Karnataka Cabinet Portfolio: ಕೊನೆಗೂ ಸಿದ್ದರಾಮಯ್ಯ ಸರ್ಕಾರದ ಸಚಿವರಿಗೆ ಖಾತೆ ಹಂಚಿಕೆ, ಇಲ್ಲಿದೆ ಅಧಿಕೃತ ಪಟ್ಟಿ


  ರಾಜ್ಯ ಸಚಿವ ಸಂಪುಟದ ಸದಸ್ಯರು

ನಿನ್ನೆ ತಡರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯವರ ಸಚಿವ ಸಂಪುಟ ಖಾತೆ ಹಂಚಿಕೆಯ ಪತ್ರ ಹೊರಬಿದ್ದಿದ್ದು, ಅದರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎಲ್ಲಾ 34 ಸಚಿವರಿಗೂ ಅಧಿಕೃತವಾಗಿ ಖಾತೆ ಹಂಚಿಕೆ ಮಾಡಲಾಗಿದೆ. ಬೆಂಗಳೂರು: ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ (Congress Govt) ಸಂಪುಟ ಸಚಿವರಿಗೆ ಖಾತೆ ಹಂಚಿಕೆ (Portfolios) ಮಾಡುವುದೇ ದೊಡ್ಡ ಕಗ್ಗಂಟಾಗಿ ಪರಿಣಮಿಸಿತ್ತು. ಇದೀಗ ಎಲ್ಲ ಒತ್ತಡಗಳ ಮಧ್ಯೆಯೂ ಕಾಂಗ್ರೆಸ್‌ ಸರ್ಕಾರ ಹೊಸದಾಗಿ ಆಯ್ಕೆಯಾಗಿರುವ ಸಚಿವರಿಗೆ (New Ministers) ಖಾತೆ ಹಂಚಿಕೆ ಫೈನಲ್ ಮಾಡಿದ್ದು, ಸಂಪುಟ ಖಾತೆ ಹಂಚಿಕೆಯ ಪತ್ರಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.ನಿನ್ನೆ ತಡರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯವರ ಸಚಿವ ಸಂಪುಟ ಖಾತೆ ಹಂಚಿಕೆಯ ಪತ್ರ ಹೊರಬಿದ್ದಿದ್ದು, ಅದರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎಲ್ಲಾ 34 ಸಚಿವರಿಗೂ ಅಧಿಕೃತವಾಗಿ ಖಾತೆ ಹಂಚಿಕೆ ಮಾಡಲಾಗಿದೆ.ಯಾರ್ಯಾರಿಗೆ ಯಾವ ಖಾತೆ?ಸಿದ್ದರಾಮಯ್ಯಸಿಎಂ ಸಿದ್ದರಾಮಯ್ಯ ಅವರು ಕೆಲವು ಪ್ರಮುಖ ಖಾತೆಗಳನ್ನು ತನ್ನಲ್ಲಿಯೇ ಉಳಿಸಿಕೊಂಡಿದ್ದು, ಅದರಲ್ಲಿ ಹಣಕಾಸು, ಕ್ಯಾಬಿನೆಟ್ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ, ಗುಪ್ತಚರ, ಮಾಹಿತಿ, ಐಟಿ ಬಿಟಿ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಂಚಿಕೆಯಾಗದ ಎಲ್ಲಾ ಖಾತೆಗಳು ಸಿಎಂ ಬಳಿ ಇವೆ. ಇದನ್ನೂ ಓದಿ: KS Eshwrappa: ಕಾಂಗ್ರೆಸ್‌ನವರ ಅಮಲನ್ನು ಲೋಕಸಭಾ ಚುನಾವಣೆಯಲ್ಲಿ ಇಳಿಸಬೇಕು: ಕೆಎಸ್ ಈಶ್ವರಪ್ಪ ಕಿಡಿ ಡಿಸಿಎಂ ಡಿಕೆ ಶಿವಕುಮಾರ್ ಬಳಿ ಇರುವ ಖಾತೆಗಳುಡಿಕೆ ಶಿವಕುಮಾರ್‌ ಅವರಿಗೆ ಡಿಸಿಎಂ ಖಾತೆ ಜೊತೆಗೆ ಕೆಲವೊಂದು ಪ್ರಬಲ ಖಾತೆಗಳೂ ಒಲಿದಿದ್ದು, ಆ ಪೈಕಿ ಪ್ರಮುಖ ಮತ್ತು ಮಧ್ಯಮ ನೀರಾವರಿ, BBMP, BDA, BWSSB, BMRDA, BMRCL ಸೇರಿದಂತೆ ಬೆಂಗಳೂರು ನಗರ ಅಭಿವೃದ್ಧಿ, (ಈ ಪ್ರಾಧಿಕಾರಗಳು ನಗರ ಯೋಜನೆಗೆ ಸಂಬಂಧಿಸಿದ ಸಂಪರ್ಕ ಹೊಂದಿದೆ) ಖಾತೆಗಳು ಡಿಕೆಶಿ ಪಾಲಾಗಿವೆ.ನೂತನ ಸಚಿವರಿಗೆ ಯಾವ ಖಾತೆ?ಇನ್ನುಳಿದಂತೆ ಡಾ ಜಿ ಪರಮೇಶ್ವರ್‌ಗೆ ಗೃಹ ಖಾತೆಯನ್ನು ನೀಡಲಾಗಿದೆ. ಅದರಲ್ಲಿ ಗುಪ್ತಚರ ಇಲಾಖೆಯನ್ನು ಸಿಎಂ ತನ್ನ ಬಳಿಯೇ ಇರಿಸಿಕೊಂಡಿದ್ದಾರೆ. ಇನ್ನು ಎಚ್‌ಕೆ ಪಾಟೀಲ್‌ಗೆ ಶಾಸನ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ಜೊತೆಗೆ ಪ್ರವಾಸೋದ್ಯಮ ಖಾತೆಯನ್ನೂ ನೀಡಲಾಗಿದೆ.ಇನ್ನು ಕೆಎಚ್‌ ಮುನಿಯಪ್ಪಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ, ಗ್ರಾಹಕ ವ್ಯವಹಾರಗಳು ಖಾತೆ ನೀಡಲಾಗಿದೆ. ಸಚಿವ ರಾಮಲಿಂಗಾ ರೆಡ್ಡಿಗೆ ಸಾರಿಗೆ ಇಲಾಖೆ ಮತ್ತು ಮುಜರಾಯಿ ಇಲಾಖೆಯನ್ನು ನೀಡಲಾಗಿದೆ. ಎಂಬಿ ಪಾಟೀಲ್‌ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ, ಕೆಜೆ ಜಾರ್ಜ್‌ಗೆ ಇಂಧನ ಇಲಾಖೆ, ದಿನೇಶ್ ಗುಂಡೂರಾವ್‌ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಎಚ್‌ಸಿ ಮಹಾದೇವಪ್ಪಗೆ ಸಮಾಜ ಕಲ್ಯಾಣ ಇಲಾಖೆ, ಸತೀಶ್ ಜಾರಕಿಹೊಳಿಗೆ ಲೋಕೋಪಯೋಗಿ ಇಲಾಖೆಯ ಖಾತೆಯನ್ನು ನೀಡಲಾಗಿದೆ.ಇನ್ನು ಕೃಷ್ಣ ಭೈರೇಗೌಡ ಅವರಿಗೆ ಕಂದಾಯ ಇಲಾಖೆ ನೀಡಲಾಗಿದ್ದು, ಪ್ರಿಯಾಂಕ್‌ ಖರ್ಗೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ ಇಲಾಖೆ, ಶಿವಾನಂದ ಪಾಟೀಲ್‌ಗೆ ಸಹಕಾರ ಇಲಾಖೆ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ, ಕೃಷಿ ಮಾರುಕಟ್ಟೆ ಖಾತೆ, ಜಮೀರ್ ಅಹ್ಮದ್‌ ಖಾನ್‌ಗೆ ಗೃಹ ನಿರ್ಮಾಣ, ವಕ್ಫ್‌ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ, ಶರಣಬಸಪ್ಪ ದರ್ಶನಾಪುರ್‌ಗೆ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ, ಈಶ್ವರ್ ಖಂಡ್ರೆಗೆ ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಖಾತೆ ನೀಡಲಾಗಿದೆ.ಇನ್ನು ಎನ್‌ ಚೆಲುವರಾಯ ಸ್ವಾಮಿಗೆ ಕೃಷಿ, ಎಸ್‌ಎಸ್‌ ಮಲ್ಲಿಕಾರ್ಜುನ್‌ಗೆ ತೋಟಗಾರಿಕೆ, ಗಣಿ ಮತ್ತು ಭೂವಿಜ್ಞಾನ, ರಹೀಂ ಖಾನ್‌ಗೆ ಪುರಸಭೆ ಆಡಳಿತ ಮತ್ತು ಹಜ್‌, ಸಂತೋಷ್ ಎಸ್ ಲಾಡ್‌ಗೆ ಕಾರ್ಮಿಕ ಇಲಾಖೆ, ಶರಣು ಪ್ರಕಾಶ್ ರುದ್ರಪ್ಪ ಪಾಟೀಲ್‌ಗೆ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ಆರ್‌ಬಿ ತಿಮ್ಮಾಪುರಗೆ ಅಬಕಾರಿ ಇಲಾಖೆ, ಕೆ ವೆಂಕಟೇಶ್‌ಗೆ ಪಶುಪಾಲನೆ ಮತ್ತು ರೇಷ್ಮೆ ಕೃಷಿ, ಶಿವರಾಜ್ ತಂಗಡಗಿಗೆ ಹಿಂದುಳಿದ ವರ್ಗಗಳ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಿ ಸುಧಾಕರ್ ಯೋಜನೆ ಮತ್ತು ಅಂಕಿ ಅಂಶಗಳು, ಬಿ ನಾಗೇಂದ್ರಗೆ ಯುವಜನ ಸೇವೆ, ಕ್ರೀಡಾ ಇಲಾಖೆ, ಬುಡಕಟ್ಟು ವರ್ಗಗಳ ಅಭಿವೃದ್ಧಿ ಖಾತೆ ನೀಡಲಾಗಿದೆ.ಇದನ್ನೂ ಓದಿ: Karnataka Cabinet: ಪರಂಗೆ ಗೃಹಖಾತೆ ಬೇಡ್ವಂತೆ, ರಾಮಲಿಂಗಾರೆಡ್ಡಿಗೆ ಸಾರಿಗೆ ಸಹವಾಸ ಸಾಕಂತೆ! ಸಂಪುಟ ವಿಸ್ತರಣೆ ಬೆನ್ನಲೇ ಖಾತೆಗೆ ಕ್ಯಾತೆ!ಇನ್ನುಳಿದಂತೆ ಎನ್‌ ರಾಜಣ್ಣಗೆ ಸಹಕಾರ ಇಲಾಖೆ, ಸುರೇಶ್ ಬಿಎಸ್‌ಗೆ ನಗರಾಭಿವೃದ್ಧಿ ಇಲಾಖೆ (KUWSDB, KUIDFC ಸೇರಿದಂತೆ ಮತ್ತು ಬೆಂಗಳೂರು ನಗರ ಅಭಿವೃದ್ಧಿ ಹೊರತುಪಡಿಸಿ), ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಶೇಷಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ, ಮಂಕಾಳ್ ವೈದ್ಯಗೆ ಬಂದರು ಮತ್ತು ಮೀನುಗಾರಿಕೆ, ಒಳನಾಡು ಸಾರಿಗೆ, ಮಧು ಬಂಗಾರಪ್ಪಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಡಾ.ಎಂಸಿ ಸುಧಾಕರ್‌ಗೆ ಉನ್ನತ ಶಿಕ್ಷಣ ಇಲಾಖೆ, ಎನ್‌ಎಸ್‌ ಬೋಸರಾಜುಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ನೀಡಲಾಗಿದೆ. ಸದ್ಯ ಇದು ನೂತನ ಸರ್ಕಾರದ ಖಾತೆ ಹಂಚಿಕೆ ಅಧಿಕೃತ ಪಟ್ಟಿಯಾಗಿದ್ದು, ಖಾತೆ ಸಿಕ್ಕಿರುವ ನೂತನ ಸಚಿವರ ಪೈಕಿ ಯಾರ್ಯಾರು ಖುಷಿಯಿಂದ ಸ್ವೀಕರಿಸ್ತಾರೆ ಅಥವಾ ಯಾರ್ಯಾರು ರೆಬೆಲ್ ಆಗ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

Post a Comment

Previous Post Next Post