ಮೃತ ಆರ್ಟಿಐ ಕಾರ್ಯಕರ್ತ ಹರೀಶ್ ಹಳ್ಳಿ
ಮೇ 23 ರಂದು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಆರ್ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ವಿರುದ್ಧ ಸೈಟ್ ವಿಚಾರದಲ್ಲಿ ಪ್ರಕರಣ ದಾಖಲಾಗಿತ್ತಂತೆ. ಈ ಪ್ರಕಣದ ವಿಚಾರದಲ್ಲಿ ಹರೀಶ್ರನ್ನು ವಿಚಾರಣೆ ನಡೆಸಲು ಪೊಲೀಸರು ಕರೆದುಕೊಂಡು ಹೋಗುತ್ತಿದ್ದರಂತೆ.ದಾವಣಗೆರೆ: ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ಕಬ್ಬಳ ಗ್ರಾಮದ ಆರ್ಟಿಐ ಕಾರ್ಯಕರ್ತ (RTI Activist) ಹರೀಶ್ ಹಳ್ಳಿ ನಿಗೂಢ ಸಾವನ್ನಪ್ಪಿದ್ದಾರೆ. 38 ವರ್ಷದ ಹರೀಶ್ ಹಳ್ಳಿಯನ್ನ ದಾವಣೆಗೆರೆ (Davanagere) ಪೊಲೀಸರು ಪ್ರಕರಣವೊಂದರ ವಿಚಾರಣೆಗೆ ಕರೆದೊಯ್ಯುವಾಗ ಕಾರಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದರಂತೆ. ಈ ವೇಳೆ ತೋಣಹುಣಸೆ ಬ್ರಿಡ್ಜ್ (Bridge) ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಕುಟುಂಬಸ್ಥರು ಪೊಲೀಸರ (Police) ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರೇ ಕೊಲೆ ಮಾಡಿದ್ದಾರೆಂದು ಆರೋಪಿಸುತ್ತಿದ್ದಾರೆ.ಜಿಲ್ಲೆಯಲ್ಲಿ ಸಾಕಷ್ಟು ಜನರ ವಿರೋಧ ಕಟ್ಟಿಕೊಂಡಿದ್ದ ಹರೀಶ್ ಹಳ್ಳಿ ಮೇಲೆ ಸೈಟ್‌ಗೆ ಸಂಬಂಧಿಸಿದಂತೆ ಗಾಂಧಿನಗರ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಇದೇ ಪ್ರಕರಣದಲ್ಲಿ ವಿಚಾರಣೆಗೆ ಕರೆ ತರುವಾಗ ಹರೀಶ್ ಹಳ್ಳಿ ನಿಗೂಢ ಸಾವನ್ನಪ್ಪಿದ್ದಾರೆ. ಆರ್ಟಿಐ ಕಾರ್ಯಕರ್ತ ನಿಗೂಢವಾಗಿ ಸಾವನ್ನಪ್ಪಿರುವುದಕ್ಕೆ ಪೊಲೀಸರ ಮೇಲೆ ಅನುಮಾನ ಶುರುವಾಗಿದ್ದು, ರಾತ್ರಿ 12 ಗಂಟೆಗೆ ವೇಳೆಗೆ ವಿಚಾರಣೆಗೆ ಕರೆ ತರುವಾಗ ಘಟನೆ ನಡೆದಿದೆ ಎಂಬ ಮಾಹಿತಿ ಲಬ್ಯವಾಗಿದೆ.ಇದನ್ನೂ ಓದಿ: Matrimony Site: ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಈಗ ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ!ಮೇ 23 ರಂದು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಆರ್ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ವಿರುದ್ಧ ಸೈಟ್ ವಿಚಾರದಲ್ಲಿ ಪ್ರಕರಣ ದಾಖಲಾಗಿತ್ತಂತೆ. ಈ ಪ್ರಕಣದ ವಿಚಾರದಲ್ಲಿ ಹರೀಶ್ರನ್ನು ವಿಚಾರಣೆ ನಡೆಸಲು ಪೊಲೀಸರು ಕರೆದುಕೊಂಡು ಹೋಗುತ್ತಿದ್ದರಂತೆ.ಗೆಳೆಯನನ್ನೇ ಕೊಲೆಗೈದಿದ್ದ ಆರೋಪ ಬಂಧನಚಾಕುವಿನಿಂದ ಇರಿದು ಸ್ನೇಹಿತನ ಕೊಲೆ ಮಾಡಿದ್ದ ಆರೋಪಿಯನ್ನು ಬೆಂಗಳೂರಿನ ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶ ಮೂಲದ ಮನೋಹರ್ ವರ್ಮಾ ಕೊಲೆ ಆರೋಪಿಯಾಗಿದ್ದು, ವಿರೇಂದ್ರಕುಮಾರ್ (29) ಎಂಬಾತನನ್ನು ಬಾಡಿಗೆ ಮನೆಯಲ್ಲಿ ಚಾಕುವಿನಿಂದ ಇರಿದು ಬಳಿಕ ಕಾಲಿನಿಂದ ಕುತ್ತಿಗೆಗೆ ತುಳಿದು ಆರೋಪಿ ಕೊಲೆಗೈದಿದ್ದ. ಮೇ 27ರ ರಾತ್ರಿ ನಗರದ ಸಾದರಮಂಗಲದ ಬಾಡಿಗೆ ಮನೆಯಲ್ಲಿ ಕೃತ್ಯ ನಡೆದಿತ್ತು. ವೃತ್ತಿಯಲ್ಲಿ ಪೇಂಟರ್ ಆಗಿದ್ದ ವಿರೇಂದ್ರಕುಮಾರ್ ಕೆಲಸ ಅರಸಿ ಬಂದು ಕಾಡುಗೋಡಿಯಲ್ಲಿ ನೆಲೆಸಿದ್ದ. ಆರೋಪಿ ಬಂಧಿಸಿದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Post a Comment