ದೋಷಿ ಎಂದು ಆದೇಶ ಹೊರಡಿಸಿದೆ. ʻಕೊಲೆ ಯತ್ನ’ ಅಪರಾಧದ ಅಡಿ ವಿಚಾರಣಾ ನ್ಯಾಯಾಲಯು ಆರೋಪಿಗೆ 7 ವರ್ಷ ಜೈಲು ಶಿಕ್ಷೆಯನ್ನು ನೀಡಿತ್ತು. ಆದರೆ ಇದೀಗ ರಾಜ್ಯ ಹೈಕೋರ್ಟ್ (High Court) ವ್ಯಕ್ತಿಯ ವೃಷಣವನ್ನು ಹಿಸುಕುವುದು ಕೊಲೆ ಯತ್ನವಲ್ಲ, ಆತನನ್ನು ಏಳು ವರ್ಷದ ಶಿಕ್ಷೆಗೆ ಗುರಿಪಡಿಸಲು ಸಾಧ್ಯವಿಲ್ಲ ಎಂದು ಶಿಕ್ಷೆಯನ್ನು 3 ವರ್ಷಕ್ಕೆ ಇಳಿಸಿ ನ್ಯಾಯಮೂರ್ತಿ ಕೆ. ನಟರಾಜನ್ (K. Nataraj) ತೀರ್ಪು ನೀಡಿದ್ದಾರೆ.ಪ್ರಕರಣ ಏನು?ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಮುಗಳಿಕಟ್ಟೆಯಲ್ಲಿ 2010ರ ಮಾ.15ರ ರಾತ್ರಿ ನರಸಿಂಹಸ್ವಾಮಿ ಜಾತ್ರೆಯ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಒಂದು ಪ್ರಕರಣ ನಡೆದಿದೆ.ನರಸಿಂಹಸ್ವಾಮಿ ಜಾತ್ರೆಯಲ್ಲಿ ಸಂತ್ರಸ್ತ ಓಂಕಾರಪ್ಪ ಮತ್ತು ಇತರರು ಮೆರವಣಿಗೆ ಸಂದರ್ಭ ನೃತ್ಯ ಮಾಡುತ್ತಿದ್ದರು. ಅಲ್ಲಿಗೆ ಆರೋಪಿ ಪರಮೇಶ್ವರಪ್ಪ ದ್ವಿಚಕ್ರವಾಹನದಲ್ಲಿ ಬಂದು ಜಗಳವಾಡಿದ್ದಾರೆ.ಅಲ್ಲಿಗೆ ಬೈಕ್‌ನಲ್ಲಿ ಬಂದ ಆರೋಪಿ ಪರಮೇಶ್ವರಪ್ಪ ಗಲಾಟೆ ಮಾಡಿದ್ದಾರೆ. ಗಲಾಟೆ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿದೆ.ಈ ವೇಳೆ ನಡೆಯುತ್ತಿದ್ದ ಮಾರಾಮಾರಿಯಲ್ಲಿ ಆರೋಪಿ ಪರಮೇಶ್ವರಪ್ಪ ಸಂತ್ರಸ್ತ ಓಂಕಾರಪ್ಪ ಅವರ ವೃಷಣವನ್ನು ಹಿಸುಕಿ ತೀವ್ರ ಗಾಯಗೊಳಿಸಿದ್ದಾರೆ.ಈ ಸಂಬಂಧ ಓಂಕಾರಪ್ಪ ಪೊಲೀಸ್ ಕೇಸ್ ಕೂಡ ದಾಖಲಿಸಿದರು. ಪೊಲೀಸರು ಕೇಸ್ ಸಂಬಂಧ ಆರೋಪಿಯನ್ನು ಬಂಧಿಸಿದರು. ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಪರಮೇಶ್ವರಪ್ಪ ಬಳಿಕ ಜಾಮೀನು ಪಡೆದಿದ್ದರು. ಇದನ್ನೂ ಓದಿ: ಗೋವಾದಲ್ಲಿ ಪತಿ, ಕಾರವಾರದಲ್ಲಿ ಪತ್ನಿ, ಮಗ; ಉದ್ಯಮಿ ಕುಟುಂಬ ಮೂವರು ಆತ್ಮಹತ್ಯೆಗೆ ಶರಣು! ಅಸಲಿಗೆ ಆಗಿದ್ದೇನು?ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ಟ್ರಯಲ್ ಕೋರ್ಟ್ ವಿಚಾರಣೆ ನಡೆಸಿತು. ಓಂಕಾರಪ್ಪ ಹೇಳಿಕೆಗಳನ್ನು ಪರಿಶೀಲಿಸಿ ವಿಚಾರಣಾ ನ್ಯಾಯಾಲಯವು ಐಪಿಸಿಯ ಸೆಕ್ಷನ್ 307 (ಕೊಲೆಗೆ ಯತ್ನ) ಅಡಿಯಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ, ಸೆಕ್ಷನ್ 341 (ತಪ್ಪಾದ ಸಂಯಮ) ಅಡಿಯಲ್ಲಿ ಒಂದು ತಿಂಗಳ ಜೈಲು ಶಿಕ್ಷೆ (ತಪ್ಪಾದ ಸಂಯಮ) ಮತ್ತು ಸೆಕ್ಷನ್ 504 (ಪ್ರಚೋದನೆಗೆ ಅವಮಾನ) ಅಡಿಯಲ್ಲಿ ಒಂದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತು.ಬಳಿಕ ಪರಮೇಶ್ವರಪ್ಪ ಚಿಕ್ಕಮಗಳೂರಿನ ಟ್ರಯಲ್ ಕೋರ್ಟ್ ನೀಡಿದ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.ಹೈಕೋರ್ಟ್ ಹೇಳಿದ್ದೇನು?ವಿಚಾರಣಾ ನ್ಯಾಯಾಲಯ ತೀರ್ಪಿನ ವಿರುದ್ಧ ಅರ್ಜಿ ಹಾಕಿದ್ದ ಪರಮೇಶ್ವರಪ್ಪ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್ ಓಂಕಾರಪ್ಪನವರನ್ನು ಕೊಲೆ ಮಾಡುವ ಉದ್ದೇಶ ಆರೋಪಿಗೆ ಇರಲಿಲ್ಲ ಮತ್ತು ಹೊಡೆದಾಟದ ಸಮಯದಲ್ಲಿ ಗಾಯವಾಗಿದೆ ಎಂದು ಹೈಕೋರ್ಟ್ ಹೇಳಿದೆ.ಸ್ಥಳದಲ್ಲೇ ಆರೋಪಿ ಮತ್ತು ದೂರುದಾರರ ನಡುವೆ ವಾಗ್ವಾದ ನಡೆದಿದೆ, ಆ ಜಗಳದಲ್ಲಿ ಆರೋಪಿ ವೃಷಣಗಳನ್ನು ಹಿಸುಕುವುದನ್ನು ಆಯ್ಕೆ ಮಾಡಿಕೊಂಡಿದ್ದಾನೆ.ನಂತರ ಗಾಯಾಳು ಆಸ್ಪತ್ರೆಗೆ ಕರೆದೊಯ್ಯಲಾಯಿತು ಹಾಗೂ ಅಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಅವರ ವೃಷಣಗಳನ್ನು ತೆಗೆದುಹಾಕಲಾಯಿತು, ಅದು ಗಂಭೀರವಾದ ಗಾಯವಾಗಿದೆ. ಆರೋಪಿಗಳು ಉದ್ದೇಶಪೂರ್ವಕವಾಗಿ ಅಥವಾ ಕೊಲೆ ಮಾಡುವ ಉದ್ದೇಶದೊಂದಿಗೆ ಬಂದಿದ್ದರು ಎಂದು ಪರಿಗಣಿಸಲು ಸಾಧ್ಯವಿಲ್ಲ.ಹೀಗಾಗಿ ಐಪಿಸಿ ಸೆಕ್ಷನ್ 325ರ (ಗಂಭೀರವಾಗಿ ಗಾಯಗೊಳಿಸುವ) ಅಡಿಯಲ್ಲಿ ಈ ಪ್ರಕರಣವನ್ನು ನೋಡಬಹುದಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕೊಲೆ ಯತ್ನದ ಬದಲಿಗೆ ಗಂಭೀರ ಗಾಯಗೊಳಿಸಿದ ಕಾರಣಕ್ಕೆ ಅರ್ಜಿದಾರನನ್ನು ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.ಈ ಒಂದು ಘಟನೆಯು 2010ರಲ್ಲಿ ನಡೆದಿದ್ದು, ಟ್ರಯಲ್ ಕೋರ್ಟ್ 2012 ರಲ್ಲಿ ಪರಮೇಶ್ವರಪ್ಪ ದೋಷಿ ಎಂದು ತೀರ್ಪು ನೀಡಿತು. 2012 ರಲ್ಲಿ ಸಲ್ಲಿಸಿದ ಅವರ ಮೇಲ್ಮನವಿಯನ್ನು ಈ ತಿಂಗಳ ಆರಂಭದಲ್ಲಿ ಹೈಕೋರ್ಟ್ ಇತ್ಯರ್ಥಗೊಳಿಸಿದ್ದು, ವ್ಯಕ್ತಿಯ ವೃಷಣ ಹಿಸುಕುವುದು ಕೊಲೆ ಯತ್ನವಲ್ಲ ಎಂದು 3 ವರ್ಷ ಜೈಲು ಶಿಕ್ಷೆ ನೀಡಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.

Post a Comment