Karnataka BJP: ಈಶ್ವರಪ್ಪ, ಶೆಟ್ಟರ್ ಎಲ್ಲರನ್ನೂ ಮುಗಿಸಿಬಿಟ್ರಲ್ಲ, ಸ್ವಪಕ್ಷದ ವಿರುದ್ಧ ಮತ್ತೆ ಸಿಡಿದೆದ್ದ ರೇಣುಕಾಚಾರ್ಯ!


 ಎಂಪಿ ರೇಣುಕಾಚಾರ್ಯ

 ನನಗೆ ಯಾವುದೇ ಭಯ ಇಲ್ಲ,‌ ನಾನು‌ ನಿರ್ಭಯವಾಗಿ ಮಾತಾಡ್ತೀನಿ ಎಂದ ಎಂಪಿ ರೇಣುಕಾಚಾರ್ಯ, ಇವರಿಗೆ ಒಂದು ಗ್ರಾಮ ಪಂಚಾಯ್ತಿ ಎಲೆಕ್ಷನ್ ನಿಂತು ಗೆಲ್ಲೋಕೆ ಆಗಲ್ಲ ಎಂದರು. ಆಗ ಆ ವ್ಯಕ್ತಿ ಯಾರು ಎಂದು ಸುದ್ದಿಗಾರರು ಪ್ರಶ್ನೆ ಕೇಳಿದಾಗ, ಅವರ ಹೆಸರು ಇವಾಗ ನಾನು ಹೇಳಲ್ಲ. ಸಮಯ ಬಂದಾಗ ಅವರ ಹೆಸರು ಹೇಳ್ತೀನಿ ಎಂದು ಹೇಳಿದರು.
 ಬೆಂಗಳೂರು: ನಿನ್ನೆ ತಾನೆ ಸ್ವಪಕ್ಷದ (Karnataka BJP) ನಾಯಕರ ವಿರುದ್ಧವೇ ದಾಳಿ ನಡೆಸಿ ಆಕ್ರೋಶ ಹೊರ ಹಾಕಿದ್ದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (MP Renukacharya) ಇಂದು ಮತ್ತೆ ತಮ್ಮ ವಾಗ್ಯುದ್ಧಗಳನ್ನು ಮುಂದುವರೆಸಿದ್ದಾರೆ.
ಇಂದು ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ನಾನು ಯಾವತ್ತಿಗೂ ಬಿಜೆಪಿ ವಿರುದ್ಧ ಮಾತಾಡಿಲ್ಲ. ಬಿಜೆಪಿ ನನಗೆ ತಾಯಿಯ ಸಮಾನ. ಆದರೆ ಕೆಲವು ದೌರ್ಭಾಗ್ಯ ಗಳನ್ನು ಅನಿವಾರ್ಯ ವಾಗಿ ಮಾತಾಡಬೇಕಾಗುತ್ತದೆ. ಮಾಧ್ಯಮಗಳ ಮುಂದೆ ಮಾತಾಡೋದು ತಪ್ಪು ಹೌದು.. ಆದರೆ ಯಾರಿಗೋ ಅಪಮಾನ, ಅವಮಾನ ಮಾಡುವ ಅವಶ್ಯಕತೆ ನನಗಿಲ್ಲ ಎಂದರು.
ಇನ್ನು, ಅಧಿಕಾರದಲ್ಲಿ ಇದ್ದಾಗ ಯಡಿಯೂರಪ್ಪನವ್ರು ಸಿಎಂ ಸ್ಥಾನದಿಂದ ಇಳಿಯುವವರೆಗೂ ಮಾತಾಡಿದ್ರಲ್ಲ. ಶಾಸಕರ ಅಭಿಪ್ರಾಯ ಯಾಕೆ ಸಂಗ್ರಹ ಮಾಡಬೇಕಿತ್ತು ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಯಡಿಯೂರಪ್ಪರನ್ನು ಇಳಿಸಲೇಬೇಕೆಂದು ಕೆಲವರನ್ನು ಮಾತಾಡಿಸೋಕೆ ಬಿಟ್ರು. ಯಡಿಯೂರಪ್ಪರನ್ನು ಯಾವ ಪುರುಷಾರ್ಥಕ್ಕಾಗಿ ಇಳಿಸಿದ್ರಿ? ಮತ ಕೇಳೋಕೆ ಯಡಿಯೂರಪ್ಪರ ಮುಖ ಬೇಕು. ಅಧಿಕಾರ ಎಂಜಾಯ್ ಮಾಡಲು ಯಡಿಯೂರಪ್ಪ ಬೇಡ ಎಂದ ಕಿಡಿಕಾರಿದರು.
ಇದನ್ನೂ ಓದಿ: Delhi Metro: ಲಿಪ್‌ಲಾಕ್, ಹಸ್ತಮೈಥುನ ವಿಡಿಯೋ ಆಯ್ತು, ಈಗ ದೆಹಲಿ ಮೆಟ್ರೋದಲ್ಲಿ ಹಿಗ್ಗಾಮುಗ್ಗಾ ಹೊಡೆದಾಟ!
ಮೇ‌ 6ರಂದು ಬಿಜೆಪಿ ಕಚೇರಿಯಿಂದ ಒಬ್ಬರು ಫೋನ್ ಮಾಡ್ತಾರೆ. ಆಯನೂರರಲ್ಲಿ 25 ಸಾವಿರ ಜನರನ್ನು ಸೇರಿಸಬೇಕು ಅಂತಾ, ಹೊನ್ನಾಳಿಗೆ ಮೋದಿ ಬರಲಿ ನಾನು ಬೇಕಿದ್ರೆ ಲಕ್ಷ ಜನರನ್ನು ಸೇರಿಸ್ತೀನಿ. ಆದರೆ ಅಲ್ಲಿಗೆ ನಾನು ಯಾಕೆ ಕರೆದುಕೊಂಡು ಬರಲಿ. ನಾನು ಹೇಳಿದ್ದೆ ಬರಲ್ಲ ಅಂತಾ, ಅಮೇಲೆ ಅವ್ರು ಮೋದಿ ಪಕ್ಕದಲ್ಲಿ ಸೀಟು ಇದೆ ಬನ್ನಿ ಅಂದ್ರು. ಆದರೆ ನಾನು ಬರಲ್ಲ ಅಂದೆ, ಮೋದಿ, ಯಡಿಯೂರಪ್ಪ ಮುಖ ತೋರಿಸಿ ಮತ ಕೇಳಬೇಕು ಇವರಿಗೆ ಅಷ್ಟೇ ಎಂದು ರೇಣುಕಾಚಾರ್ಯ ಕಿಡಿಕಾರಿದರು.
ಯಡಿಯೂರಪ್ಪ ಸೈಕಲ್ ಓಡಿಸಿ, ಸ್ಕೂಟರ್ ಓಡಿಸಿ ಪಕ್ಷವನ್ನು ಅಧಿಕಾರಕ್ಕೆ ತಂದ್ರು. ನಾನು ಹೆತ್ತ ತಾಯಿ ಆಣೆಗೂ ಯಡಿಯೂರಪ್ಪ ನನಗೇನೂ ಹೇಳಿಕೊಟ್ಟಿಲ್ಲ. ಹಿಂದೆ ನನಗೂ ಅವರ ನಡುವೆ ತುಂಬಾ ಘರ್ಷಣೆಗಳು ಆಗಿವೆ. ಯಡಿಯೂರಪ್ಪ ಅಧಿಕಾರದಿಂದ ಇಳಿಯದೆ ಇದ್ದಿದ್ದರೆ ನಾವು ನಮ್ಮಪ್ಪನಾಣೆಗೂ ಅಧಿಕಾರದಿಂದ ಇಳಿಯೋಕೆ ಆಗ್ತಿರಲಿಲ್ಲ. ಅಣ್ಣಾಮಲೈರನ್ನು ಕರೆದುಕೊಂಡು ಬಂದು ರಾಜ್ಯದ ಉಸ್ತುವಾರಿ ಮಾಡ್ತೀರಲ್ಲ. ಈಶ್ವರಪ್ಪ, ಜಗದೀಶ್ ಶೆಟ್ಟರ್ ಎಲ್ಲರನ್ನು ಮುಗಿಸಿಬಿಟ್ರಲ್ಲ. ಬೊಮ್ಮಾಯಿ ಹೆಸರಿಗಷ್ಟೇ ಮುಖ್ಯಮಂತ್ರಿ ಆಗಿದ್ರು. ಆದರೆ ಅವರ ಎರಡು ಕೈಗಳನ್ನು ಕಟ್ಟಿ ಹಾಕಿದ್ರು ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ಹರಿಹಾಯ್ದರು.
ನಾಯಕರ ವರ್ತನೆಗಳೇ ಬಿಜೆಪಿ ರಾಜ್ಯದಲ್ಲಿ ಸೋಲಿಗೆ ಕಾರಣ ಎಂದ ಎಂಪಿ ರೇಣುಕಾಚಾರ್ಯ, ಬಿಜೆಪಿ ಕಚೇರಿಯಲ್ಲಿ ಕೆಲವರಿಗೆ ಬರೀ ಕತ್ತರಿ ಹಾಕೋದೇ ಕೆಲಸ. ಯಾರು ಮಾತಾಡ್ತಾರೆ ಅವರನ್ನು ಮುಗಿಸೋದು. ಸೋತ ಮೇಲೆ ಯಡಿಯೂರಪ್ಪ ನಮ್ಮನ್ನು, ವಿಜಯೇಂದ್ರ‌ ಕರೆದು ಮಾತಾಡಿದ್ರು. ಆದರೆ ನಮ್ಮ ಜೊತೆಗೆ ಬೇರೆಯವರು ಸೌಜನ್ಯಯುತವಾಗಿ ಮಾತಾಡಿಲ್ಲ. ರಾಜ್ಯಾಧ್ಯಕ್ಷರಾದವರು ಒಂದು ಸಾರಿ ಆದರೂ ಮಾತಾಡಿದ್ರಾ..? ಪಾರ್ಟಿ ಆಫೀಸ್ ನ್ನು ಕೆಲವರು ಕಾರ್ಪೊರೇಟ್ ಕಚೇರಿಯಾಗಿ ಮಾಡಿಕೊಂಡಿದ್ರು ಎಂದು ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Karnataka BJP: ಬಿಜೆಪಿಯಲ್ಲಿ ಜೋರಾಯ್ತು ಆಂತರಿಕ ಕಚ್ಚಾಟ; ಕಟೀಲ್​ ರಾಜೀನಾಮೆಗೆ ರೇಣುಕಾಚಾರ್ಯ ಪಟ್ಟು!ಇನ್ನು, ನನಗೆ ಯಾವುದೇ ಭಯ ಇಲ್ಲ,‌ ನಾನು‌ ನಿರ್ಭಯವಾಗಿ ಮಾತಾಡ್ತೀನಿ ಎಂದ ಎಂಪಿ ರೇಣುಕಾಚಾರ್ಯ, ಇವರಿಗೆ ಒಂದು ಗ್ರಾಮ ಪಂಚಾಯ್ತಿ ಎಲೆಕ್ಷನ್ ನಿಂತು ಗೆಲ್ಲೋಕೆ ಆಗಲ್ಲ ಎಂದರು. ಆಗ ಆ ವ್ಯಕ್ತಿ ಯಾರು ಎಂದು ಸುದ್ದಿಗಾರರು ಪ್ರಶ್ನೆ ಕೇಳಿದಾಗ, ಅವರ ಹೆಸರು ಇವಾಗ ನಾನು ಹೇಳಲ್ಲ. ಸಮಯ ಬಂದಾಗ ಅವರ ಹೆಸರು ಹೇಳ್ತೀನಿ ಎಂದು ಹೇಳಿದರು.
ಕೊವೀಡ್ ಟೈಮ್‌ನಲ್ಲಿ ರೇಣುಕಾಚಾರ್ಯ ಒಳ್ಳೆಯ ಕೆಲಸ ಮಾಡಿದ್ದ ಅಂತಾ ಹೇಳೋಕೆ ನಿಮ್ಮ ಬಾಯಿಗೆ ಏನು ಹುಳ ಬಿದ್ದಿತ್ತಾ..? ಎಂದು ಕಟುವಾಗಿಯೇ ಪ್ರಶ್ನಿಸಿದ ಎಂಪಿ ರೇಣುಕಾಚಾರ್ಯ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಎಷ್ಟೋ ಬಾರಿ ಹೇಳಿದ್ದಾರೆ. ಅವರ ಪಕ್ಷದವರಿಗೆ ರೇಣುಕಾಚಾರ್ಯ ನೋಡಿ ಕಲೀರಿ ಅಂತಾ. ಆದರೆ ನಮ್ಮವರು ಮಾತ್ರ ನನ್ನ ಬಗ್ಗೆ ಹೇಳಿಲ್ಲ. ಯಾಕೆ ರೇಣುಕಾಚಾರ್ಯ ಬೆಳದು ಬಿಡ್ತಾನೆ ಅಂತಾ ಹೇಳಿಲ್ವಾ..? ಎಂದು ಕಿಡಿಕಾರಿದರು.

Post a Comment

Previous Post Next Post