ಈಗ #BJPvsRSS ಆಟ ಶುರುವಾಗಿದೆ. ಪಂಚೆ ಪಡೆ ಗೆಲ್ಲುವುದೋ, BSY ಬ್ರಿಗೇಡ್ ಗೆಲ್ಲುವುದೋ ಕಾಲವೇ ಉತ್ತರಿಸಲಿದೆ ಎಂದು ಕಾಂಗ್ರೆಸ್ ಹೇಳಿದೆ.Sumanth SNಬೆಂಗಳೂರು: ಕಾರ್ಯಕರ್ತರು ಕಾರ್ (Car) ಅಲುಗಾಡಿಸಿದಾಗ ಕಲಿಬೇಕಿತ್ತು ಕಲೀಲಿಲ್ಲ. ಚುನಾವಣೆಯಲ್ಲಿ (Election) ಸೋಲು ಅನುಭವಿಸಿದಾಗ ಕಲೀಬೇಕಿತ್ತು ಕಲಿತಂತೆ ಕಾಣ್ತಿಲ್ಲ. ಲೋಕಾ ಚುನಾವಣೆ (Lok Sabha Election) ಹತ್ತಿರ ಬರುತ್ತಿದೆ ಇನ್ನಾದರೂ ಕಲಿಯುತ್ತಾ ಲಕ್ಷಣ ಕಾಣಿಸುತ್ತಿಲ್ಲ. ಹೌದು, ನಾವು ಹೇಳುತ್ತಿರುವುದು ಶಿಸ್ತಿನ ಪಕ್ಷ ಬಜಪದಲ್ಲಿ (BJP) ಮರೆತು ಹೋಗಿರುವ ಶಿಸ್ತಿನ ಬಗ್ಗೆ. ಇವತ್ತು ಕೆಲವರಿಗಾದರೂ ಅದನ್ನ ಕಲಿಸುತ್ತೇವೆ ಅಂತ ಕರೆದ ಸಭೆಯಿಂದ (Meeting) ಆದರೂ ಬಿಜೆಪಿ ಉಪಯೋಗ ಆಯ್ತಾ ಅಂತ ನಾವು ಹೇಳ್ತೀವಿ ಓದಿ.ಅಧಿಕಾರದಲ್ಲಿದ್ದ ಬಿಜೆಪಿ ಅಧಿಕಾರ ಕಳ್ಕೊಂಡು ಮೂಲೆ ಗುಂಪಾಗಲು ಕಾರಣಗಳು ಹತ್ತಾರಿದ್ದರೂ ಬಿಜೆಪಿ ಪಕ್ಷದ ಒಳಜಗಳಗಳೇ ಪ್ರಮುಖವಾದವು. ಚುನಾವಣೆ ಹೊತ್ತಲ್ಲಿ ಶುರುವಾದ ಜಗಳ ಚುನಾವಣೆ ಮುಗಿದ ಮೇಲೂ ನಿಂತಿಲ್ಲ.ಬಹಿರಂಗವಾಗೇ ರೇಣುಕಾಚಾರ್ಯ ಕಟೀಲ್ ವಿರುದ್ಧ, ಬೊಮ್ಮಾಯಿ ಅವರ ವಿರುದ್ಧ, ಯತ್ನಾಳ್ ನಿರಾಣಿ ವಿರುದ್ಧ ಇರೋಬರೋ ಸಿಟ್ಟನ್ನೆಲ್ಲಾ ಹೊರ ಹಾಕ್ತಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತೆ ವರಸೆ ತೆಗೆದಿದ್ದಾರೆ. ಬಿಜೆಪಿಯವರ ಜಗಳವನ್ನೇ ಬಂಡವಾಳ ಮಾಡಿಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ಗೆ ಇವರ ಜಗಳ ಒಂಥರಾ ಹಬ್ಬದೂಟ. ಅದಕ್ಕೆ ಸಾಕ್ಷಿ ಈ ಟ್ವೀಟ್ಗಳು.ಇದನ್ನೂ ಓದಿ: Cauvery Water: ಈ ವರ್ಷ ತಮಿಳುನಾಡಿಗೆ ಕಾವೇರಿ ನೀರು ಬಿಡೋದಿಲ್ಲ! ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆಹೌದು, ಬಿಜೆಪಿ ಅಂತರಂಗದ ಸತ್ಯ ಹೇಳಿದ್ದೇವು ಅಂತ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಸವರಾಜ ಬೊಮ್ಮಾಯಿ ಅವರು #PuppetCM ಆಗಿದ್ದರು ಎಂದಿದ್ದೆವು. ಬೊಮ್ಮಾಯಿ ಅವರ ಕೈ ಕಟ್ಟಿ ಹಾಕಿದ್ದರು ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಕಟೀಲ್ ನಾಮಕವಸ್ಥೆಯ ಅಸಮರ್ಥ ಅಧ್ಯಕ್ಷರು ಎಂದಿದ್ದೆವು. ಕಟೀಲ್, ಸಂತೋಷ ಕೂಟದ ಕೈಗೊಂಬೆ ಎಂದಿದ್ದಾರೆ.ಬಿಜೆಪಿಯ ಅಂತರಂಗದ ಸತ್ಯಗಳನ್ನು ನಾವು ಮೊದಲೇ ಹೇಳಿದ್ದೆವು, ಈಗ ಅವರ ಬಾಯಲ್ಲೇ ಹೊರಬರುತ್ತಿದೆ.
👉@BSBommai ಅವರು #PuppetCM ಆಗಿದ್ದರು ಎಂದಿದ್ದೆವು.
☑️ಬೊಮ್ಮಾಯಿಯವರ ಕೈ ಕಟ್ಟಿ ಹಾಕಿದ್ದರು ಎಂದು ರೇಣುಕಾಚಾರ್ಯ ಹೇಳಿದ್ದಾರೆ.
👉@nalinkateel ನಾಮಕವಸ್ಥೆಯ ಅಸಮರ್ಥ ಅಧ್ಯಕ್ಷರು ಎಂದಿದ್ದೆವು.
☑️ ಕಟೀಲ್ ಸಂತೋಷ ಕೂಟದ ಕೈಗೊಂಬೆ…
— Karnataka Congress (@INCKarnataka) June 30, 2023
ಬಿಎಸ್ವೈ ಅವರ ಪದಚ್ಯುತಿ ಹಿಂದೆ ಸಂತೋಷ ಕೂಟದ ಆಟವಿದೆ ಎಂದಿದ್ದೆವು. ಇದೇ ವಿಷಯವನ್ನು ಇಂದು ಬಿಜೆಪಿಗರು ಹೇಳುತ್ತಿದ್ದಾರೆ. ವಲಸಿಗರನ್ನು ಬಿಜೆಪಿ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದಿದ್ದೆವು. ಈಶ್ವರಪ್ಪ ಈಗ ಹಾಗೆಯೇ ಮಾತಾಡಿದ್ದಾರೆ. ಈಗ #BJPvsRSS ಆಟ ಶುರುವಾಗಿದೆ. ಪಂಚೆ ಪಡೆ ಗೆಲ್ಲುವುದೋ, BSY ಬ್ರಿಗೇಡ್ ಗೆಲ್ಲುವುದೋ ಕಾಲವೇ ಉತ್ತರಿಸಲಿದೆ ಎಂದು ಕಾಂಗ್ರೆಸ್ ಹೇಳಿದೆ.

Post a Comment