ಎಮ್ ಎಸ್ ಧೋನಿ
ಆ ಒಂದು ಓವರ್ ನಿಂದಾಗಿ ಮತ್ತೆ ಸಿಎಸ್‌ಕೆ ತಂಡವು ಮತ್ತೆ ತನ್ನ ಆಟಕ್ಕೆ ಮರಳಿತು ಮತ್ತು ಐದನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು ಈಗ ಇತಿಹಾಸವಾಗಿದೆ.ಮೊನ್ನೆ ತಾನೇ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023 ರಲ್ಲಿ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಸಿಎಸ್‌ಕೆ ತಂಡದ ಗೆಲುವಿನಲ್ಲಿ ಅನುಭವಿ ಬ್ಯಾಟರ್ ಅಂಬಾಟಿ ರಾಯುಡು ಅವರ ಪ್ರದರ್ಶನವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಆದ ಮೈಕ್ ಹಸ್ಸಿ ಅವರು ತುಂಬಾನೇ ಶ್ಲಾಘಿಸಿದ್ದಾರೆ. ಫೈನಲ್ ಪಂದ್ಯದ 13ನೇ ಓವರ್ (Over) ನಲ್ಲಿ ಹೇಗೆ ರಾಯುಡು ತಮ್ಮ ದೊಡ್ಡ ಹೊಡೆತಗಳಿಂದ ಚೆಂಡನ್ನು ಕ್ರಿಕೆಟ್ ಮೈದಾನದಲ್ಲಿರುವ ಪ್ರೇಕ್ಷಕರ ಸ್ಟ್ಯಾಂಡ್ ನಲ್ಲಿ ಹೊಡೆದರು ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ಆ ಒಂದು ಓವರ್ ನಿಂದಾಗಿ ಮತ್ತೆ ಸಿಎಸ್‌ಕೆ ತಂಡವು (CSK Team) ಮತ್ತೆ ತನ್ನ ಆಟಕ್ಕೆ ಮರಳಿತು ಮತ್ತು ಐದನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು ಈಗ ಇತಿಹಾಸವಾಗಿದೆ.ರಾಯುಡು ಅವರು ಹೊಡೆದಂತಹ ಶಾಟ್ ಗಳನ್ನು ಬಹುಶಃ ತುಂಬಾ ಕ್ರಿಕೆಟ್ ಆಟಗಾರರು ನಿಧಾನಗತಿಯ ಎಸೆತಗಳಿಗೆ ಈ ರೀತಿಯ ಶಾಟ್ ಗಳನ್ನು ಹೊಡೆಯುತ್ತಾರೆ ಎಂದು ನಾನು ಭಾವಿಸುವುದಿಲ್ಲ" ಎಂದು ಮೈಕ್ ಹಸ್ಸಿ ಪಂದ್ಯದ ನಂತರ ಹೇಳಿದರು. ಅಲ್ಲದೆ ಇವರು ಆಟಗಾರರಿಂದ ಒತ್ತಡವನ್ನು ಕಡಿಮೆ ಮಾಡುವ ಕ್ಯಾಪ್ಟನ್ ಕೂಲ್ ಧೋನಿಯ ಸಾಮರ್ಥ್ಯವನ್ನು ಅವರು ಶ್ಲಾಘಿಸಿದರು.ಧೋನಿ ಅವರ ಸಾಮರ್ಥ್ಯವನ್ನು ಕೊಂಡಾಡಿದ ಮೈಕ್ ಹಸ್ಸಿ"ಧೋನಿ ಅವರು ಒಬ್ಬ ಅದ್ಭುತ ಮನುಷ್ಯ, ಯುವ ಆಟಗಾರರಲ್ಲಿ ಒತ್ತಡವನ್ನು ಹೇಗೆ ದೂರ ಮಾಡುವುದು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಈ ಬಾರಿಯ ಐಪಿಎಲ್ ಪಂದ್ಯಗಳಲ್ಲಿ ನೀವು ಅದಕ್ಕೆ ಉತ್ತಮ ಉದಾಹರಣೆಗಳನ್ನು ನೋಡಿದ್ದೀರಿ, ಅವರು ಮೈದಾನದಲ್ಲಿ ತುಂಬಾನೇ ಶಾಂತವಾಗಿರುತ್ತಾರೆ ಮತ್ತು ಅವರು ಆಟಗಾರರಿಗೂ ಸಹ ಶಾಂತವಾಗಿರಲು ಪ್ರೇರೇಪಿಸುತ್ತಾರೆ” ಎಂದು ಹಸ್ಸಿ ಹೇಳಿದರು.ಇದನ್ನೂ ಓದಿ: ಎಂದಿಗೂ ಯಾರನ್ನೂ ಎತ್ತಿ ಹಿಡಿಯದ ಧೋನಿ, ಜಡ್ಡುನಾ ತಬ್ಬಿ ಮುದ್ದಾಡಿದ್ಯಾಕೆ? ಕಣ್ಣೀರು ಹಾಕಿದ್ಯಾಕೆ?ಪಂದ್ಯದ ನಡುವೆ ತಂತ್ರಗಾರಿಕೆಯನ್ನು ಯೋಜಿಸುವುದರಲ್ಲಿ ತುಂಬಾ ಬುದ್ಧಿವಂತರಾದ ಧೋನಿ ಮತ್ತು ತಂಡದ ಕೋಚ್ ಸ್ಟೀಫನ್ ಫ್ಲೇಮಿಂಗ್ ಒಬ್ಬರಿಗೊಬ್ಬರು ಚೆನ್ನಾಗಿ ಸಹಕರಿಸುತ್ತಾರೆ. ಅದು ಇವರಿಬ್ಬರಿಗಿರುವ ಅನುಭವದ ಪ್ರಯೋಜನವಾಗಿದೆ, ಇವರಿಬ್ಬರು ತುಂಬಾನೇ ಕೂಲ್ ಆಗಿರುತ್ತಾರೆ" ಎಂದು ಹಸ್ಸಿ ಹೇಳಿದರು.ಜಿಟಿಗೆ ಭರ್ಜರಿ ಆರಂಭ ನೀಡಿದ ಶುಬ್ಮನ್ ಮತ್ತು ಸಹಾಶುಬ್ಮನ್ ಗಿಲ್ (20 ಎಸೆತಗಳಲ್ಲಿ 39 ರನ್) ಮತ್ತು ವೃದ್ಧಿಮಾನ್ ಸಹಾ ನಡುವಿನ 67 ರನ್ ಗಳ ಜೊತೆಯಾಟವು ಜಿಟಿಗೆ ಉತ್ತಮ ಆರಂಭವನ್ನು ನೀಡಿತು. ಇದಾದ ನಂತರ ಸಹಾ ಮತ್ತು ಸಾಯಿ ಸುದರ್ಶನ್ ನಡುವೆ 64 ರನ್ ಗಳ ಜೊತೆಯಾಟ ನಡೆಯಿತು. ಸಹಾ 39 ಎಸೆತಗಳಲ್ಲಿ 54 ರನ್ ಗಳಿಸಿ ಔಟಾದರು, ಇದರಲ್ಲಿ ಐದು ಬೌಂಡರಿಗಳು ಮತ್ತು ಒಂದು ಸಿಕ್ಸರ್ ಸಹ ಇತ್ತು.ಸುದರ್ಶನ್ ಕೇವಲ 47 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಆರು ಸಿಕ್ಸರ್ ಗಳೊಂದಿಗೆ 96 ರನ್ ಗಳಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 21 ರನ್ ಗಳಿಸಿ ಮೂರನೇ ವಿಕೆಟ್ ಗೆ 81 ರನ್ ಗಳ ಜೊತೆಯಾಟ ನೀಡಿದರು. ಊಟವಿಲ್ಲದೇ ಪ್ರ್ಯಾಕ್ಟೀಸ್ ಮಾಡ್ತಿದ್ರಂತೆ ಧೋನಿ. ತುಂಬಾ ಕಷ್ಟ ಪಟ್ಟು ವಿನ್ ಆಗಿದ್ದಾರೆ ಇವ್ರು ಎಂದು ಕೋಚ್ ಹೇಳಿದ್ದಾರೆ.ನಾಲ್ಕು ಓವರ್ ಗಳಲ್ಲಿ 44 ರನ್ ಗೆ 2 ವಿಕೆಟ್ ಪಡೆದರು. ಸಿಎಸ್‌ಕೆ ಪರ ರವೀಂದ್ರ ಜಡೇಜಾ ಹಾಗೂ ದೀಪಕ್ ಚಹರ್ ತಲಾ ಒಂದೊಂದು ವಿಕೆಟ್ ಗಳನ್ನು ಪಡೆದರು.ಮಳೆಯಿಂದಾಗಿ ಮೊದಲ ದಿನ ರದ್ದಾಗಿತ್ತು ಫೈನಲ್ ಪಂದ್ಯಈ ಫೈನಲ್ ಪಂದ್ಯವು ಮೊದಲ ದಿನ ಮಳೆಯಿಂದಾಗಿ ರದ್ದಾಗಿದ್ದರೆ, ಎರಡನೇ ದಿನವೂ ಸಹ ಮಳೆಯ ಕಾಟ ಪಂದ್ಯದ ಮಧ್ಯೆ ಮುಂದುವರೆಯಿತು. ಕೊನೆಗೆ ಮಳೆ ನಿಂತ ನಂತರ ಸಿಎಸ್‌ಕೆ ಮಧ್ಯರಾತ್ರಿಯ ನಂತರದ ಇನ್ನಿಂಗ್ಸ್ ನಲ್ಲಿ ತನ್ನ ಮುಂದಿರುವ ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು.ಇದನ್ನೂ ಓದಿ: ಅದೊಂದು ಮಾತಿನಿಂದ ಧೋನಿ ಫ್ಯಾನ್ಸ್ ಮನಗೆದ್ದ ಹಾರ್ದಿಕ್ ಪಾಂಡ್ಯ!ಸಿಎಸ್‌ಕೆ ಗೆಲುವಿಗೆ 15 ಓವರ್ ಗಳಲ್ಲಿ 171 ರನ್ ಗಳ ಅವಶ್ಯಕತೆಯಿತ್ತು. ಆರಂಭಿಕ ಆಟಗಾರರಾದ ಡೆವೊನ್ ಕಾನ್ವೇ (25 ಎಸೆತಗಳಲ್ಲಿ 47 ರನ್) ಮತ್ತು ಋತುರಾಜ್ ಗಾಯಕ್ವಾಡ್ (16 ಎಸೆತಗಳಲ್ಲಿ 26 ರನ್) ಮೊದಲ ವಿಕೆಟ್ ಗೆ 74 ರನ್ ಗಳ ಜೊತೆಯಾಟ ನೀಡಿದರು.ಅಜಿಂಕ್ಯ ರಹಾನೆ 13 ಎಸೆತಗಳಲ್ಲಿ 27 ರನ್ ಗಳಿಸಿದರೆ, ಅಂಬಾಟಿ ರಾಯುಡು ಕೇವಲ 8 ಎಸೆತಗಳಲ್ಲಿ 19 ರನ್ ಗಳಿಸಿದರು. ನಂತರ ಬಂದ ನಾಯಕ ಧೋನಿ ರನ್ ಗಳಿಸದೆ ಗೋಲ್ಡನ್ ಡಕ್ ಗೆ ಔಟ್ ಆದರು.ಅಂತಿಮ ಓವರ್ ನಲ್ಲಿ ಸಿಎಸ್‌ಕೆ ತಂಡದ ಗೆಲುವಿಗೆ 13 ರನ್ ಗಳ ಅವಶ್ಯಕತೆಯಿತ್ತು. ಅಂತಿಮ 2 ಎಸೆತಗಳಲ್ಲಿ ಜಡೇಜಾ ಮ್ಯಾಚ್ ವಿನ್ನಿಂಗ್ ಸಿಕ್ಸ್ ಮತ್ತು ಬೌಂಡರಿ ಬಾರಿಸಿದ್ದರಿಂದ ಸಿಎಸ್‌ಕೆ ತಂಡವು 5ನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಯಿತು.

Post a Comment