ಎಚ್‌ಡಿ ರೇವಣ್ಣ
ನಾನು ಸ್ವರೂಪ್ ಅವರಿಗೆ ಹೇಳೋದು ಇಷ್ಟೇ, ನಾವಾಗಿ ಯಾರಿಗೂ ತೊಂದರೆ ಕೊಡುವುದು ಬೇಡ. ನಮ್ಮ ಕೈಲಾದ ಒಳ್ಳೆಯ ಕೆಲಸ ಮಾಡೋಣ. ಯಾವುದೇ ಸಮಾಜಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಎಚ್.ಡಿ.ರೇವಣ್ಣ ಹೇಳಿದರು.
ಹಾಸನ: ಸಕಲೇಶಪುರದ (Sakaleshpur) ಮಾಜಿ ಶಾಸಕ ಎಚ್‌ಕೆ ಕುಮಾರಸ್ವಾಮಿ (HK Kumaraswamy) ಅವರನ್ನು ನಮ್ಮ ಕೈಯಾರೆ ಸೋಲಿಸಿದೆವು. ಅವರು ಸೋತಿದ್ದು ನನಗೆ ತುಂಬಾ ನೋವಾಗಿದೆ. ಅವರು ಸೋಲಲು ಸಾಧ್ಯವೇ ಇರಲಿಲ್ಲ ಎಂದು ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna) ಬೇಸರ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಜೆಡಿಎಸ್‌ನ ನೂತನ ಶಾಸಕರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಎಚ್‌ಡಿ ರೇವಣ್ಣ, ಸೋಲು ಗೆಲುವುಗಳ ಬಗ್ಗೆ ಆತ್ಮಾವಲೋಕನ ಮಾಡಿದರು. ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ವರೂಪ್ ಅವರನ್ನು ಆಯ್ಕೆ ಮಾಡಿದ್ದಾರೆ. ಅವರ ತಂದೆಯಂತೆ ಕೆಲಸ ಮಾಡಲಿ, ಅವರಿಗೆ ಒಳ್ಳೆಯದಾಗಲಿ ಎಂದ ಎಚ್.ಡಿ.ರೇವಣ್ಣ, ನಾನು ಸ್ವರೂಪ್ ಅವರಿಗೆ ಹೇಳೋದು ಇಷ್ಟೇ, ನಾವಾಗಿ ಯಾರಿಗೂ ತೊಂದರೆ ಕೊಡುವುದು ಬೇಡ. ನಮ್ಮ ಕೈಲಾದ ಒಳ್ಳೆಯ ಕೆಲಸ ಮಾಡೋಣ. ಯಾವುದೇ ಸಮಾಜಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು.
ಇದನ್ನೂ ಓದಿ: Moral Policing: ನೈತಿಕ ಪೊಲೀಸ್‌ಗಿರಿ ತಡೆಯಲು ಮಂಗಳೂರಿನಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ: ಗೃಹ ಸಚಿವರ ಘೋಷಣೆ
ಅಲ್ಪ ಸಂಖ್ಯಾತರಿರಲಿ, ಕ್ರಿಶ್ಚಿಯನ್ ಸಮಾಜದವರಿರಲಿ ಎಲ್ಲಾ ಸಮಾಜದವರು ನಮ್ಮ ಕೈಹಿಡಿದಿದ್ದಾರೆ ಎಂದ ಎಚ್.ಡಿ.ರೇವಣ್ಣ, ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಕೆಲವರು ಹೇಳಿದ್ರು ರೇವಣ್ಣ ಅವರು ನನ್ನ ವಿರುದ್ಧ ಸ್ಪರ್ಧಿಸಲಿ. ಐವತ್ತು ಸಾವಿರಕ್ಕೂ ಒಂದು ಮತ ಕಡಿಮೆ ಪಡೆದರೂ ರಾಜೀನಾಮೆ ನೀಡಿ ಚುನಾವಣೆಗೆ ಹೋಗುತ್ತೇನೆ ಅಂತ. ಸ್ವರೂಪ್ ಅವರನ್ನು ಐವತ್ತು ಸಾವಿರ ಲೀಡ್‌ನಲ್ಲಿ ಸೋಲಿಸುತ್ತಾರಾ ನೋಡೋಣ ಅಂತ ಟಿಕೆಟ್ ಕೊಟ್ಟೆವು. ಆದರೆ ಜನ ಎಂಟು ಸಾವಿರ ಲೀಡ್‌ನಲ್ಲಿ ಸ್ವರೂಪ್ ಅವರನ್ನು ಗೆಲ್ಸಿದ್ರು ಎಂದು ಎಚ್.ಡಿ.ರೇವಣ್ಣ ಹೇಳಿದರು.
ಇನ್ನು ಸ್ವರೂಪ್ ಅವರ ತಂದೆ ನಾಲ್ಕು ಬಾರಿ ಶಾಸಕರಾಗಿ ಒಳ್ಳೆಯ ಮಾಡಿದ್ರು. ಅದಕ್ಕೆ ಸ್ವರೂಪ್ ಪ್ರಕಾಶ್ ಅವರನ್ನು ಗೆಲ್ಲಿಸಿದ್ದಾರೆ. ಹಾಸನ ನಗರವನ್ನು ಈ ರಾಜ್ಯದಲ್ಲಿ ನಂಬರ್ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು. ಯಾರು ಹೆದರಬೇಕಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಹೆದರಬೇಕಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಬಿಜೆಪಿ ಕಾರಣ. ಕಾಂಗ್ರೆಸ್-ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ತೆಗಿಬೇಕು ಅಂತ ಹಗಲು ರಾತ್ರಿ ಓಡಾಡುತ್ತಿದ್ದಾರೆ. ಆದರೆ ಯಾರ ಕೈಯಲ್ಲೂ ಆಗಲ್ಲ, ಬಿಜೆಪಿಗೂ ಆಗಲ್ಲ, ಕಾಂಗ್ರೆಸ್‌ಗೂ ಆಗಲ್ಲ ಎಂದರು.
ಇನ್ನು, ನಮ್ಮ ಕಾರ್ಯಕರ್ತರಿಗೆ ಎಲ್ಲೂ ನೋವಾಗಬಾರದು, ಯಾವುದೇ ಕಚೇರಿಯಲ್ಲಿ ಕೆಲಸ ಆಗಲಿಲ್ಲ ಅಂದ್ರೆ ಅಲ್ಲೇ ಹೋಗಿ ಕುಳಿತುಕೊಳ್ಳಬೇಕು. ಎಲ್ಲರೂ ಒಟ್ಟಾಗಿ ಹೋರಾಡೋಣ ಎಂದು ರೇವಣ್ಣ ಕರೆ ನೀಡಿದರು.

Post a Comment