Cauvery Water: ಈ ವರ್ಷ ತಮಿಳುನಾಡಿಗೆ ಕಾವೇರಿ ನೀರು ಬಿಡೋದಿಲ್ಲ! ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ


  ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ, ಆ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ನವದೆಹಲಿ: ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ದೆಹಲಿ ಪ್ರವಾಸದಲ್ಲಿದ್ದಾರೆ. ಡಿಸಿಎಂ (DCM) ಆದ ಬಳಿಕ ಮೊದಲ ಬಾರಿಗೆ ಸೋನಿಯಾ ಗಾಂಧಿ (Sonia Gandhi) ಅವರನ್ನು ಭೇಟಿಯಾಗಿದ್ದಾರೆ. ಇನ್ನು ಮೇಕೆದಾಟು (Mekedatu) ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆಶಿ ಮಾತನಾಡಿದ್ದು, ಪ್ರಕರಣ ಕೋರ್ಟ್‌ನಲ್ಲಿದೆ. ನಮ್ಮ ಕಾನೂನು ತಜ್ಞರ ಜೊತೆ ಚರ್ಚೆ ಮಾಡ್ತೀನಿ. ಕಳೆದ ವರ್ಷ ತಮಿಳುನಾಡಿಗೆ (Tami Nadu) 700 ಟಿಎಂಸಿ ನೀರು ಬಿಟ್ಟಿಟ್ಟಿದ್ದೆವು. ನೀರು ನಿರ್ವಹಣೆ ಕುರಿತಾಗಿ ಕೇಂದ್ರ ಮಟ್ಟದ ಸಭೆ ಇದೆ. ಕೆಎಸ್‌ಆರ್‌ನಲ್ಲೇ (KRS) ಮೀಟಿಂಗ್ ಮಾಡ್ತೀವಿ. ಕೇಂದ್ರ, ತಮಿಳುನಾಡು ಟೀಂ ಬರ್ತಾರೆ. ಅವರಿಗೆ ವಾಸ್ತವ ತಿಳಿಸಲಾಗುತ್ತದೆ ಅಂತ ಹೇಳಿದರು.ನೀರು ನಿರ್ವಹಣೆ ಕುರಿತಾಗಿ ಕೇಂದ್ರ ಮಟ್ಟದ ಸಭೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಮೇಕೆದಾಟು ವಿಚಾರವಾಗಿ ನಮ್ಮ ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತೇನೆ. ಸದ್ಯ ಪ್ರಕರಣ ಕೋರ್ಟ್ ನಲ್ಲಿದೆ. ಯೋಜನೆಯ ಅಂದಾಜು ವೆಚ್ಚ ಜಾಸ್ತಿಯಾಗಿದೆ. ಕಳೆದ ವರ್ಷ ತಮಿಳುನಾಡಿಗೆ 700 ಟಿಎಂಸಿ ನೀರು ಬಿಟ್ಟಿದೆ. ನೀರು ನಿರ್ವಹಣೆ ಕುರಿತಾಗಿ ಕೇಂದ್ರ ಮಟ್ಟದ ಸಭೆ ಇದೆ, ಅದನ್ನು ಕೆಆರ್​ಎಸ್ ನಲ್ಲಿ ಮೀಟಿಂಗ್ ಇಟ್ಟು, ವಾಸ್ತವ ತಿಳಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: Bengaluru Mysuru ಹೆದ್ದಾರಿಯಲ್ಲಿ ಸರಣಿ ಕಾರು ಅಪಘಾತ; ಐವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರಯೋಜನೆಗಳಿಗೆ ಹೆಚ್ಚಿನ ಹಣಕ್ಕೆ ಮನವಿ ಕೃಷ್ಣ ಮೇಲ್ದಂಡೆ ಯೋಜನೆ ವಿಚಾರ ಪ್ರತಿಕ್ರಿಯೆ ನೀಡಿ, ಐದು ಸಾವಿರ ಕೋಟಿ ಕೇಂದ್ರ ಸರ್ಕಾರ ಅನುದಾನ ಬಿಡುಗಡೆಯಾಗಿದೆ. ಎಐಬಿಪಿಯಿಂದ ಅನುದಾನ ಪಡೆಯಲು ಕೇಂದ್ರ ಸರ್ಕಾರ ಹೇಳಿದೆ, ಆದರೆ ಇದು ರಾಷ್ಟ್ರೀಯ ಯೋಜನೆ ಅಂತಾ ಘೋಷಿಸಲು ಮನವಿ ಮಾಡಿದೆ. ಎಐಬಿಪಿಯಲ್ಲಿ 60:40 ಹಣ ನೀಡಲಾಗುತ್ತೆ, ಹೀಗಾಗಿ ಹಣಕಾಸು ಇಲಾಖೆ ಜೊತೆಗೆ ಚರ್ಚಿಸಲು ನಿರ್ಧರಿಸಿದೆ. ಇನ್ನು ಕೆಲವು ಯೋಜನೆಗಳಿಗೆ ಹೆಚ್ಚಿನ ಹಣಕ್ಕೆ ಮನವಿ ಮಾಡಿದೆ ಎಂದು ತಿಳಿಸಿದರುವಾಸ್ತವಾಂಶ ಅರ್ಥ ಮಾಡಿಕೊಂಡು ಮಾತುಕತೆ ಮೂಲಕ ಬಗೆಹರಿಸಬೇಕುನಿನ್ನೆ ರಾತ್ರಿ ಕೇಂದ್ರ ಸಚಿವರನ್ನು ಭೇಟಿಯಾಗಿದ್ದೇನೆ, ಪೆನ್ನಾರ್ ನದಿ ನ್ಯಾಯಾಧಿಕರಣ ಮಾಡುವುದಕ್ಕೆ ತಮಿಳುನಾಡು ತಕರಾರು ತೆಗೆದಿದೆ. ಸುಪ್ರೀಂ ಕೋರ್ಟ್ ಟ್ರಿಬುನಲ್‌ ಮಾಡಲು ಹೇಳಿದೆ, ಬೆಂಗಳೂರು ವೇಸ್ಟ್ ವಾಟರ್ ಟ್ರೀಟ್ ಮಾಡಿ ಕೋಲಾರಕ್ಕೆ‌ ಕಳುಹಿಸುತ್ತಿದ್ದೇವೆ. ಕೇಂದ್ರ ಸರಕಾರವೇ ಪ್ರಶಂಸೆ ವ್ಯಕ್ತಪಡಿಸಿತ್ತು, ಆದರೆ ತಮಿಳುನಾಡು ಸರ್ಕಾರ ತಕರಾರು ಎತ್ತಿದೆ.5ನೇ‌ ತಾರೀಖು ಒಳಗಡೆ ಟ್ರಿಬ್ಯುನಲ್ ರಚನೆಗೆ ಸುಪ್ರೀಂ ಕೋರ್ಟ್ ಆದೇಶ ಇದೆ. ಮಾರ್ಕಂಡೇಯ ಕುಡಿಯುವ ನೀರಿನ ಡ್ಯಾಂ ಪ್ರಾಜೆಕ್ಟ್ ಇದೆ, ಟ್ರಿಬುನಲ್ ರಚನೆಯಿಂದ ಸಮಸ್ಯೆ ಆಗುವುದಿಲ್ಲ. ಆದರೂ ಟ್ರಿಬ್ಯುನಲ್ ರಚನೆ ಮಾಡುವುದು ಬೇಡ ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇವೆ. ವಾಸ್ತವಾಂಶ ಅರ್ಥ ಮಾಡಿಕೊಂಡು ಮಾತುಕತೆ ಮೂಲಕ ಬಗೆಹರಿಸಬೇಕು. ನ್ಯಾಯಾಧಿಕರಣ ಆಗದೆ ಇರುವುದಕ್ಕೆ ಪ್ರಯತ್ನ ಮಾಡುತ್ತೇವೆ ಎಂದರು.ಬೆಂಗಳೂರು ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆಮಹದಾಯಿ ಯೋಜನೆಗೆ ಪರಿಸರ ಅನುಮತಿ ಸಿಕ್ಕಿಲ್ಲ, ಮುಂದಿನ ದಿನಗಳಲ್ಲಿ ಅರಣ್ಯ ಸಚಿವರನ್ನು ಭೇಟಿ ಮಾಡುತ್ತೇನೆ. ಉಳಿದಂತೆ ಬೆಂಗಳೂರಿಗರಿಗೆ ಕುಡಿಯುವುದಕ್ಕೆ ನೀರಿಲ್ಲ, ಕೆಎಸ್​ಆರ್ ನಲ್ಲೇ ಮೀಟಿಂಗ್ ಮಾಡಿ ಕೇಂದ್ರ, ತಮಿಳು ನಾಡು ತಂಡವನ್ನು ಕರೆದು ವಸ್ತುಸ್ಥಿತಿ ಮನವರಿಕೆ ಮಾಡ್ತೀವಿ. ಬೆಂಗಳೂರು ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ, ಆ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದಿದ್ದಾರೆ.

Post a Comment

Previous Post Next Post