MP Renukacharya ಮೇಲೆ ಕಾರ್ಯಕರ್ತರ ಒತ್ತಡ; ಏನ್ ಮಾಡ್ತಾರೆ ಮಾಜಿ ಶಾಸಕ?


 ಎಂಪಿ ರೇಣುಕಾಚಾರ್ಯ

Loksabha Election 2023: ಹೊನ್ನಾಳಿಯಲ್ಲಿರುವ ರೇಣುಕಾಚಾರ್ಯ ಮನೆಗೆ ಆಗಮಿಸಿದ ಕಾರ್ಯಕರ್ತರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ.

ದಾವಣಗೆರೆ: ವಿಧಾನಸಭಾ ಚುನಾವಣೆಯಲ್ಲಿ (Assembly Election 2023) ಸೋತರು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (Former MLA MP Renukacharya) ಹೊನ್ನಾಳಿ ಕ್ಷೇತ್ರದಲ್ಲಿ (Honnali Constituency) ಸಕ್ರಿಯರಾಗಿದ್ದಾರೆ. ಚುನಾವಣೆಯಲ್ಲಿ ಸೋತ ಬಳಿಕ ಕಾರ್ಯಕರ್ತರ ಮುಂದೆ ರೇಣುಕಾಚಾರ್ಯ ಕಣ್ಣೀರು ಹಾಕಿದ್ದರು. ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ರೂ ನನ್ನನ್ನು ಸೋಲಿಸಲಾಯ್ತು ಎಂದು ರೇಣುಕಾಚಾರ್ಯ ಬಿಕ್ಕಿ ಬಿಕ್ಕಿ ಅತ್ತಿದ್ದರು. ದಾವಣಗೆರೆ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ (Loksabha Election 2023) ಸ್ಪರ್ಧೆ ಮಾಡಬೇಕೆಂದು ರೇಣುಕಾಚಾರ್ಯ ಬೆಂಬಲಿಗರು ಒತ್ತಡ ಹಾಕುತ್ತಿದ್ದಾರೆ. ಹೊನ್ನಾಳಿಯಲ್ಲಿರುವ ರೇಣುಕಾಚಾರ್ಯ ಮನೆಗೆ ಆಗಮಿಸಿದ ಕಾರ್ಯಕರ್ತರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ.

ವಯಸ್ಸಿನ ಕಾರಣ ಸಂಸದ ಜಿಎಂ ಸಿದ್ದೇಶ್ವರ್ (MP GM Siddeshwar) ಮುಂಬರುವ ಲೊಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದಾರೆ. ಹಾಗಾಗಿ ನೀವು ಸ್ಪರ್ಧೆ ಮಾಡಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದರು.

ರೇಣುಕಾಚಾರ್ಯ ಬೆಂಬಲಿಗರ ಒತ್ತಾಯ ಏನು?

ಜಿಎಂ ಸಿದ್ದೇಶ್ವರ ನಂತರ ಜಿಲ್ಲೆಗೆ ಮಾಸ್ ಲೀಡರ್ ಬೇಕಾಗಿದ್ದು, ಕಾರ್ಯಕರ್ತರೊಂದಿಗೆ ಬೆರೆಯುವ ಉತ್ತಮ ನಾಯಕ ಬೇಕು. ಜಿಲ್ಲೆಯಲ್ಲಿ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹಾಗಾಗಿ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟುವ ನಾಯಕತ್ವ ಬೇಕು.

ಇದನ್ನೂ ಓದಿ: Karnataka Results: ಹೊನ್ನಾಳಿ ಹೋರಿಗೆ ಸೋಲಿನ ಶಾಕ್​​! ಅಭಿಮಾನಿಗಳ ಎದುರು ಗಳಗಳನೇ ಕಣ್ಣೀರಿಟ್ಟ ರೇಣುಕಾಚಾರ್ಯ!

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಸ್ಥಳೀಯವಾಗಿ ಹೆಚ್ಚು ಸೀಟ್ ಗೆದ್ದಿದೆ ದ್ವೇಷ ರಾಜಕಾರಣ ಮಾಡಿದ್ರೆ ರೇಣುಕಾಚಾರ್ಯ ಇದಕ್ಕೆ ಮದ್ದಾಗುತ್ತಾರೆ. ಜಿಲ್ಲೆಯಲ್ಲಿ ಕೆಳ ಮಟ್ಟಕ್ಕೆ ಕುಸಿದಿರುವ ಬಿಜೆಪಿ ಮೇಲೆತ್ತಲು M.P.ರೇಣುಕಾಚಾರ್ಯ ಉತ್ತಮ ನಾಯಕರು ಎಂದು ಬೆಂಬಲಿಗರು ಹೇಳುತ್ತಿದ್ದಾರೆ.

Post a Comment

Previous Post Next Post