Explained: ಕರ್ನಾಟಕದಲ್ಲಿ ಗೋಹತ್ಯೆ ವಿರೋಧಿ ಕಾನೂನು ಕುರಿತು ಬಿಜೆಪಿ ಕಾಂಗ್ರೆಸ್ ಜಟಾಪಟಿ; ಪ್ರತಿಭಟನೆ ಕೈಗೊಂಡಿದೆ ಈ ಪಕ್ಷ!


 ಸಾಂದರ್ಭಿಕ ಚಿತ್ರ ಗೋಹತ್ಯೆ ವಿರೋಧಿ ಕಾನೂನನ್ನು ಕಾಂಗ್ರೆಸ್ ಹಿಂಪಡೆದುಕೊಳ್ಳಲು ನಾವು ಅನುಮತಿಸುವುದಿಲ್ಲ, ಇಂತಹ ಕ್ರಮದ ವಿರುದ್ಧ ನಾವು ಪ್ರತಿಭಟನೆ ಕೈಗೊಳ್ಳಲಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಎಂಎಲ್‌ಸಿ ಎನ್. ರವಿಕುಮಾರ್ ಎಚ್ಚರಿಸಿದ್ದಾರೆ.

ಗೋಹತ್ಯೆ ತಡೆ ಕಾಯ್ದೆಯನ್ನು (Cow Slaughter Act) ಹಿಂಪಡೆಯುವುದಾಗಿ ನೀಡಿರುವ ಸುಳಿವು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ನೀಡಿರುವ ಹೇಳಿಕೆ ಕರ್ನಾಟಕದಲ್ಲಿ ರಾಜಕೀಯ ಸಂಘರ್ಷಕ್ಕೆ ದಾರಿಮಾಡಿಕೊಟ್ಟಿದೆ. ಬಿಜೆಪಿ ಆಡಳಿತದ ಸಮಯದಲ್ಲಿ ಗೋಹತ್ಯೆ-ವಿರೋಧಿ ಕಾನೂನನ್ನು ಪ್ರಮುಖ ಆದ್ಯತೆಯಾಗಿ ಪರಿಗಣಿಸಿತ್ತು ಅಂತೆಯೇ ಈ ಪ್ರಯುಕ್ತ ಕಾನೂನನ್ನು ಜಾರಿಗೆ ತಂದಿತ್ತು. ಪ್ರಸ್ತುತ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ (Congress) ಪಕ್ಷ ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯುವ ಮೂಲಕ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡುವ ಕಾರ್ಯಕ್ಕೆ ನಾಂದಿ ಹಾಡಿದಂತಿದೆ. ಇದನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ಕೈಗೊಳ್ಳಲು ಬಿಜೆಪಿ (BJP) ನಿರ್ಧರಿಸಿದ್ದು ಕಾಂಗ್ರೆಸ್ ಸರಕಾರದ ಘೋಷಣೆಗೆ ಆಕ್ರೋಶ ವ್ಯಕ್ತಪಡಿಸಿದೆ.

ಗೋಹತ್ಯೆ ವಿರೋಧಿ ಕಾನೂನನ್ನು ಕಾಂಗ್ರೆಸ್ ಹಿಂಪಡೆದುಕೊಳ್ಳಲು ನಾವು ಅನುಮತಿಸುವುದಿಲ್ಲ, ಇಂತಹ ಕ್ರಮದ ವಿರುದ್ಧ ನಾವು ಪ್ರತಿಭಟನೆ ಕೈಗೊಳ್ಳಲಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಎಂಎಲ್‌ಸಿ ಎನ್. ರವಿಕುಮಾರ್ ಎಚ್ಚರಿಸಿದ್ದಾರೆ. ಸರ್ಕಾರ ತನ್ನ ಯೋಜನೆಗಳನ್ನು ಬದಲಾಯಿಸದಿದ್ದರೆ ನಾವು ನಮ್ಮ ಆಂದೋಲನವನ್ನು ತೀವ್ರಗೊಳಿಸುವುದಾಗಿ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಜಾರಿಯಾಗಿರುವ ಗೋಹತ್ಯೆ ವಿರೋಧಿ ಕಾನೂನು

ಫೆಬ್ರವರಿ 2021 ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಅಂಗೀಕರಿಸಿದ ಗೋವುಗಳ ಹತ್ಯೆ ತಡೆಗಟ್ಟುವಿಕೆ ಹಾಗೂ ಸಂರಕ್ಷಣೆ ಕಾಯ್ದೆ 2020 ಅನ್ನು ಎತ್ತುಗಳು, ಹೋರಿ, ಕರುಗಳ ಸಂರಕ್ಷಣೆಗೂ ಅನ್ವಯಿಸಲಾಗಿದೆ.ಇದನ್ನೂ ಓದಿ: ಕುಮಾರಸ್ವಾಮಿ ಅವರನ್ನು ನಾವೇ ನಮ್ಮ ಕೈಯಾರೆ ಸೋಲಿಸಿದೆವು: ಎಚ್‌ಡಿ ರೇವಣ್ಣ[ಭಾರತೀಯ ನೀತಿಗೆ ಕಾಂಗ್ರೆಸ್ ಅಡ್ಡಿಜನರು ಅನುಸರಿಸುವ ಭಾರತೀಯ ನೀತಿಗೆ ಕಾಂಗ್ರೆಸ್ ಎದುರಾಗಿದೆ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಗೋಹತ್ಯೆ ತಡೆ ಕಾಯ್ದೆಯನ್ನು ರದ್ದುಗೊಳಿಸುವುದು ಎಂದು ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜನರೊಂದಿಗೆ ಸರಣಿ ಸಮಾಲೋಚನೆ ನಡೆಸಿ ಬಿಜೆಪಿ ಗೋಹತ್ಯೆ ತಡೆಗೆ ಕಾನೂನು ರೂಪಿಸಿತ್ತು. ಬಿಜೆಪಿ ಅದನ್ನು ಅಂಗೀಕರಿಸಿದಾಗಲೂ ಕಾಂಗ್ರೆಸ್ ಆಕ್ಷೇಪ ಎತ್ತಿತ್ತು ಎಂದು ಹೇಳಿದ್ದಾರೆ.ಇದನ್ನೂ ಓದಿ: ಕಾಮನಬಿಲ್ಲು ಮೂಡಿಸೋ ಸುಂದರ ಜಲಪಾತವಿದು, ಮಳೆಗಾಲದಲ್ಲಿ ಮಿಸ್ ಮಾಡ್ಬೇಡಿ“ಕಾಂಗ್ರೆಸ್ ನಾಯಕರು, ಸಚಿವರು ಮತ್ತು ಸರ್ಕಾರವು ಕಾಯ್ದೆಯನ್ನು ಹಿಂಪಡೆದು ಪಠ್ಯಪುಸ್ತಕಗಳನ್ನು ಪರಿಷ್ಕರಿಸುತ್ತದೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಗುರಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ" ಎಂದು ತಿಳಿಸಿದ್ದಾರೆ.ಅಧಿಕಾರ ಕೈಯಲ್ಲಿದೆ ಎಂದು ಬಯಸಿದಂತೆ ನಿರ್ಧಾರಕೈಗೊಳ್ಳುವುದು ಉಚಿತವಲ್ಲಬಿಜೆಪಿಯ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ಸಚಿವರಿಗೆ ಮನವಿ ಸಲ್ಲಿಸಿ, ಜನರ ಭಾವನೆಗಳಿಗೆ ಸಹಾನುಭೂತಿ ನೀಡಬೇಕು, ಬೆಲೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.ತೀವ್ರ ಪ್ರತಿಭಟನೆ ಕೈಗೊಳ್ಳಲಿದ್ದೇವೆ ಬಿಜೆಪಿ ಎಚ್ಚರಿಕೆಜನರು ನಿಮಗೆ ಮತ ಹಾಕಿದ್ದಾರೆ ಮತ್ತು ನೀವು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದೀರಿ. ಆದರೆ, ನೀವು ಎಲ್ಲಾ ಅಧಿಕಾರಗಳನ್ನು ಹೊಂದಿದ್ದೀರಿ ಮತ್ತು ನೀವು ಬಯಸಿದಂತೆ ಮಾಡಿ ಎಂಬುದು ಇದರ ಅರ್ಥವಲ್ಲ. ಗೋಹತ್ಯೆ ನಿಷೇಧ ಕಾನೂನಿಗೆ ನೀವು ತಿದ್ದುಪಡಿ ಮತ್ತು ಬದಲಾವಣೆಗಳನ್ನು ತಂದರೆ, ಬಿಜೆಪಿ ಸದಸ್ಯರು ಇದನ್ನು ಕಟ್ಟುನಿಟ್ಟಾಗಿ ವಿರೋಧಿಸುತ್ತಾರೆ ಮತ್ತು ಯಾವುದೇ ಕ್ರಮದ ವಿರುದ್ಧ ಹೋರಾಡುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಪೂಜಾರಿ ತಿಳಿಸಿದ್ದಾರೆ.

ಬಿಜೆಪಿ ಆಡಳಿತದಲ್ಲಿದ್ದಾಗ, ರೈತರನ್ನು ಬೆಂಬಲಿಸಲು ಮತ್ತು ಗೋವುಗಳನ್ನು ರಕ್ಷಿಸಲು ಗೋಹತ್ಯೆ ನಿಷೇಧ ಮಸೂದೆಯನ್ನು ಉಭಯ ಸದನಗಳಲ್ಲಿ ತಂದಿತು. ಹಿಂದೂಗಳು ಹಸುವನ್ನು ಪೂಜಿಸುವುದರಿಂದ ಇದು ಕಾನೂನಾಗಿ ಮಾರ್ಪಟ್ಟಿದೆ ಮತ್ತು ಅವುಗಳನ್ನು ರಕ್ಷಿಸುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

Post a Comment

Previous Post Next Post