BJP And JDS: ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಬೀಗಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಲೋಕಸಭಾ ಎಲೆಕ್ಷನ್ ಎದುರಿಸಲು ಪ್ಲಾನ್ ಮಾಡಿಕೊಳ್ಳುತ್ತಿವೆ ಎನ್ನಲಾಗುತ್ತಿದೆ.ಕಳೆದ ಎರಡು ದಿನಗಳಿಂದ ಲೋಕಸಭೆ ಎಲೆಕ್ಷನ್ನಲ್ಲಿ ಜೆಡಿಎಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದರ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ ಎಂದು ವರದಿಯಾಗ್ತಿದೆ. ಈಗಾಗಲೇ ಬಿಜೆಪಿಯ ಹೈಕಮಾಂಡ್ ಮತ್ತು ರಾಜ್ಯ ನಾಯಕರು ಚುನಾವಣೆ ತಜ್ಞರ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.ಬಿಜೆಪಿ ಮತ್ತು ಜೆಡಿಎಸ್ ಎರಡನೇ ಹಂತದ ನಾಯಕರ ನಡುವೆಯೂ ಈ ಬಗ್ಗೆ ಚರ್ಚೆಗಳು ನಡೆದಿವೆ ಎಂದು ತಿಳಿದು ಬಂದಿದೆ. ಮೈತ್ರಿ ಸಂಬಂಧ ಕುರಿತು ಸ್ಪಷ್ಟನೆ ಸಿಕ್ಕ ನಂತರವೇ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗುವ ಸಾಧ್ಯತೆಗಳಿವೆ. 2019ರ ಚುನಾವಣೆಯಲ್ಲಿ ಬಿಜೆಪಿ 28ರಲ್ಲಿ 25 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿಗಳು. ಈ ಹಿನ್ನೆಲೆ ಬಿಜೆಪಿಗೆ ಮೈತ್ರಿ ಅನಿವಾರ್ಯ ಎನ್ನಲಾಗ್ತಿದೆ. ಪ್ರಬಲವಾಗಿರುವ ಹಳೆ ಮೈಸೂರು ಭಾಗದಲ್ಲಿಯ ಕೆಲವು ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಟ್ಟು ಇನ್ನುಳಿದ ಕ್ಷೇತ್ರದಲ್ಲಿ ದಳಪತಿಗಳ ಬೆಂಬಲ ಪಡೆದುಕೊಂಡು ಚುನಾವಣೆ ಎದುರಿಸೋದು ಬಿಜೆಪಿಯ ಪ್ಲಾನ್ ಆಗಿದೆಯಂತೆ.ಇನ್ನು ಮೈತ್ರಿ ಆಫರ್ ಬರುತ್ತಿದ್ದಂತೆ ಜೆಡಿಎಸ್ ಐದು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆಯಂತೆ. ಹಾಸನ, ತುಮಕೂರು, ಮಂಡ್ಯ, ರಾಯಚೂರು, ಕೋಲಾರ ಕ್ಷೇತ್ರಗಳನ್ನು ನಮಗೆ ಕೊಡಬೇಕು ಎಂಬ ಬೇಡಿಕೆಯನ್ನು ಜೆಡಿಎಸ್ ಇರಿಸಿದೆ ಎಂದು ಹೇಳಲಾಗುತ್ತಿದೆ. ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ಕನಿಷ್ಠ ಎರಡೂ ಪಕ್ಷ 20 ಸೀಟಾದರೂ ಗೆಲ್ಲಬಹುದೆಂಬ ಲೆಕ್ಕಚಾರವನ್ನು ಬಿಜೆಪಿ ಹೊಂದಿದೆ. ಈಗಾಗಲೇ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಮೂಲಕ ಹೆಚ್ ಡಿ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Post a Comment